ಶೃಂಗೇರಿ: ಅ. 9ರಿಂದ ಶರನ್ನವರಾತ್ರಿ ಉತ್ಸವ
Team Udayavani, Oct 3, 2018, 1:50 PM IST
ಶೃಂಗೇರಿ: ಶೃಂಗೇರಿ ಶಾರದಾ ಪೀಠದಲ್ಲಿ ಭಾದ್ರಪದ ಮಾಸದ ಅಮಾವಾಸ್ಯೆಯಿಂದ (ಅ. 9) ಆಶ್ವಿಜ ಮಾಸ ಏಕಾದಶಿವರೆಗೆ (ಅ. 20) ಶರನ್ನವರಾತ್ರಿ ಉತ್ಸವ ನಡೆಯಲಿದೆ. ಶಾರದಾಂಬೆಯ ಮಹಾಭಿಷೇಕದೊಂದಿಗೆ ಆರಂಭ ವಾಗುವ ಉತ್ಸವ, ಶಾರದಾಂಬಾ ಮಹಾ ರಥೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.
ಶರನ್ನವರಾತ್ರಿ ಉತ್ಸವದಲ್ಲಿ ತಾಯಿ ಶಾರದೆಗೆ ಪ್ರತಿದಿನ ಬೇರೆ ಬೇರೆ ಅಲಂಕಾರ ಮಾಡಿ ಪೂಜಿಸುವುದು ಇಲ್ಲಿನ ಸಂಪ್ರದಾಯ. ಅ.9ರಂದು ಜಗತ್ಪ್ರಸೂತಿಕ ಅಲಂಕಾರ, ಅ.10-11ರಂದು ಬ್ರಾಹ್ಮೀ ಹಂಸವಾಹಿನಿ, ಅ.12ರಂದು ವೃಷಭಾರೂಢ ಮಾಹೇಶ್ವರಿ, ಅ.13ರಂದು ಮಯೂರ ವಾಹನದಲ್ಲಿ ಕೌಮಾರಿಯಾಗಿ ಶಾರದಾಂಬೆ ಕಂಗೊಳಿಸಲಿ ದ್ದಾಳೆ. ಅ.14ರಂದು ಗರೂಢಾ ರೂಢ ವೈಷ್ಣವಿ, ಅ.15ರಂದು ಸರಸ್ವತಿ ಆವಾಹನೆಯಾಗಿ ವೀಣಾಶಾರದೆ, ಅ.16ರಂದು ರಾಜ ರಾಜೇಶ್ವರಿ, ಅ.17ರಂದು ಮೋಹಿನಿ, ಅ.18 ರಂದು ಸಿಂಹವಾಹಿನಿ ಚಾಮುಂಡಿ, ಅ.19-20 ರಂದು ವಿಜಯೋತ್ಸವದ ಅಂಗವಾಗಿ ಗಜಲಕ್ಷ್ಮಿ ಅಲಂಕಾರ ಮಾಡಿ ಪೂಜಿಸಲಾಗುವುದು.
ಅ.14ರಂದು ಶತಚಂಡಿಕಾ ಯಾಗ ಆರಂಭಗೊಳ್ಳಲಿದ್ದು, ಅ.18ರಂದು ಪೂರ್ಣಾಹುತಿ ನೆರವೇರಲಿದೆ. ವಿಜಯ ದಶಮಿಯಂದು ವಿಜಯೋತ್ಸವ, ಶಮೀಪೂಜೆ ನಡೆಯಲಿದೆ. ಅ. 20ರಂದು ಶಾರದಾಂಬಾ ಮಹಾ ರಥೋತ್ಸವ ಹಾಗೂ ಪೀಠದ ಉಭಯ ಜಗದ್ಗುರುಗಳಾದ ಭಾರತೀ ತೀರ್ಥ ಶ್ರೀ ಹಾಗೂ ವಿಧುಶೇಖರ ಭಾರತೀ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.
ನವರಾತ್ರಿಯಲ್ಲಿ ಪ್ರತಿ ದಿನವೂ ಮಠದಲ್ಲಿ ವೇದ, ಪುರಾಣ, ಇತಿಹಾಸ ಭಾಷ್ಯ ಪಾರಾಯಣ, ಉಭಯ ಶ್ರೀಗಳಿಂದ ಶಾರದಾಂಬೆಗೆ ವಿಶೇಷ ಪೂಜೆ ನಡೆಯಲಿದೆ. ಪ್ರತಿದಿನ ಶ್ರೀಗಳ ದಸರಾ ದರ್ಬಾರ್, ಮಹಾಮಂಗಳಾರತಿ ಹಾಗೂ ಅಷ್ಟಾವಧಾನ ಸೇವೆಗಳು ನಡೆಯಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.