ಲೋಕಸಭೆ ಚುನಾವಣೆ ಟಾರ್ಗೆಟ್ ಗೆಲ್ಲಲು ಬಿಜೆಪಿ ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿದೆ: ಶಿವಾನಂದ
Team Udayavani, Dec 25, 2023, 2:09 PM IST
ವಿಜಯಪುರ : ಲೋಕಸಭೆ ಚುನಾವಣೆ ರಾಜಕೀಯ ಕಾರಣಕ್ಕೆ ಬಿಜೆಪಿ ಹೊಸ ನಾಯಕರು ರೈತರು, ಸಾಲಮನ್ನಾ ವಿಷಯದಲ್ಲಿ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿನ ನನ್ನ ಮಾತನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಚುನಾವಣೆ ಗೆಲ್ಲುವ ಕುರಿತು ಪಕ್ಷ ಬಿಜೆಪಿ ಹೊಸ ನಾಯಕರಿಗೆ ನೀಡಿರುವ ಗುರಿ ಗೆಲ್ಲುವುದಕ್ಕಾಗಿ ನನ್ನ ಹೇಳಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ದೇಶದಲ್ಲಿ ಈ ಹಿಂದೆ ಭೀಕರ ಬರ ಆವರಿಸಿದ್ದಾಗ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ದೇಶದ ರೈತರ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ರಾಜ್ಯ ಸರ್ಕಾರ ಬರದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಲಿ ಎಂದು ಬಯಸುವ ಬಿಜೆಪಿ ನಾಯಕರು, ಕೇಂದ್ರದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿದೆ, ದೇಶದ 14 ರಾಜ್ಯಗಳಲ್ಲಿ ಭೀಕರ ಬರ ಆವರಿಸಿದ್ದು, ಸಾಲಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು.
ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ಎಪಿಎಂಸಿ ಕಾನೂನು ಜಾರಿಗೆ ತಂದುದನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ತಮ್ಮ ಇಂಥ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರ ಸಕ್ಕರೆ, ಕೊಬ್ಬರಿ, ಈರುಳ್ಳಿ ರಫ್ತು ಸ್ಥಗಿತ ಮಾಡಿದ್ದರಿಂದ ಬೆಲೆ ಕುಸಿತವಾಗಿದೆ. ಕಬ್ಬು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 60 ರೂ. ಗೆ ಕೆಜಿ ಮಾರಾಟವಾಗುತ್ತದೆ. ಆದರೆ ರಾಜ್ಯದಲ್ಲಿ ನಾವು ಪ್ರತಿ ಟನ್ ಕಬ್ಬಿಗೆ 3500 ರೂ. ದರ ನೀಡುವ ಅವಕಾಶ ಇದ್ದರೂ ಕೇಂದ್ರದ ನೀತಿಯಿಂದಾಗಿ 3100 ರೂ. ದರ ನೀಡುತ್ತಿದ್ದೇವೆ ಎಂದು ಕಿಡಿ ಕಾರಿದರು.
ಕೊಬ್ಬರಿ ಮೌಲ್ಯವರ್ಧನೆ ಮಾಡಿ ಜನರಿಗೆ ಹಂಚುವ ಬದಲು ನಮ್ಮ ರಾಜ್ಯದವರೇ ಒಬ್ಬರು ಕೊಬ್ಬರಿ ಬೆಲೆ ಕುಸಿದಿದೆ ಎಂದು ಕೇಂದ್ರಕ್ಕೆ ಮನವಿ ಕೊಡುತ್ತಿದ್ದಾರೆ. ಮತ್ತೊಂದೆಡೆ ಕೆಲವೇ ತಿಂಗಳ ಹಿಂದೆ ಟೊಮ್ಯಾಟೊ ಬೆಲೆ ಹೆಚ್ಚಳವಾಗಿ ಕೆಲವು ರೈತರು ಒಂದಷ್ಟು ಲಾಭ ಮಾಡಿಕೊಳ್ಳುವ ಹಂತದಲ್ಲಿ ಬಿಜೆಪಿ ಸರ್ಕಾರ ತಡೆಯಿತು. ಇದೆಲ್ಲ ಕೇಂದ್ರ ಸರ್ಕಾರ ರೈತರಿಗೆ ಮಾಡುವ ಶೋಷಣೆ ಅಲ್ಲವೇ ಎಂದು ವಿಪಕ್ಷಗಳ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದರು.
ಹಿಂದೆ ಸರ್ಕಾರ ನಡೆಸಿದ ಮುಖ್ಯಮಂತ್ರಿಗಳು ನೀರು, ವಿದ್ಯುತ್, ಬೀಜ, ಗೊಬ್ಬರ ಉಚಿತವಾಗಿ ನೀಡಿದರು. ಇಂಥ ಎಲ್ಲವನ್ನೂ ಸರ್ಕಾರವಾಗಿ ನಾವು ಮಾಡುತ್ತಿದ್ದೇವೆ. ಆದರೆ ರೈತರು ಬೆಳೆಗೆ ವೈಜ್ಞಾನಿಕ ಬೆಲೆ ಕೊಡದೇ, ರೈತರನ್ನು ಸಶಕ್ತರನ್ನಾಗಿ ಮಾಡಲಿಲ್ಲ. ಇದೇ ಅರ್ಥದಲ್ಲಿ ನಾನು ಹೇಳಿದ್ದು ಎಂದು ಸಮಜಾಯಿಷಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್
Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ticket Price Hike: ನಾಲ್ಕು ನಿಗಮಗಳ ಬಸ್ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ
Shivamogga: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ ನೀರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.