ಯಡಿಯೂರಪ್ಪ, ಶಿವನಗೌಡ ವಿರುದ್ಧ ಶರಣಗೌಡ ದೂರು
Team Udayavani, Feb 14, 2019, 12:20 AM IST
ರಾಯಚೂರು: ಆಪರೇಷನ್ ಕಮಲದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದರು.
ಗುರುಮಿಠಕಲ್‌ನಿಂದ ಬುಧವಾರ ಮಧ್ಯಾಹ್ನ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ ಶರಣಗೌಡ, ಎಸ್‌ಪಿಗೆ ಮೂರು ಪುಟಗಳ ದೂರು ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹಣದ ಆಮಿಷ ಆರೋಪದಡಿ ಬಿ.ಎಸ್. ಯಡಿಯೂರಪ್ಪ, ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಹಾಸನ ಶಾಸಕ ಪ್ರೀತಂ ಗೌಡ ಹಾಗೂ ಪತ್ರಕರ್ತ ಮರಮಕಲ್ ವಿರುದಟಛಿ ದೂರು ನೀಡಲಾಗಿದೆ. ಅಂದು ನಡೆದ ಘಟನೆಯ ವಿವರಣೆಯನ್ನು ನೀಡಿದ್ದು, ಜತೆಗೆ ಸಿಡಿಯನ್ನು ಎಸ್‌ಪಿಗೆ ಸಲ್ಲಿಸಲಾಗಿದೆ ಎಂದರು.
ನನ್ನನ್ನು ಎಲ್ಲಿಗೆ ಕರೆದರೂ, ಏನು ಆಮಿಷವೊಡ್ಡಿದರು, ಅಲ್ಲಿ ಯಾರ್ಯಾರು ಇದ್ದರು, ಅದಾದ ಮೇಲೆ ಯಾರು ಒತ್ತಡ ಹಾಕಿದರು, ನಮ್ಮನ್ನು ರಾಜಕೀಯವಾಗಿ ಮುಗಿಸುವುದಾಗಿ ಬಂದಂಥ ಕರೆಗಳು ಸೇರಿ ಎಲ್ಲ ವಿವರವನ್ನು ನೀಡಲಾಗಿದೆ. ಇದು ನಾವು ಮಾಡಿದ ಪೂರ್ವಯೋಜಿತ ಸಂಚು. ಸರ್ಕಾರಕ್ಕೆ ಪದೇಪದೆ ತೊಂದರೆ ನೀಡುತ್ತಿದ್ದ ಬಿಜೆಪಿಗೆ ಪಾಠ ಕಲಿಸಲು ಈ ರೀತಿ ಮಾಡಲಾಯಿತು. ಸರ್ಕಾರ ಸಂಕ್ರಾಂತಿಗೆ ಬೀಳಲಿದೆ, ಯುಗಾದಿಗೆ ಅಂತ್ಯವಾಗಲಿದೆ ಎಂದು ಹೇಳುತ್ತಿದ್ದರು. ಇದಕ್ಕೆ ಅಂತ್ಯವಾಡಲು ಹೀಗೆ ಮಾಡಲಾಯಿತು ಎಂದರು.
ಕಾಂಗ್ರೆಸ್ ಶಾಸಕರು ಅಲ್ಲಿಗೆ ಹೋಗಿದ್ದಾರೆ, ಇಲ್ಲಿಗೆ ಹೋಗಿದ್ದಾರೆಂಬ ವದಂತಿ ಜೋರಾಗಿದ್ದರಿಂದ ಕ್ಷೇತ್ರದ ಜನರು ಅಪಾರ್ಥ ಮಾಡಿಕೊಳ್ಳಬಾರದು ಎಂದು ನಾನೇ ಈ ನಿರ್ಧಾರ ಮಾಡಿದೆ. ಅಂದು ರಾತ್ರಿ ಯಡಿಯೂರಪ್ಪ ಅವರು ಕರೆ ಮಾಡಿದ ಕೂಡಲೇ ನಾನು ಸಿಎಂ ಕುಮಾರಸ್ವಾಮಿ ಅವರಿಗೆ ಕರೆ ಮಾಡಿದ್ದು ನಿಜ. ಅದಕ್ಕೆ ಅವರು ಕರೆದರೆ ಹೋಗಿ ಬನ್ನಿ ಎಂದಷ್ಟೇ ಹೇಳಿದ್ದರು. ಶಾಸಕ ಕೆ.ಶಿವನಗೌಡ ನಾಯಕ ಅವರು ನನಗೆ ಮೊದಲಿನಿಂದಲೂ ಚಿರಪರಿಚಿತರು. ಅವರು ನನಗೆ ಕರೆ ಮಾಡಿ ಬನ್ನಿ ಎಂದರು. ತಡವಾಗಿದೆ, ಬೆಳಗ್ಗೆ ಬರುತ್ತೇನೆ ಎಂದೆ. ಆದರೆ, ಪುನಃ ಕರೆ ಮಾಡಿ ಯಡಿಯೂರಪ್ಪ ಅವರ ಕೈಗೆ ಫೋನ್ ಕೊಟ್ಟರು. ಆಗ ಅವರು ಕರೆದಾಗ ಹೋಗಿದ್ದೆ ಎಂದರು.
ದೇವದುರ್ಗದಲ್ಲೂ ದೂರು: ಆಪರೇಷನ್ ಕಮಲ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದಿರುವ ಮಾತುಕತೆ ಸಂಭಾಷಣೆ ಆಡಿಯೋ ಆಧರಿಸಿ ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪ, ಶಾಸಕ ಕೆ.ಶಿವನಗೌಡ ನಾಯಕ, ಹಾಸನ ಶಾಸಕ ಪ್ರೀತಂ ಗೌಡ, ಪತ್ರಕರ್ತ ಮರಮಕಲ್ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ ಎಂದು ಶರಣಗೌಡ ಕಂದಕೂರ್ ತಿಳಿಸಿದರು.
ಬಿಎಸ್‌ವೈ ಆರೋಪಿ ನಂ.1, ಶಿವನಗೌಡ ನಂ.2 ಆಡಿಯೋ ಪ್ರಕರಣಕ್ಕೆ ಸಂಬಂ ಧಿಸಿದಂತೆ ಬಿ.ಎಸ್.ಯಡಿಯೂರಪ್ಪ, ಶಾಸಕ ಶಿವನಗೌಡ ನಾಯಕ ಸೇರಿ ನಾಲ್ವರ ವಿರುದಟಛಿ ದೇವದುರ್ಗ ಠಾಣೆಯಲ್ಲಿ ಬುಧವಾರ ಸಂಜೆ ಪ್ರಕರಣ ದಾಖಲಿಸಲಾಗಿದೆ. ಶರಣಗೌಡ ಕಂದಕೂರ್ ಹಣದ ಆಮಿಷ ಹಾಗೂ ಬೆದರಿಕೆ ಆರೋಪದಡಿ ಎಸ್‌ಪಿ ಸಹಿ ಇರುವ ದೂರು ನೀಡಿದ್ದು, ಭ್ರಷ್ಟಾಚಾರ ತಡೆಗಟ್ಟುವ ತಿದ್ದುಪಡಿ ಅ ನಿಯಮ 120(ಬಿ), 506 , 34 ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಯಡಿಯೂರಪ್ಪ ಮೊದಲನೇ ಆರೋಪಿಯಾಗಿದ್ದು, ಶಾಸಕ ಕೆ.ಶಿವನಗೌಡ ನಾಯಕ 2 ನೇ ಮತ್ತು ಪ್ರೀತಂ ಗೌಡ 3ನೇ, ಪತ್ರಕರ್ತ ಮರಮಕಲ್ 4ನೇ ಆರೋಪಿಯಾಗಿದ್ದಾರೆ.
ಆಪರೇಷನ್ ಆಡಿಯೋ ನಾವು ಮಾಡಿದ ಪೂರ್ವಯೋಜಿತ ಸಂಚು.ಸರ್ಕಾರಕ್ಕೆ ಪದೇಪದೆ ತೊಂದರೆ ನೀಡುತ್ತಿದ್ದ ಬಿಜೆಪಿಗೆ ಪಾಠ ಕಲಿಸಲು ಈ ರೀತಿ ಮಾಡಲಾಯಿತು.
● ಶರಣಗೌಡ ಕಂದಕೂರ,
ಶಾಸಕ ನಾಗನಗೌಡ ಪುತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
MUST WATCH
ಹೊಸ ಸೇರ್ಪಡೆ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.