ಹಳ್ಳಿ ರೈತನ ಮಗಳಿಗೆ ಏಳು ಸರಕಾರಿ ಹುದ್ದೆಗಳ ಅವಕಾಶ!
ಸರಕಾರ ನಡೆಸುವ ಐಎಎಸ್, ಕೆಎಎಸ್ ಉಚಿತ ತರಬೇತಿಗೂ ಆಯ್ಕೆಯಾಗಿದ್ದರು.
Team Udayavani, Sep 19, 2020, 12:17 PM IST
Representative Image
ಬೈಲಹೊಂಗಲ: ಯಾವುದೇ ತರಬೇತಿ ಪಡೆಯದೇ ಮನೆಯಲ್ಲೇ ಅಧ್ಯಯನ ಮಾಡಿದ ಗ್ರಾಮೀಣ ಪ್ರದೇಶದ ರೈತನ ಮಗಳಿಗೆ 7 ಸರಕಾರಿ ಹುದ್ದೆಗಳ ಅವಕಾಶ ಬಂದಿದ್ದು, ಅವರು ಎಸ್‌ಐ ಹುದ್ದೆಯನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ಉಡಕೇರಿಯ ಮಧ್ಯಮ ವರ್ಗದ ಕುಟುಂಬದ ಜ್ಯೋತಿ ಮಹಾಬಳೇಶ್ವರ ಗೂಳಪ್ಪನವರ (25) ಅವರು ಬೆಳಗಾವಿಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮುಗಿಸಿದ್ದಾರೆ. ಐಪಿಎಸ್, ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದ ಜ್ಯೋತಿಗೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಪೊಲೀಸ್ ಇಲಾಖೆಯಲ್ಲಿ ಹಿರಿಯ, ಕಿರಿಯ ಬೋಧಕ (ಇನ್‌ಸ್ಟ್ರಕ್ಟರ್) ಹುದ್ದೆ ಅರಸಿ ಬಂದಿದ್ದವು.
ಸರಕಾರ ನಡೆಸುವ ಐಎಎಸ್, ಕೆಎಎಸ್ ಉಚಿತ ತರಬೇತಿಗೂ ಆಯ್ಕೆಯಾಗಿದ್ದರು. ಈ ನಡುವೆ ಪಿಎಸ್‌ಐ ಹುದ್ದೆಗೆ ಆದೇಶ ಪತ್ರ ಸಿಕ್ಕಿದ್ದು, ಅವರು ಸೆ. 21ರಂದು ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪ್ರೊಬೆಷನರಿ ಹುದ್ದೆಗೆ ಸೇರ್ಪಡೆಯಾಗಲಿದ್ದಾರೆ.
ವಾರಿಯರ್ ಕಾರ್ಯ ಶ್ಲಾಘನೀಯ
ಜಮಖಂಡಿ: ಕೊರೊನಾ ಯೋಧರಾಗಿ, ವಾರಿಯರ್ಗಳಾಗಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕೊರೊನಾ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗೆ ಆಶಾ ಕಾರ್ಯಕರ್ತೆಯರು ಜೀವನ ಹಂಗು ತೊರೆದು ಹಗಲಿರಳು ಶ್ರಮಿಸಿದ್ದಾರೆ ಎಂದು ಟಿಎಪಿಎಂಸ್ ಸೊಸೈಟಿ ಅಧ್ಯಕ್ಷ ಯೋಗಪ್ಪ ಸವದಿ ಹೇಳಿದರು.
ನಗರದ ಟಿಎಪಿಎಂಸ್ ಸೊಸೈಟಿ ಸಭಾಭವನದಲ್ಲಿ ಕೊರೊನಾ ವಾರಿಯರ್ ಹಾಗೂ ಆಶಾ ಕಾರ್ಯಕರ್ತಯರಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಸನ್ಮಾನ
ಸಮಾರಂಭದಲ್ಲಿ ಅವರು ಮಾತನಾಡಿದರು. ರಬಕವಿ-ಬನಹಟ್ಟಿ ಮತ್ತು ಜಮಖಂಡಿ ತಾಲೂಕಿನ 35 ಆಶಾ ಕಾರ್ಯಕರ್ತೆಯರಿಗೆ ತಲಾ ಒಬ್ಬರಿಗೆ 3 ಸಾವಿರ ರೂ. ಪ್ರೋತ್ಸಾಹ ಧನವನ್ನು ಟಿಎಪಿಎಂಸ್ ಸೊಸೈಟಿ ವಿತರಿಸಿದೆ ಎಂದರು.
ಉಪಾಧ್ಯಕ್ಷ ಅಮೃತಾ ದಾನಗೌಡ, ನಿರ್ದೇಶಕರಾದ ಬಿ.ಎಸ್.ಸಿಂಧೂರ, ಟಿ.ಎ.ಬಿರಾದಾರ, ಜಿ.ಎಲ್. ಮೋಪಗಾರ, ಎಂ.ಜಿ.ಹಟ್ಟಿ, ಎನ್.ಎನ್.ಕಡಪಟ್ಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.