ಅನ್ನದ ಮಹತ್ವ ಸಾರಿದ ಮಠದ ವಿದ್ಯಾರ್ಥಿ
Team Udayavani, Jan 24, 2019, 1:05 AM IST
ತುಮಕೂರು: ಅನ್ನದ ಮಹತ್ವವನ್ನು ಅರಿತಿದ್ದ ಶಿವಕುಮಾರ ಶ್ರೀಗಳು ಹಸಿದಿದ್ದವರಿಗೆ ಅನ್ನ ನೀಡುವ ಮೂಲಕ ಜಗತ್ತಿಗೆ ತ್ರಿವಿಧ ದಾಸೋಹ ಮೂರ್ತಿ ಎಂದೇ ಹೆಸರುವಾಸಿಯಾಗಿದ್ದರು. ಮಠಕ್ಕೆ ಯಾರು ಬಂದರೂ ಪ್ರಸಾದ ಸೇವಿಸಿ ಹೋಗಿ ಎಂದೇ ಹೇಳುತ್ತಿದ್ದರು. ಇಂತಹ ಮಹಾನ್ ಕಾಯಕ ಯೋಗಿಯ ಶಿಷ್ಯನಾಗಿ ರುವ ಮಠದ ವಿದ್ಯಾರ್ಥಿ ಶಿವು ಎಂಬಾತ, ಮಠದಲ್ಲಿ ಮಂಗಳವಾರ ನಡೆದ ದಾಸೋಹ ದಲ್ಲಿ ಅರ್ಧಂಬರ್ಧ ಊಟ ಮಾಡಿ ಅನ್ನವನ್ನು ಚೆಲ್ಲುತ್ತಿದ್ದ ವ್ಯಕ್ತಿಗೆ ಅನ್ನದ ಮಹತ್ವ ತಿಳಿಸಿಕೊಟ್ಟಿದ್ದಾನೆ.
ಮಂಗಳವಾರ ಶ್ರೀಗಳ ಕ್ರಿಯಾ ಸಮಾಧಿಗಾಗಿ ಹರಿದು ಬಂದಿದ್ದ ಲಕ್ಷಾಂತರ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಅರ್ಧಂ ಬರ್ಧ ಊಟ ಮಾಡಿ ಅನ್ನ ಚೆಲ್ಲುತ್ತಿದ್ದ ವ್ಯಕ್ತಿ ಯನ್ನು ಶಿವು ಗಮನಿಸಿದ. ತಕ್ಷಣ ಆ ವ್ಯಕ್ತಿಯ ಕೈ ಹಿಡಿದು, ಏಕೆ ಅನ್ನ ಚೆಲ್ಲುತ್ತಿದ್ದೀರಾ, ಒಂದು ಅಗಳನ್ನೂ ಬಿಸಾಡಬಾರದು. ಇದು ನಮ್ಮ ಬುದ್ಧಿಯವರ ಇಚ್ಛೆ. ನೀವು ಬಿಸಾಡದೆ ಊಟ ಮಾಡಲೇಬೇಕು ಎಂದು ಚೆಲ್ಲುತ್ತಿದ್ದ ಅನ್ನವನ್ನು ಊಟ ಮಾಡಿಸುವ ಮೂಲಕ ಶ್ರೀಗಳಿಗೆ ತಕ್ಕ ಶಿಷ್ಯ ಎಂಬುದನ್ನು ಸಾಬೀತುಪಡಿಸಿದ.
ಈ ಸಂಬಂಧ ವಿದ್ಯಾರ್ಥಿ ಶಿವು ಮಾತನಾಡಿ, ‘ದಾಸೋಹದಲ್ಲಿ ಊಟ ಮಾಡಿದವರು ಅನ್ನವನ್ನು ಚೆಲ್ಲಿ ಹೋಗುತ್ತಿದ್ದರು. ಇದನ್ನು ನಾನು ಗಮನಿಸಿ ಅನ್ನ ಚೆಲ್ಲುತ್ತಿದ್ದವರನ್ನು ಕರೆದು ಪ್ರಶ್ನಿಸಿದೆ, ಆಗ ಅವರು ಊಟ ಸೇರಲಿಲ್ಲ, ಸಾಂಬಾರು ಇರಲಿಲ್ಲ, ಕುಡಿಯುವ ನೀರು ಬೇಕಾಗಿತ್ತು ಎಂಬ ಕಾರಣ ಹೇಳಿ ಅನ್ನ ಚೆಲ್ಲುತ್ತಿದ್ದರು. ನಮಗೆ ಬುದ್ಧಿಯವರು ಅನ್ನದ ಮಹತ್ವ ತಿಳಿಸಿಕೊಟ್ಟಿದ್ದಾರೆ. ಹಾಗಾಗಿ, ಅವರನ್ನು ಕರೆದು ಮತ್ತೆ ಆ ಅನ್ನ ತಿನ್ನಿಸಿದೆ’ ಎಂದು ತಿಳಿಸಿದ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.