ವಿದ್ಯಾರ್ಥಿಗಳಿಗೆ ಶೂ ಭಾಗ್ಯ: ಪ್ರಾಧ್ಯಾಪಕರಿಗೆ ಬಂಪರ್
Team Udayavani, Feb 27, 2019, 12:43 AM IST
ಬೆಂಗಳೂರು: 2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ನೀಡುವುದು ಹಾಗೂ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ , ಶೂ, ಸಾಕ್ಸ್ ಹಾಗೂ ಪಠ್ಯ ಸಾಮಗ್ರಿಗಳನ್ನು ಒದಗಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಮಾರು 78 ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಬಹುತೇಕ ಹೊಸ ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಲಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 44.57 ಲಕ್ಷ ವಿದ್ಯಾರ್ಥಿಗಳಿಗೆ 126 ಕೋಟಿ ರೂ. ವೆಚ್ಚದಲ್ಲಿ ಶೂ ಮತ್ತು ಸಾಕ್ಸ್ ನೀಡಲು ಸಂಪುಟ ಅನುಮೋದನೆ ನೀಡಿದೆ. 2018-19 ನೇ ಸಾಲಿನಲ್ಲಿ ಶೂ ನೀಡದೇ ಇರುವುದರಿಂದ ಈ ಬಾರಿ ಶಾಲೆಗಳು ಆರಂಭವಾಗುವ ಹೊತ್ತಿಗೆ ಮಕ್ಕಳಿಗೆಶೂ ಮತ್ತು ಸಾಕ್ಸ್‌ಗಳನ್ನು ನೀಡಲು ನಿರ್ಧರಿಸಿದೆ.
ಇನ್ನು ರಾಜ್ಯದ ವಿವಿಗಳು, ಕೃಷಿ ವಿವಿ, ಪಶು ವೈದ್ಯಕೀಯ ವಿವಿ, ತೋಟಗಾರಿಕೆ ವಿವಿ, ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಅನುದಾನಿತ ಬಿಎಡ್ ಕಾಲೇಜುಗಳ ಬೋಧಕ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗೆ ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ಶಿಫಾರಸಿನಂತೆ 2016ರ ಪರಿಷ್ಕೃತ ಯುಜಿಸಿ ವೇತನ ಜಾರಿಗೊಳಿಸಲು ಒಪ್ಪಿಗೆ ನೀಡಿದೆ.
ರಾಮನಗರ ಜಿಲ್ಲೆಯ ಅರ್ಚಕರ ಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕ್ಯಾಂಪಸ್ ಸ್ಥಾಪನೆ, 30 ಕೋಟಿ ವೆಚ್ಚದಲ್ಲಿ ಮಂಡ್ಯ ವೈದ್ಯಕೀಯ ಕಾಲೇಜು ಮೇಲ್ದರ್ಜೆಗೇರಿಸುವುದು. ರಾಯಚೂರು ವೈದ್ಯಕೀಯ ಕಾಲೇಜಿನಲ್ಲಿ 27 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳು ಹಾಗೂ ವೈದ್ಯರ ಹಾಸ್ಟೆಲ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಜಲಾಮೃತ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.
ಚೀನಾ ದೇಶದ ಕಾರ್ಯಕ್ರಮಗಳ ಎದುರಾಗಿ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಯೋಜನೆ ಅಡಿಯಲ್ಲಿ ಕೊಪ್ಪಳ ಆಟಿಕೆಗಳ ಕ್ಲಸ್ಟರ್ ಹಾಗೂ ಬಳ್ಳಾರಿ ಜಿಲ್ಲೆಯ ಜವಳಿ ಕ್ಲಸ್ಟರ್‌ನಲ್ಲಿ ಬಂಡವಾಳ ಹೂಡಿಕೆಗೆ ವಿಶೇಷ ಪ್ಯಾಕೇಜ್, ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ. ರೈತರ ಬೆಳೆ ವಿಮೆಯ ಬಾಕಿ ಹಣ ನೀಡಲು ಅನುಮೋದನೆ ನೀಡಿದೆ.
ಪ್ರಮುಖ ತೀರ್ಮಾನಗಳು
ರೈಟ್ಸ್ ಸಂಸ್ಥೆ ಸಿದಟಛಿಪಡಿಸಿರುವ ಬೆಂಗಳೂರು ನಗರ ರಸ್ತೆ ಮತ್ತು ರೈಲು ಸೇತುವೆಯಿಂದ ಉಪನಗರ ರೈಲು ಸೇವೆಗಳ ಕಾರ್ಯಸಾಧ್ಯತಾ ವರದಿಗೆ ತಾತ್ವಿಕ ಒಪ್ಪಿಗೆ
ಹಾಸನದ ಚನ್ನರಾಯಪಟ್ಟಣ ಕೆರೆ ಅಂಗಳದಲ್ಲಿ ವಿಹಾರಧಾಮ ಹಾಗೂ ಉದ್ಯಾನವನ ನಿರ್ಮಾಣಕ್ಕೆ 144 ಕೋಟಿ .
ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆ ಗಳ ಪುನಶ್ಚೇತನಗೊಳಿಸಲು 100 ಕೋಟಿ.
43 ತಾಲೂಕುಗಳಲ್ಲಿ ಅಂತರ್‌ಜಲ ಅಭಿವೃದ್ಧಿ ಪಡಿಸಲು ಚೆಕ್ ಡ್ಯಾಂ ನಿರ್ಮಾಣಕ್ಕೆ ಒಪ್ಪಿಗೆ
ನಿರ್ಭಯಾ ನಿಧಿ ಅಡಿಯಲ್ಲಿ ಬೆಂಗಳೂರಿನಲ್ಲಿ ಸೇಫ್ ಸಿಟಿ ಕ್ರಿಯಾ ಯೋಜನೆಗೆ ಅನುಮೋದನೆ.
ಮಂಗಳೂರಿನ ಬಂಟ್ವಾಳದಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಾಣಕ್ಕೆ 100 ಕೋಟಿ.
ಪ್ರವಾಸೋದ್ಯಮ ನಿಗಮದಿಂದ 3 ಸ್ಟಾರ್ ಹೊಟೇಲ್‌ಗಳ ನಿರ್ಮಾಣಕ್ಕೆ 83 ಕೋಟಿ
ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ತರಕಾರಿ ಬೀಜಗಳ ಕಿಟ್ ವಿತರಣೆಗೆ 15 ಕೋಟಿ.
ಪೊಲೀಸ್ ಇಲಾಖೆಯ ತರಬೇತಿ ಸಾಮರ್ಥ್ಯ ಹೆಚ್ಚಿಸಲು ಕ್ರಿಯಾ ಯೋಜನೆಗೆ ಅನುಮೋದನೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 15 ಕೋಟಿ ನೀಡಲು ಅನುಮತಿ
ಶಿವಮೊಗ್ಗದ ಭದ್ರಾವತಿಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ ಬೆಟಾಲಿಯನ್ ಸ್ಥಾಪಿಸಲು
ಸಿಆರ್‌ಪಿಎಫ್ಗೆ 50 ಎಕರೆ ಉಚಿತ ಜಮೀನು
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಕುರಿತು ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗೆ ಅಧಿಕಾರ.ರೈಟ್ಸ್ ಸಂಸ್ಥೆ ಸಿದ್ಧಪಡಿಸಿರುವ ಬೆಂಗಳೂರು ನಗರ ರಸ್ತೆ ಮತ್ತು ರೈಲು ಸೇತುವೆಯಿಂದ ಉಪನಗರ ರೈಲು ಸೇವೆಗಳ ಕಾರ್ಯಸಾಧ್ಯತಾ ವರದಿಗೆ ತಾತ್ವಿಕ ಒಪ್ಪಿಗೆ
ಹಾಸನದ ಚನ್ನರಾಯಪಟ್ಟಣ ಕೆರೆ ಅಂಗಳದಲ್ಲಿ ವಿಹಾರಧಾಮ ಹಾಗೂ ಉದ್ಯಾನವನ ನಿರ್ಮಾಣಕ್ಕೆ 144 ಕೋಟಿ .
ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆ ಗಳ ಪುನಶ್ಚೇತನಗೊಳಿಸಲು 100 ಕೋಟಿ.
43 ತಾಲೂಕುಗಳಲ್ಲಿ ಅಂತರ್‌ಜಲ ಅಭಿವೃದ್ಧಿ ಪಡಿಸಲು ಚೆಕ್ ಡ್ಯಾಂ ನಿರ್ಮಾಣಕ್ಕೆ ಒಪ್ಪಿಗೆ
ನಿರ್ಭಯಾ ನಿಧಿ ಅಡಿಯಲ್ಲಿ ಬೆಂಗಳೂರಿನಲ್ಲಿ ಸೇಫ್ ಸಿಟಿ ಕ್ರಿಯಾ ಯೋಜನೆಗೆ ಅನುಮೋದನೆ.
ಮಂಗಳೂರಿನ ಬಂಟ್ವಾಳದಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಾಣಕ್ಕೆ 100 ಕೋಟಿ.
ಪ್ರವಾಸೋದ್ಯಮ ನಿಗಮದಿಂದ 3 ಸ್ಟಾರ್ ಹೊಟೇಲ್‌ಗಳ ನಿರ್ಮಾಣಕ್ಕೆ 83 ಕೋಟಿ
ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ತರಕಾರಿ ಬೀಜಗಳ ಕಿಟ್ ವಿತರಣೆಗೆ 15 ಕೋಟಿ.
ಪೊಲೀಸ್ ಇಲಾಖೆಯ ತರಬೇತಿ ಸಾಮರ್ಥ್ಯ ಹೆಚ್ಚಿಸಲು ಕ್ರಿಯಾ ಯೋಜನೆಗೆ ಅನುಮೋದನೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 15 ಕೋಟಿ ನೀಡಲು ಅನುಮತಿ
ಶಿವಮೊಗ್ಗದ ಭದ್ರಾವತಿಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ ಬೆಟಾಲಿಯನ್ ಸ್ಥಾಪಿಸಲು ಸಿಆರ್‌ಪಿಎಫ್ಗೆ 50 ಎಕರೆ ಉಚಿತ ಜಮೀನು
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣದರೈಟ್ಸ್ ಸಂಸ್ಥೆ ಸಿದಟಛಿಪಡಿಸಿರುವ ಬೆಂಗಳೂರು ನಗರ ರಸ್ತೆ ಮತ್ತು ರೈಲು ಸೇತುವೆಯಿಂದ ಉಪನಗರ ರೈಲು ಸೇವೆಗಳ ಕಾರ್ಯಸಾಧ್ಯತಾ ವರದಿಗೆ ತಾತ್ವಿಕ ಒಪ್ಪಿಗೆ
ಹಾಸನದ ಚನ್ನರಾಯಪಟ್ಟಣ ಕೆರೆ ಅಂಗಳದಲ್ಲಿ ವಿಹಾರಧಾಮ ಹಾಗೂ ಉದ್ಯಾನವನ ನಿರ್ಮಾಣಕ್ಕೆ 144 ಕೋಟಿ .
ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆ ಗಳ ಪುನಶ್ಚೇತನಗೊಳಿಸಲು 100 ಕೋಟಿ.
43 ತಾಲೂಕುಗಳಲ್ಲಿ ಅಂತರ್‌ಜಲ ಅಭಿವೃದ್ಧಿ ಪಡಿಸಲು ಚೆಕ್ ಡ್ಯಾಂ ನಿರ್ಮಾಣಕ್ಕೆ ಒಪ್ಪಿಗೆ
ನಿರ್ಭಯಾ ನಿಧಿ ಅಡಿಯಲ್ಲಿ ಬೆಂಗಳೂರಿನಲ್ಲಿ ಸೇಫ್ ಸಿಟಿ ಕ್ರಿಯಾ ಯೋಜನೆಗೆ ಅನುಮೋದನೆ.
ಮಂಗಳೂರಿನ ಬಂಟ್ವಾಳದಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಾಣಕ್ಕೆ 100 ಕೋಟಿ.
ಪ್ರವಾಸೋದ್ಯಮ ನಿಗಮದಿಂದ 3 ಸ್ಟಾರ್ ಹೊಟೇಲ್‌ಗಳ ನಿರ್ಮಾಣಕ್ಕೆ 83 ಕೋಟಿ
ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ತರಕಾರಿ ಬೀಜಗಳ ಕಿಟ್ ವಿತರಣೆಗೆ 15 ಕೋಟಿ.
ಪೊಲೀಸ್ ಇಲಾಖೆಯ ತರಬೇತಿ ಸಾಮರ್ಥ್ಯ ಹೆಚ್ಚಿಸಲು ಕ್ರಿಯಾ ಯೋಜನೆಗೆ ಅನುಮೋದನೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 15 ಕೋಟಿ ನೀಡಲು ಅನುಮತಿ
ಶಿವಮೊಗ್ಗದ ಭದ್ರಾವತಿಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ ಬೆಟಾಲಿಯನ್ ಸ್ಥಾಪಿಸಲು
ಸಿಆರ್‌ಪಿಎಫ್ಗೆ 50 ಎಕರೆ ಉಚಿತ ಜಮೀನು
ಬೆಂಗಳೂರು ಮಹಾನಗರ ಪಾಲಿಕೆವ್ಯಾಪ್ತಿಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಕುರಿತು ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗೆ ಅಧಿಕಾರ. ಕುರಿತು ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗೆ ಅಧಿಕಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.