ಕಾಶ್ಮೀರದ ಶಾರದಾ ದೇಗುಲಕ್ಕೆ ಶೃಂಗೇರಿ ಮಠದಿಂದ ವಿಗ್ರಹ
Team Udayavani, Feb 4, 2022, 7:00 AM IST
ಶೃಂಗೇರಿ: ಶಾರದೆಯ ಮೂಲನೆಲೆ ಎಂದೇ ಭಾರತೀಯರು ಭಾವಿಸಿರುವ ಶಾರದಾ ಪೀಠದಲ್ಲಿ ದೇವಿಯ ದೇವಸ್ಥಾನ ನಿರ್ಮಾಣವಾಗಬೇಕೆನ್ನುವುದು ಕೋಟ್ಯಂತರ ಭಾರತೀಯರ ಕನಸು. ಆದರೆ ಅದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರುವುದರಿಂದ ಅದಕ್ಕೆ ಕಾಲ ಕೂಡಿ ಬರಬೇಕಿದೆ. ಹಾಗೆಂದು ನಿರಾಶೆ ಪಡುವ ಅಗತ್ಯವಿಲ್ಲ, ಪಾಕ್ ಆಕ್ರಮಿತ ಕಾಶ್ಮೀರದ ಗಡಿರೇಖೆಗೆ ಸನಿಹ ವಿರುವ ತೀತ್ವಾಲ್ (ಜಮ್ಮುಕಾಶ್ಮೀರದ ಕುಪ್ವಾರಾ ಜಿಲ್ಲೆ) ಎಂಬ ಊರಿನಲ್ಲಿ ಶಾರದೆಯ ದೇಗುಲ ನಿರ್ಮಾಣ ವಾಗಲಿದೆ. ಅಲ್ಲಿಗೆ ಬೇಕಾದ ವಿಗ್ರಹ ನೀಡಲು ಶೃಂಗೇರಿ ಶಾರದಾಮಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥರು ಸಮ್ಮತಿಸಿದ್ದಾರೆ.
ವಿಶೇಷವೆಂದರೆ ಹಿಂದೆ ಶಾರದಾ ಪೀಠದಲ್ಲಿದ್ದ ಮೂಲ ವಿಗ್ರಹ ಪ್ರಸ್ತುತ ಶೃಂಗೇರಿಯ ವಿದ್ಯಾಶಂಕರ ದೇವಸ್ಥಾನ ದಲ್ಲಿದೆ. ಅದನ್ನೇ ಹೋಲುವ ವಿಗ್ರಹವನ್ನು ಶ್ರೀಮಠ ದಿಂದ ನಿರ್ಮಾಣ ಮಾಡಿ ಕೊಡ ಲಾಗುತ್ತದೆ. ಹೀಗೆಂದು ಭಾರತೀ ತೀರ್ಥ ಶ್ರೀಗಳು, ವಿಧು ಶೇಖರ ಭಾರತೀ ಶ್ರೀಗಳು, ಕಾಶ್ಮೀರದ ಶ್ರೀ ಶಾರದಾ ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರ ಪಂಡಿತ ನೇತೃತ್ವದ ಸಮಿತಿಗೆ ಭರವಸೆ ನೀಡಿದ್ದಾರೆ. ಈ ಬಗ್ಗೆ ಸಭೆ ನಡೆದು ಅಲ್ಲಿ ತೀರ್ಮಾನವಾಗಿದೆ.
ಸರ್ವಜ್ಞ ಪೀಠದ ವಾಸ್ತುಶಿಲ್ಪ:
ಕಳೆದ ಡಿ. 2ರಂದು ಇದಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ನೂತನ ಶಾರದಾ ದೇಗುಲದ ವಾಸ್ತುಶಿಲ್ಪವೂ ಹಿಂದಿನ ಸರ್ವಜ್ಞ ಪೀಠದ ಮಾದರಿಯಲ್ಲೇ ಇರಲಿದೆ. ಕಲ್ಲುಗಳಿಂದ ನಿರ್ಮಾಣವಾಗಲಿದೆ, ನಾಲ್ಕು ದಿಕ್ಕಿಗೂ ನಾಲ್ಕು ಬಾಗಿಲು ಇರಲಿದೆ. ಭಕ್ತರು ಚಳಿಗಾಲ ಬಿಟ್ಟು ಬೇರೆ ಸಮಯದಲ್ಲಿ ದೇವಿಯ ದರ್ಶನ ಪಡೆಯಬಹುದಾಗಿದೆ. ತೀತ್ವಾಲ್ ಊರಿನ ಸಮೀಪ ಕಿಶನ್‌ಗಂಗಾ ನದಿ ಹರಿಯು ತ್ತಿದೆ. ಹಿಂದೆ ಪಾಕ್ ಆಕ್ರಮಿತ ಕಾಶ್ಮೀರದ ಶಾರದಾ ಪೀಠಕ್ಕೆ ಈ ಊರಿನಿಂದಲೇ ಯಾತ್ರೆ ಆರಂಭವಾಗುತ್ತಿತ್ತು.
ಯಾವ ವಿಗ್ರಹ? :
1,200 ವರ್ಷಗಳ ಹಿಂದೆ ಶ್ರೀ ಶಂಕರಾಚಾರ್ಯರು ಪ್ರಸ್ತುತ ಪಾಕ್ ಆಕ್ರಮಿತ ಕಾಶ್ಮೀರದ ಶಾರದಾ ಪೀಠದಿಂದ ಶಾರದಾ ಮಾತೆಯ ವಿಗ್ರಹವನ್ನು ತಂದಿದ್ದರು ಎಂಬ ಐತಿಹ್ಯವಿದೆ. ಅದು ಶ್ರೀಗಂಧದ ವಿಗ್ರಹ. ಅದೀಗ ಶೃಂಗೇರಿಯ ವಿದ್ಯಾಶಂಕರ ದೇವಸ್ಥಾನದಲ್ಲಿದೆ. ಅದನ್ನೇ 1,200 ವರ್ಷಗಳ ಹಿಂದೆ ಶ್ರೀಗಳು ಪ್ರತಿಷ್ಠಾಪಿಸಿದ್ದರು. ಕಾಶ್ಮೀರದಿಂದ ಆಗಮಿಸಿದ್ದ ಸಮಿತಿ, ಈ ವಿಗ್ರಹದ ಪ್ರತಿರೂಪವನ್ನೇ ಕೇಳಿದೆ. ಇದಕ್ಕೆ ಶ್ರೀಗಳು ಒಪ್ಪಿದ್ದಾರೆ.
650 ವರ್ಷಗಳ ಹಿಂದೆ ಶೃಂಗೇರಿ ಮಠದ 12ನೇ ಪೀಠಾಧಿಪತಿಗಳಾದ ವಿದ್ಯಾರಣ್ಯರು ಪಂಚಲೋಹದ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಪ್ರಸ್ತುತ ಸರಸ್ವತೀ ಮಂದಿರದಲ್ಲಿ ಪೂಜಿಸಲ್ಪಡುತ್ತಿರುವುದು ಈ ವಿಗ್ರಹ. ಆದರೆ ಈ ವಿಗ್ರಹದ ಪ್ರತಿರೂಪವನ್ನು ಕಾಶ್ಮೀರ ಸಮಿತಿ ಕೇಳಿಲ್ಲ.
ಗಂಧದ ವಿಗ್ರಹ ಹೇಗಿದೆ? :
ವಿದ್ಯಾಶಂಕರ ದೇಗುಲ ದಲ್ಲಿ ರುವ ಶ್ರೀಗಂಧದ ವಿಗ್ರಹ ಮೂರು ಅಡಿ ಎತ್ತರ, ಎರಡು ಅಡಿ ಅಗಲವಿದೆ. ಬಲ ಭಾಗದ ಒಂದು ಕೈಯಲ್ಲಿ ಗಿಳಿ, ಇನ್ನೊಂದು ಕೈಯಲ್ಲಿ ಅಭಯ ಹಸ್ತವಿದೆ. ಎಡಭಾಗದ ಒಂದು ಕೈಯಲ್ಲಿ ಸ್ಫಟಿಕದ ಜಪಮಾಲೆ, ಇನ್ನೊಂದು ಕೈಯಲ್ಲಿ ಪುಸ್ತಕವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.