ಶಿವಮೊಗ್ಗ, ಭದ್ರಾವತಿ ಬಿಟ್ಟು ಉಳಿದೆಡೆ ಅನ್ ಲಾಕ್ 1.0 ನಿರ್ಬಂಧಗಳು ಜಾರಿ : ಈಶ್ವರಪ್ಪ
Team Udayavani, Jun 20, 2021, 2:00 PM IST
ಶಿವಮೊಗ್ಗ : ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು(ಜೂನ್ 20)ಮಹತ್ವದ ಸಭೆ ಕರೆದಿದ್ದು, ಅನ್ ವಿಚಾರ ಹಾಗೂ ನಿಯಮಾವಳಿಗಳ ಬಗ್ಗೆ ಮಾತುಕತೆ ನಡೆಸಲಾಯಿತು.
ಸಭೆಯ ಬಳಿಕ ಮಾತನಾಡಿದ ಸಚಿವರು, ಈವರೆಗೆ ಜಿಲ್ಲೆಯ ಜನರು ನಿರೀಕ್ಷೆಗೂ ಮೀರಿ ಸಹಕಾರ ನೀಡಿದ್ದಾರೆ. ಇದೀಗ ಸಾಮಾಜಿಕ ಅಂತರ ಕಾಯ್ದು ಕೊಂಡು ಆಯಾ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ರೇಡಿಯೇಶನ್ ಥೆರಪಿ :ನೀವು ಹೊಂದಿರಬೇಕಾದ ಸಾಮಾನ್ಯ ಜ್ಞಾನ
ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಹಾಗೂ ಬೆಳಗ್ಗೆ 10 ರಿಂದ 2ರ ತನಕ ವ್ಯಾಪಾರಕ್ಕೆ, ಹಾಲು-ತರಕಾರಿ ಸೇರಿದಂತೆ ಅಗತ್ಯ ವಸ್ತು ಖರೀದಿಗೆ 12 ಗಂಟೆಯವರೆಗೆ ಮಾತ್ರ ಅವಕಾಶ, ಸಿಮೆಂಟ್, ಸ್ಟೀಲ್ , ಹಾರ್ಡ್ ವೇರ್ ಶಾಪ್ ಗಳಿಗೆ 2 ಗಂಟೆವರೆಗೆ ಅವಕಾಶ, ಆಹಾರ ಪದಾರ್ಥ ಹೊರತುಪಡಿಸಿ, ಪುಟ್ಬಾತ್ ವ್ಯಾಪಾರಸ್ಥರಿಗೆ ಸಹ ಅವಕಾಶ, ಇದರ ಜೊತೆಗೆ ಗಿರವಿ, ಬಂಗಾರದ ಕೆಲಸ, ಸ್ಟುಡಿಯೋ, ಟೈಲರ್ ಗಳಿಗೂ ಸಹ ಅವಕಾಶ ನೀಡಿದ್ದೇವೆ ಎಂದು ಹೇಳಿದ್ದಾರೆ.
ಇನ್ನು, ಸದ್ಯಕ್ಕೆ ಈ ನಿಯಮಗಳು ಶಿವೊಗ್ಗ ಹಾಗೂ ಭದ್ರಾವತಿ ಎರಡು ತಾಲೂಕುಗಳಿಗೆ ಮಾತ್ರ ಅನ್ವಯವಾಗುತ್ತದೆ. ಉಳಿದಂತೆ ಉಳಿದಂತೆ ಜಿಲ್ಲೆಯಾದ್ಯಂತ ಅನ್ ಲಾಕ್ 1.0 ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದ್ದಲ್ಲಿ ಶಿಸ್ತು ಕ್ರಮ
ಕಲ್ಯಾಣ ಮಂದಿರ ಹಾಗೂ ಸವಿತಾ ಸಮಾಜದವರಿಗೆಅವಕಾಶ ನೀಡಿಲ್ಲ. ಷರತ್ತು ಉಲ್ಲಂಘಿಸಿದ ಅಂಗಡಿ, ಮುಂಗಟ್ಟಿಗೆ ಬೀಗ ಹಾಕಿ, ಕ್ರಮ ತೆಗೆದುಕೊಳ್ಳುತ್ತೇವೆ. ಶಿಸ್ತು ಕ್ರಮಕ್ಕೆ ಅವಕಾಶ ನೀಡಬೇಡಿ. ಈ ಎಲ್ಲಾ ನಿರ್ಧಾರ ಜುಲೈ 5ರ ತನಕ ಅನ್ವಯವಾಗುತ್ತದೆ. ಅಷ್ಟರೊಳಗೆ ಪಾಸಿಟಿವಿಟಿ ರೇಟ್ ಶೇ.5ರೊಳಗೆ ಬಂದರೆ ಇನ್ನೂ ಸ್ವಲ್ಪ ಅನ್ ಲಾಕ್ ಮಾಡ್ತೇತ್ತೇವೆ ಎಮದು ಅವರು ಹೇಳಿದ್ದಾರೆ.
ಇನ್ನು, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕೈಗಾರಿಕೆ, ಕಲ್ಯಾಣ ಮಂದಿರ, ಹಾಪ್ ಕಾಮ್ಸ್, ಸವಿತಾ ಸಮಾಜ, ಸಗಟು ತರಕಾರಿ, ಸಗಟು ದಿನಸಿ, ಪಾತ್ರೆ, ಗಿರವಿ, ಫುಟ್ಪಾತ್ ವರ್ತಕರು, ಟೈಲರ್, ಛಾಯಾಗ್ರಾಹಕರು ಮತ್ತಿತರ ವ್ಯಾಪಾರಸ್ಥರು ಹಾಗೂ ಪ್ರತಿನಿಧಿಗಳ ಸಭೆಯಲ್ಲಿ ಭಾಗಿಯಾಗಿ ಸಚಿವರ ಮುಂದೆ ತಮ್ಮ ತಮ್ಮ ಕ್ಷೇತ್ರದ ಸಮಸ್ಯೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಧಾರವಾಡ : ಅನ್ ಲಾಕ್ ಮಾಡುವಂತೆ ಜಗದೀಶ್ ಶೆಟ್ಟರ್ ಗೆ ಮನವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.