Hot Meal: ಮಧ್ಯಾಹ್ನದ ಶಾಲಾ ಬಿಸಿಯೂಟಕ್ಕೆ ತೊಗರಿ ಬೇಳೆ ಕೊರತೆ!
Team Udayavani, May 31, 2024, 6:45 AM IST
ದಾವಣಗೆರೆ: ಬೇಸಗೆ ರಜೆ ಮುಗಿದು ಶಾಲೆಗಳು ಪುನರಾರಂಭಗೊಂಡಿದ್ದು, ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಮಧ್ಯಾಹ್ನದ ಶಾಲಾ ಬಿಸಿಯೂಟಕ್ಕೆ ತೊಗರಿ ಬೇಳೆ ಕೊರತೆ ಕಾಡುತ್ತಿದೆ. ರಾಜ್ಯದ ಹಲವು ಶಾಲೆಗಳಲ್ಲಿ ತೊಗರಿ ಬೇಳೆ ಇಲ್ಲದೆ ಬಿಸಿಯೂಟದ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜೂನ್ ತಿಂಗಳಿನ ಬಿಸಿಯೂಟಕ್ಕೆ ಬೇಕಾದ ತೊಗರಿ ಬೇಳೆ ಪೂರೈಕೆಗೆ ಇನ್ನೂ ಟೆಂಡರ್ ಕರೆಯದೆ ಇರುವುದರಿಂದ ರಾಜ್ಯಾದ್ಯಂತ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಬಿಸಿಯೂಟಕ್ಕೆ ಹಿಂದಿನ ದಾಸ್ತಾನು ಬೇಳೆ ಅಂದರೆ, ಬರಗಾಲದಲ್ಲಿ ಪೂರೈಸಿದ ಬೇಳೆಯನ್ನೇ ಸ್ವತ್ಛಗೊಳಿಸಿ ಬಳಸುವುದು ಅನಿವಾರ್ಯವಾಗಿದೆ.
ಬರದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಬೇಸಗೆ ರಜಾ ದಿನಗಳಲ್ಲಿಯೂ ಮಧ್ಯಾಹ್ನದ ಶಾಲಾ ಬಿಸಿಯೂಟ ಮುಂದುವರಿಸಿತ್ತು. 20ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಯನ್ನು ಬಿಸಿಯೂಟ ಕೇಂದ್ರವನ್ನಾಗಿ ಮಾಡಿ, ಮಾರ್ಚ್‌ನಲ್ಲಿ ತೊಗರಿ ಬೇಳೆ ಪೂರೈಕೆ ಮಾಡಿತ್ತು. ಆಗ ಖರ್ಚಾಗದೆ ಉಳಿದ ಬೇಳೆಯೇ ಈಗ ಬಿಸಿಯೂಟಕ್ಕೆ ಬಳಕೆಯಾಗಬೇಕಿದೆ.
ಪ್ರಸಕ್ತ ವರ್ಷ ಶಾಲಾರಂಭದಲ್ಲಿಯೇ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ಪೂರೈಕೆಗೆ ಕ್ರಮ ಕೈಗೊಂಡಿರುವ ರಾಜ್ಯ ಸರಕಾರ, ಬಿಸಿಯೂಟಕ್ಕೆ ಬೇಕಾದ ಅಗತ್ಯ ಬೇಳೆ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಜೂನ್ ತಿಂಗಳಿಗೆ ಬೇಕಾದ ಬೇಳೆಗಾಗಿ ಈವರೆಗೆ ಟೆಂಡರ್ ಕರೆದಿಲ್ಲ. ಟೆಂಡರ್ ಪ್ರಕ್ರಿಯೆ ಬಳಿಕವೇ ಹೊಸ ಬೇಳೆ ಸರಬರಾಜು ಆಗಲಿದೆ.
ಹಳೆ ಬೇಳೆಯೇ ಗತಿ:
ಯಾವ ಶಾಲೆಯಲ್ಲಿ ಹಿಂದೆ ಪೂರೈಕೆಯಾ ಗಿದ್ದ ತೊಗರಿಬೇಳೆ ಖಾಲಿಯಾಗಿದೆಯೋ ಆ ಶಾಲೆಯವರು ಹತ್ತಿರದ ಬೇಸಗೆ ಮಧ್ಯಾಹ್ನದ ಬಿಸಿಯೂಟ ಕೇಂದ್ರದಿಂದ ತೊಗರಿಬೇಳೆ ದಾಸ್ತಾನು ಇದ್ದರೆ ತರಿಸಿಕೊಳ್ಳಲು ಸೂಚಿಸಲಾಗಿದೆ. ಇನ್ನು ಕೆಲವು ಶಾಲೆಗಳು ನೆರೆಯ ಶಾಲೆಗಳಿಂದ ತೊಗರಿಬೇಳೆ ಎರವಲು ಪಡೆಯುತ್ತಿವೆ. ನೆರೆಯ ಶಾಲೆಗಳಲ್ಲಿಯೂ ತೊಗರಿಬೇಳೆ ಸಿಗದಿದ್ದಾಗ ಅಕ್ಷರ ದಾಸೋಹ ಅಧಿಕಾರಿಗಳ ಅನುಮತಿಯೊಂದಿಗೆ ಶಾಲಾ ಬಿಸಿಯೂಟ ಅನುದಾನದಲ್ಲಿ ಬೇಳೆ ಖರೀದಿಸಿ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸಲು ಶಾಲಾ ಶಿಕ್ಷಣ ಇಲಾಖೆ ಯೋಜನೆ ಹಾಕಿಕೊಂಡಿದೆ.
ಮಾರ್ಚ್‌ನಲ್ಲಿ ಸರಬರಾಜಾಗಿ ದಾಸ್ತಾನು ಉಳಿದ ಬೇಳೆ ಒಂದೆರಡು ವಾರಗಳಿಗೆ ಮಾತ್ರ ಸಾಕಾಗುವಷ್ಟಿದೆ. ಹಾಗಾಗಿ ಸರಕಾರ ಕೂಡಲೇ ಟೆಂಡರ್ ಕರೆದು ಜೂ.15ರೊಳಗಾಗಿ ಎಲ್ಲ ಶಾಲೆಗಳಿಗೆ ಸಮರ್ಪಕ ಪ್ರಮಾಣದಲ್ಲಿ ಬೇಳೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕಿದೆ.
ಬೇಳೆಗಾಗಿ ನೆರೆ ಶಾಲೆಗಳಿಗೆ ಮೊರೆ:
ಮೇ 31ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದ್ದು ಪ್ರಥಮ ದಿನ ಎಲ್ಲ ಶಾಲೆಗಳಲ್ಲಿ ಸಿಹಿಯೂಟ ಮಾಡಿ, ಮಕ್ಕಳಿಗೆ ನೀಡಲು ಸಿದ್ಧತೆ ನಡೆದಿದೆ. ಒಂದೆರೆಡು ದಿನ ಪಲಾವ್, ಉಪ್ಪಿಟ್ಟು ಮಾಡಿದರೂ ಜೂ.3ರಿಂದ ನಿರಂತರ ಬಿಸಿಯೂಟ ಯಥಾ ಪ್ರಕಾರ ನಡೆಯಬೇಕಿದ್ದು, ಮುಖ್ಯ ಶಿಕ್ಷಕರು ಶಾಲಾ ಮಕ್ಕಳಿಗೆ ಬೇಕಾದ ಅಗತ್ಯ ಬೇಳೆ ಹೊಂದಿಸಿಕೊಳ್ಳಲು ನೆರೆಯ ಶಾಲೆಗಳ ಕದ ತಟ್ಟುತ್ತಿದ್ದಾರೆ.
ಬಿಸಿಯೂಟಕ್ಕಾಗಿ ಜೂನ್ ತಿಂಗಳಿನ ತೊಗರಿ ಬೇಳೆ ಇನ್ನೂ ಪೂರೈಕೆಯಾಗಿಲ್ಲ. ಈ ವಾರದಲ್ಲಿ ಟೆಂಡರ್ ಕರೆಯುವ ಸಾಧ್ಯತೆ ಇದೆ. ಪ್ರಸ್ತುತ ಜಿಲ್ಲೆಯಲ್ಲಿರುವ ಹಳೆಯ ದಾಸ್ತಾನು ಬಳಸಿಕೊಂಡು ಇಲ್ಲವೇ ನೆರೆಯ ಶಾಲೆಗಳಿಂದ ಬೇಳೆ ಪಡೆದು ಬಿಸಿಯೂಟ ತಯಾರಿಸಲು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ.– ದುರ್ಗಪ್ಪ, ಅಕ್ಷರ ದಾಸೋಹ ಅಧಿಕಾರಿ, ದಾವಣಗೆರೆ
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.