ಶಿಕ್ಷಣ ಇಲಾಖೆ: ಇನ್ನೊಂದು ಆ್ಯಪ್
Team Udayavani, Nov 8, 2021, 5:50 AM IST
ಬೆಂಗಳೂರು: ಶಿಕ್ಷಕರ ವರ್ಗಾವಣೆ, ರಜೆ, ಸೇವಾವಧಿ ಮಾಹಿತಿ ಸೇರಿದಂತೆ ಇನ್ನಿತರ ವಿಷಯಗಳನ್ನು ಅಪ್ ಲೋಡ್ ಮಾಡುವುದಕ್ಕಾಗಿ “ಶಿಕ್ಷಕ ಮಿತ್ರ’ ಆ್ಯಪ್ ತಂದಿರುವ ಶಿಕ್ಷಣ ಇಲಾಖೆ ಇದೀಗ ಅದೇ ಮಾದರಿಯಲ್ಲಿ ಸಂಪನ್ಮೂಲ ಅಧಿಕಾರಿಗಳಿಂದ ನಿಖರ ಮಾಹಿತಿ ಪಡೆಯುವುದು ಮತ್ತು ಇಲಾಖಾ ಕೆಲಸಗಳಿಗೆ ವೇಗ ನೀಡುವ ಉದ್ದೇಶದಿಂದ ಮತ್ತೂಂದು ಆ್ಯಪ್ ತರಲು ಚಿಂತನೆ ನಡೆಸಿದೆ.
ರಾಜ್ಯದ ಸರಕಾರಿ ಶಾಲೆಗಳಿಗೆ ಭೇಟಿ ನೀಡುವ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ ವಿಷಯಗಳು, ಶಾಲೆಯಲ್ಲಿರುವ ಕುಂದು-ಕೊರತೆ, ಮೂಲ ಸೌಕರ್ಯ ಸಮಸ್ಯೆ, ಭೇಟಿ ನೀಡಿದ ಶಾಲೆಯ ಹೆಸರು ಸೇರಿದಂತೆ ಇನ್ನಿತರ ವಿಷಯಗಳ ಮಾಹಿತಿಯನ್ನು ಸ್ಥಳದಲ್ಲಿಯೇ ಆ್ಯಪ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ.
ಮಾಹಿತಿಗಳು ವೇಗವಾಗಿ ಉನ್ನತ ಮಟ್ಟದ ಅಧಿಕಾರಿಗ ಳನ್ನು ತಲುಪುವ ಉದ್ದೇಶ ಇದರ ಹಿಂದಿದೆ. ಜನವರಿ ವೇಳೆಗೆ ಅನುಷ್ಠಾನ ಸಾಧ್ಯತೆಗಳಿವೆ.
ಆ್ಯಪ್ ಅನುಷ್ಠಾನ ಯಾಕೆ?
ಸದ್ಯ ಇಲಾಖೆ ಅಧಿಕಾರಿಗಳು ತಾವು ಭೇಟಿ ನೀಡುವ ಶಾಲೆಗಳ ಮಾಹಿತಿ, ಅಲ್ಲಿ ಕಂಡು ಬರುವ ಮೂಲ ಸೌಕರ್ಯ ಸಮಸ್ಯೆ, ಶಿಕ್ಷಕರ ಕೊರತೆ, ಕಲಿಕಾ ಪರಿಕರಗಳ ಕೊರತೆ ಮುಂತಾದ ವಿಷಯಗಳನ್ನು ಅರ್ಜಿಯಲ್ಲಿ ದಾಖಲಿಸಿಕೊಳ್ಳುತ್ತಿದ್ದಾರೆ. ಅದನ್ನು ಇಲಾಖೆ ವಿವಿಧ ಹಂತದಲ್ಲಿ ಗಮನಕ್ಕೆ ತರಲು ತಿಂಗಳುಗಟ್ಟಲೆ ಬೇಕಾಗಿದೆ. ಅದರ ಬದಲು ಆ್ಯಪ್ ಮೂಲಕವಾದರೆ ಅಧಿಕಾರಿಗಳು ಭೇಟಿ ನೀಡುವ ದಿನವೇ ಇಲಾಖೆಯ ಗಮನಕ್ಕೆ ಬರಲಿದೆ. ಇದರಿಂದ ತತ್‌ಕ್ಷ ಣವೇ ಶಾಲೆಯಲ್ಲಿರುವ ಸಮಸ್ಯೆಗಳು, ಶಾಲೆಯಲ್ಲಿ ಶಿಕ್ಷ ಕರ ಮಾದರಿ ಕೆಲಸಗಳು, ವಿದ್ಯಾರ್ಥಿಗಳ ನೂತನ ಪ್ರಯೋಗ ಗಳು, ವಿದ್ಯಾರ್ಥಿಗಳ ಕೌಶಲ ಮುಂತಾದ ವಿಷಯಗಳು ಇಲಾಖೆ ಗಮನಕ್ಕೆ ಬರಲಿವೆ. ಉನ್ನತ ಅಧಿಕಾರಿಗಳ ಸಭೆ ಯಲ್ಲಿ ಬೇಕಾದ ದತ್ತಾಂಶವನ್ನು ಕ್ಷಣಾರ್ಧದಲ್ಲಿ ಪಡೆ ಯಲು ಸಹ ಅನುಕೂಲವಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಟಿ20 ವಿಶ್ವಕಪ್ 2021: ಪಾಕಿಸ್ಥಾನ ಅಜೇಯ ಓಟ
ಚುರುಕು ಮುಟ್ಟಿಸುವ ಉದ್ದೇಶ
ಕೆಳ ಹಂತದಲ್ಲಿ ಕೆಲವು ಅಧಿಕಾರಿಗಳು ಶಾಲೆಗಳಿಗೆ ಭೌತಿಕ ಭೇಟಿ ನೀಡದೆ ಕಚೇರಿಯಲ್ಲಿಯೇ ಕುಳಿತು ನಿರ್ವಹಣೆ ಮಾಡುತ್ತಿರುತ್ತಾರೆ. ಆ್ಯಪ್ ಜಿಪಿಎಸ್ ಆಧಾರಿತವಾಗಿದ್ದು, ಅಧಿಕಾರಿಗಳು ಯಾವ ಶಾಲೆಗೆ ಎಷ್ಟು ಗಂಟೆಗೆ ಭೇಟಿ ನೀಡಿದ್ದಾರೆ, ತಿಂಗಳಲ್ಲಿ ಎಷ್ಟು ಶಾಲೆಗಳಿಗೆ ಭೇಟಿ ನೀಡಿದ್ದಾರೆ ಮುಂತಾದ ಎಲ್ಲ ವಿಷಯಗಳ ಬಗ್ಗೆ ವಿವರವಾದ ಮಾಹಿತಿಗಳು ಮತ್ತು ದತ್ತಾಂಶಗಳು ನಿಖರವಾಗಿ ಲಭ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.