![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 29, 2022, 12:56 PM IST
ಕಲಬುರಗಿ: ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಧರ್ಮದ ಕನ್ಹಯ್ಯಾ ಲಾಲ್ ಎನ್ನುವ ಟೇಲರ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಕಾಮೆಂಟ್ ನೋಡಿ ಆತನ ಶಿರಚ್ಛೇದನ ಮಾಡಿ ಅದರ ವಿಡಿಯೋ ವೈರಲ್ ಮಾಡಿರುವ ವ್ಯಕ್ತಿಗಳ ಕೃತ್ಯ ದೇಶ ತಲೆತಗ್ಗಿಸುವ ವಿಚಾರ ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ.
ಇದು ಕೇವಲ ವ್ಯಕ್ತಿ ತುಚ್ಛೀಕರಣವಲ್ಲ, ಮೌಲ್ಯಗಳ ಅಧಃಪತನ. ಕನ್ಹಯ್ಯಾ ಲಾಲ್ ಅವರ ಅಂಗಡಿಗೆ ನುಗ್ಗಿ ಹಾಡುಹಗಲೇ ಕೊಲೆ ಮಾಡಿರುವ ಆರೋಪಿಗಳು, ಕತ್ತು ಕೊಯ್ಯುವ ದೃಶ್ಯ ಹಂಚಿಕೊಂಡಿದ್ದಾರೆ. ಇದೆಂತಹ ವಿಕೃತಿ. ಮೊಹಮ್ಮದ್ ರಿಯಾಜ್ ಮತ್ತು ಅನ್ಸಾರಿ ಹಿಂದೂ ವ್ಯಕ್ತಿಯ ಕೊಲೆ ಮಾಡಿದ್ದಲ್ಲದೇ, ವಿಡಿಯೋ ಮಾಡುವುದರ ಮೂಲಕ ವಿಕೃತಿ ಮೆರೆದಿದ್ದಾರೆ. ಅಲ್ಲದೇ, ಹತ್ಯೆಯ ನಂತರ ವಿಡಿಯೋ ಮಾಡಿ “ರಸಲುಲ್ಲಾ ಜಾಯೆಂಗೆ ಆಪ್ ಕೆ ಲಿಯೇ ಔರ್ ಮಾರೆಂಗೆ ಆಪ್ ಕೆ ಲಿಯೇ” ಎಂದು ವಿಡಿಯೋ ಮಾಡಿ ಹರಿ ಬಿಟ್ಟಿದ್ದಾರೆ. ಇದು ಅತಿಯಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎರಡು ಸಾವಿರ ಅಗ್ನಿಶಾಮಕ ಹುದ್ದೆಗಳ ಭರ್ತಿ: ಗೃಹ ಸಚಿವ ಆರಗ ಜ್ಞಾನೇಂದ್ರ
ಹತ್ಯೆಯ ನಂತರ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡಾ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿರುವುದು ಖಂಡನೀಯ. ಕೊಲೆಗಡುಕರು ಐಸಿಸ್‌ನ ಎಜೆಂಟಾಗಿದ್ದು, ಇವರನ್ನು ಕೂಡಲೇ ಬಂಧಿಸಬೇಕು ಇಲ್ಲವೆ, ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಂರ ತುಷ್ಠಿಕರಣ ಮಾಡುತ್ತಿದೆ. ಮುಸ್ಲಿಂ ತುಷ್ಠಿಕರಣ ಮಾಡಿದ್ದಕ್ಕೆ, ಇಂತಹ ಘಟನೆ ಜರುಗಿದೆ ಎಂದರು. ಘಟನೆ ಮರುಕಳಿಸದಂತೆ ಕೇಂದ್ರ ಸರ್ಕಾರವು,ಅಲ್ಲಿಯ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದರು. ಈ ಘಟನೆಯಿಂದ ದೇಶದಲ್ಲಿ ಬಹುಸಂಖ್ಯಾತ ಹಿಂದುಗಳು ಸುರಕ್ಷಿತ ಇಲ್ಲ. ಅದಕ್ಕೆ ರಾಜಸ್ಥಾನದ ಹಿಂದೂ ವ್ಯಕ್ತಿಯ ಕೊಲೆಯೆ ಸಾಕ್ಷಿ ಎಂದರು.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.