ವಿದ್ಯುತ್ ಬಿಲ್ ಕಟ್ಟಲು ಹೋದ ಮಹಿಳೆಗೆ ಶಾಕ್:100ರೂ. ಪಾವತಿಸಲು ಹೇಳಿ 10 ಲಕ್ಷ ರೂ. ವಂಚನೆ
Team Udayavani, Jul 10, 2022, 11:22 AM IST
ಬೆಂಗಳೂರು: ವಿದ್ಯುತ್ ಬಿಲ್ ಪಾವತಿಸುವಂತೆ ಸೂಚಿಸಿದ ಸೈಬರ್ ಕಳ್ಳರು ಮಹಿಳೆಯೊಬ್ಬರಿಗೆ 10.76 ಲಕ್ಷ ರೂ. ವಂಚಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ನ ನಿವಾಸಿ ಡಾ.ವಾಣಿ ಪ್ರಭಾಕರ್ ಹಣ ಕಳೆದುಕೊಂಡವರು.
ಜು.7ರಂದು ವಾಣಿ ಅವರ ಮೊಬೈಲ್ಗೆ ವಿದ್ಯುತ್ ಬಿಲ್ ಪಾವತಿಸುವಂತೆ ಅಪರಿಚಿತ ನಂಬರ್ನಿಂದ ಸಂದೇಶ ಬಂದಿತ್ತು. ಸಂದೇಶ ಬಂದ ನಂಬರ್ಗೆ ಕರೆ ಮಾಡಿ ವಿಚಾರಿಸಿದಾಗ, ಆರೋಪಿಗಳು ಟೀಮ್ ವಿವರ್ ಆ್ಯಪ್ ಡೌನ್ ಲೋಡ್ ಮಾಡುವಂತೆ ಸೂಚಿಸಿದ್ದರು. ಅದರಂತೆ ವಾಣಿ ಆ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಆ್ಯಪ್ ಮೂಲಕ 100 ರೂ. ಪಾವತಿಸಿದ್ದರು. ಕೆಲ ಹೊತ್ತಿನಲ್ಲಿ ವಾಣಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 10.76 ಲಕ್ಷ ರೂ. ಬೇರೆ ಖಾತೆಗೆ ವರ್ಗಾವಣೆ ಆಗಿರುವುದು ಕಂಡು ಬಂದಿತ್ತು. ವಾಣಿ ಈ ಬಗ್ಗೆ ಬ್ಯಾಂಕ್ಗೆ ಹೋಗಿ ಪರಿಶೀಲಿಸಿದಾಗ ಸೈಬರ್ ಕಳ್ಳರ ಆಟ ಬೆಳಕಿಗೆ ಬಂದಿತ್ತು. ಡಾ.ವಾಣಿ ಪ್ರಭಾಕರ್ ಸೈಬರ್ ಕಳ್ಳರ ವಿರುದ್ಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಪತ್ನಿ ಮೇಲಿನ ದ್ವೇಷ: ತಂದೆಯಿಂದಲೇ ಪುತ್ರಿಯ ಅಶ್ಲೀಲ ಫೋಟೋ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.