ಶೇಮ್ ಶೇಮ್: ಬೆಂಗ್ಳೂರಲ್ಲಿ ಮತ್ತೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ
Team Udayavani, Jan 5, 2017, 9:43 AM IST
ಬೆಂಗಳೂರು: ರಾಜಧಾನಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಎಂ.ಜಿ.ರಸ್ತೆಯಲ್ಲಿ ಯುವತಿಯರ ಮೇಲೆ ಲೈಂಗಿಕ
ದೌರ್ಜನ್ಯ ನಡೆದಿದೆ ಎಂಬ ಆರೋಪ ತಣ್ಣಗಾಗುವ ಮುನ್ನಅದೇ ದಿನ ನಗರದ ಇನ್ನೊಂದು ಜಾಗದಲ್ಲಿ ನಡು ರಸ್ತೆಯಲ್ಲೇ ಯುವತಿ ಮೇಲೆ ಆಕೆಯ ಮನೆಯ ಸಮೀಪ ಪುಂಡರು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.
ಈ ದೌರ್ಜನ್ಯದ ದೃಶ್ಯಾವಳಿ ಸಿಸಿಟೀವಿ ಯಲ್ಲಿ ದಾಖಲಾಗಿದ್ದು, ಅದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ರಾಷ್ಟ್ರವ್ಯಾಪಿ ಖಂಡನೆ ವ್ಯಕ್ತವಾಗಿದೆ. ನಗರದ ಕಮ್ಮನಹಳ್ಳಿಯಲ್ಲಿ ಜ.1ರ ಮುಂಜಾನೆ ಈ ಘಟನೆ ನಡೆದಿದ್ದು, ಕಾಮುಕರ ಕೃತ್ಯವನ್ನು ಖಂಡಿಸಿ ಬಾಣಸವಾಡಿ ಪೊಲೀಸ್ ಠಾಣೆ ಮುಂದೆ ವಿಪಕ್ಷ ಬಿಜೆಪಿ ಪ್ರತಿಭಟನೆ ನಡೆಸಿದೆ. ಇನ್ನೊಂದೆಡೆ, ರಾಜಧಾನಿಯಲ್ಲೇ ಮಹಿಳೆಯರಿಗೆ ಸುರಕ್ಷತೆಯಿಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃತ್ಯ ಬೆಳಕಿಗೆ ಬಂದ ಕೆಲವೇ ಹೊತ್ತಿನಲ್ಲಿ ಶಂಕಿತ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಸ್ನೇಹಿತರ ಜತೆ ಹೊಸ ವರ್ಷಾಚರಣೆ ಪಾರ್ಟಿ ಮುಗಿಸಿ ಜ.1ರಂದು ಮುಂಜಾನೆ 2.45ರ ವೇಳೆ ಮನೆಗೆ ಮರಳುತ್ತಿದ್ದ ಯುವತಿಯನ್ನು ಆಕೆಯ ಮನೆಯ ಸಮೀಪದಲ್ಲೇ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಒಬ್ಬ ಕಿಡಿಗೇಡಿ ಆಕೆಯನ್ನು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಕೊನೆಗೆ ನೆಲಕ್ಕೆ ಬಲವಾಗಿ ತಳ್ಳಿ ಬೀಳಿಸಿದ್ದಾನೆ. ಬಳಿಕ ಆರೋಪಿಗಳಿಬ್ಬರೂ ಪರಾರಿಯಾಗಿದ್ದಾರೆ.
ಈ ಕೃತ್ಯದ ದೃಶ್ಯಾವಳಿಗಳು ಸಂತ್ರಸ್ತೆಯ ನಿವಾಸದ ಹತ್ತಿರದ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಮಾಧ್ಯಮಗಳಿಗೆ ಸ್ಥಳೀಯರು ನೀಡುವುದರೊಂದಿಗೆ ಪ್ರಕರಣ ಬಹಿರಂಗವಾಗಿದೆ. ಘಟನೆಯ ಬಗ್ಗೆ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿಲ್ಲ. ಎಂ.ಜಿ.ರಸ್ತೆಯಲ್ಲಿ ವರ್ಷಾಚರಣೆ ಸಂದರ್ಭದಲ್ಲಿ ಯುವತಿ ಯರ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಲೈಂಗಿಕ ದೌರ್ಜನ್ಯದ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದಾಗಲೇ ಕಮ್ಮನಹಳ್ಳಿಯಲ್ಲಿ ಯುವತಿಯೊಬ್ಬಳ ಮೇಲೆ ಅದಕ್ಕಿಂತಲೂ
ಕೀಳು ಮಟ್ಟದ ಲೈಂಗಿಕ ದೌರ್ಜನ್ಯ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಈ ಪ್ರಕರಣಗಳು ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದ್ದು, ಪೊಲೀಸರು ಹಾಗೂ ಸರ್ಕಾರದ ವಿರುದ್ಧ ವಿಪಕ್ಷಗಳು ಹಾಗೂ ಜನರು ಸಿಡಿದೆದ್ದಿದ್ದಾರೆ.
ಕಮ್ಮನಹಳ್ಳಿಯಲ್ಲಿ ಏನಾಯ್ತು?
ತಮ್ಮ ಸ್ನೇಹಿತರ ಜತೆಗೆ ನೂತನ ವರ್ಷಾಚರಣೆಗೆಂದು ಹೋಗಿದ್ದ ಇಬ್ಬರು ಯುವತಿಯರು ಜ.1ರ ಮುಂಜಾನೆ 2.40ರ ವೇಳೆಗೆ ಕಮ್ಮನಹಳ್ಳಿ 5ನೇ ಮುಖ್ಯರಸ್ತೆಯಲ್ಲಿರುವ ಮನೆಯತ್ತ ಬಂದಿದ್ದಾರೆ. ಮನೆ ಸಮೀಪದ ಮುಖ್ಯ ರಸ್ತೆಯಲ್ಲೇ ಆಟೋದಿಂದಿಳಿದು ಅವರು
ನಡೆದು ಹೋಗುತ್ತಿದ್ದರು. ಈ ವೇಳೆ ಒಬ್ಬ ಯುವತಿ ವೇಗವಾಗಿ ಮನೆಯತ್ತ ಹೆಜ್ಜೆ ಹಾಕಿದರೆ ಇನ್ನೊಬ್ಬಳು ಆಟೋದ ಬಾಡಿಗೆ ನೀಡಿ ನಿಧಾನವಾಗಿ ಮನೆಯತ್ತ ಹೋಗುತ್ತಿದ್ದಳು.
ಅದೇ ವೇಳೆಗೆ ನಾಲ್ಕು ಬೈಕ್‌ಗಳಲ್ಲಿ ಎಂಟು ಮಂದಿ ಪುಂಡ ಯುವಕರು ಅಲ್ಲಿಗೆ ಬಂದಿದ್ದು, ಒಂಟಿಯಾಗಿ ನಡೆದು ಹೋಗುತ್ತಿದ್ದ ಯುವತಿಯಯನ್ನು ಚುಡಾಯಿಸಿದ್ದಾರೆ. ಇದರಿಂದ ಹೆದರಿದ ಆಕೆ ವೇಗವಾಗಿ ಮನೆಯತ್ತ ಹೆಜ್ಜೆ ಹಾಕಿದಳಾದರೂ ಆಕೆಗಿಂತ ಮುಂಚೆ
ಬೈಕ್‌ನಲ್ಲಿ ಮತ್ತೆ ಅಲ್ಲಿಗೆ ಬಂದ ಇಬ್ಬರು ಯುವಕರು ರಸ್ತೆ ಬದಿ ಬೈಕ್ ನಿಲ್ಲಿಸಿದ್ದಾರೆ. ಇಬ್ಬರ ಪೈಕಿ ಒಬ್ಟಾತ ಬೈಕ್‌ನಿಂದಿಳಿದು,
ರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿ ಎಳೆದಾಡಿದ್ದಲ್ಲದೆ ಬಿಗಿದಪ್ಪಿಕೊಂಡು ಚುಂಬಿಸಿದ್ದಾನೆ.
ಇದಕ್ಕೆ ಯುವತಿ ತೀವ್ರ ವಿರೋಧ ವ್ಯಕ್ತಪಡಿಸಿದಳಾದರೂ ಆಕೆಯನ್ನು ಎಳೆದುಕೊಂಡು ತನ್ನ ಸ್ನೇಹಿತ ನಿಲ್ಲಿಸಿದ್ದ ಬೈಕ್ ಬಳಿ ಕರೆತಂದಿದ್ದಾನೆ. ಅಲ್ಲಿ ಇಬ್ಬರೂ ಸೇರಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಇಷ್ಟೆಲ್ಲಾ ಘಟನೆ ನಡೆಯುವಾಗ ಇನ್ನುಳಿದ ಮೂರು ಬೈಕ್‌ಗಳಲ್ಲಿದ್ದ ಆರು ಮಂದಿ ಮುಖ್ಯರಸ್ತೆಯಲ್ಲಿ ನಿಂತು ಘಟನೆ ವೀಕ್ಷಿಸುತ್ತಿರುವ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಪತ್ತೆಯಾಗಿವೆ. ಬೈಕ್ ಬಳಿ ಯುವತಿಯನ್ನು ಲೈಂಗಿಕವಾಗಿ ಶೋಷಿಸಿದ ನಂತರ ಒಬ್ಟಾತ ಆಕೆಯನ್ನು
ಕೆಳಗೆ ದೂಡಿದ್ದಾನೆ. ಆಕೆ ಕೆಳಗೆ ಬಿದ್ದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಘಟನೆಯಿಂದ ಭಯಗೊಂಡ ಯುವತಿ, ಮನೆಗೆ ತೆರಳಿ ತನ್ನ ಸ್ನೇಹಿತೆಯರ ಬಳಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾಳೆ ಎಂದು ಮೂಲಗಳು ವಿವರಿಸಿವೆ.
ನೆರೆಮನೆಯ ಸಿಸಿಟೀವಿಯಲ್ಲಿ ಸೆರೆ: ಮಾರನೇ ದಿನ ಯುವತಿಯರು ತಮಗೆ ಲೈಂಗಿಕ ಕಿರುಕುಳ ನೀಡಿದ ದುಷ್ಕರ್ಮಿಗಳ ಪತ್ತೆಗೆ ಅಕ್ಕಪಕ್ಕದ ಮನೆಯವರ ಸಹಾಯ ಕೇಳಿದ್ದರು. ಕೃತ್ಯ ನಡೆದ ಪ್ರದೇಶದ ಪಕ್ಕದ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿರುವುದನ್ನು
ಗಮನಿಸಿದ ಯುವತಿಯರು, ಮನೆ ನಿವಾಸಿಯನ್ನು ಭೇಟಿಯಾಗಿ ಶನಿವಾರ ರಾತ್ರಿಯ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿ ಮನೆಯ ನಿವಾಸಿ ಫ್ರಾನ್ಸಿಸ್ ಎಂಬುವರು ತಮ್ಮ ಮನೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಾಮುಕರ ಅಟ್ಟಹಾಸ ಬಯಲಾಗಿದೆ. ಕಳೆದೆರಡು ದಿನಗಳಿಂದ ಎಂ.ಜಿ.ರಸ್ತೆಯ ಪ್ರಕರಣದ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿದ್ದ ಫ್ರಾನ್ಸಿಸ್ ಅವರು, ಆಂಗ್ಲ ದೈನಿಕವನ್ನು ಸಂಪರ್ಕಿಸಿ ಯುವತಿ ಮೇಲಿನ ಲೈಂಗಿಕ ಕಿರುಕುಳದ ವಿಷಯ ಮುಟ್ಟಿಸಿದ್ದಾರೆ. ಜತೆಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನೂ ತಲುಪಿಸಿದ್ದಾರೆ.
ಸ್ವಯಂಪ್ರೇರಿತ ದೂರು ದಾಖಲು: ಈ ಲೈಂಗಿಕ ಶೋಷಣೆ ಸಂಗತಿಯನ್ನು ಆಂಗ್ಲ ಪತ್ರಿಕೆ ವರದಿಗಾರರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹಾಗೂ ಡಿಸಿಪಿ ಅಜಯ್ ಹಿಲೋರಿ ಅವರ ಗಮನಕ್ಕೆ ತಂದಿದ್ದರು. ಅಷ್ಟರಲ್ಲಿ
ಫ್ರಾನ್ಸಿಸ್ ಅವರೂ ತಮಗೆ ಪರಿಚಿತ ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರಿಗೆ ವಿಷಯ ಮುಟ್ಟಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ. ಅಧಿಕಾರಿಗಳ ಸೂಚನೆ ಮೇರೆಗೆ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರು ಘಟನೆ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಅದರನ್ವಯ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು, ತಕ್ಷಣವೇ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸ್ಥಳೀಯ ಕೆಲವು ಪುಂಡ ಯುವಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ನನ್ನ ಸ್ನೇಹಿತನಿಂದ ವಿಷಯ ತಿಳಿಯತು. ಈ ಕೃತ್ಯ ಎಸಗಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಶ್ರೀನಿವಾಸ್ ದೂರಿನಲ್ಲಿ ವಿವರಿಸಿದ್ದರು. ತಮ್ಮ ಅಧಿಕಾರಿಯಿಂದ ಸ್ವಯಂ
ಪ್ರೇರಿತವಾಗಿ ದೂರು ಪಡೆದುಕೊಂಡ ಬಾಣಸವಾಡಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ
Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.