ಸಂಸದಗೆ ಸಿದ್ದರಾಮಯ್ಯ ಸಲಹೆ
Team Udayavani, Dec 9, 2017, 8:20 AM IST
ಮೈಸೂರು: “ನೀನು ಇನ್ನೂ ಚಿಕ್ಕವನು. ಹಾಗೆಲ್ಲ ಮಾತನಾಡಬೇಡ’ -ಹೀಗೆಂದು ಸಂಸದ ಪ್ರತಾಪ್ಸಿಂಹ ಅವರಿಗೆ ಸಲಹೆ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ನಗರದ ಗೋಕುಲಂ 3ನೇ ಹಂತದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮಕ್ಕೆ
ಆಗಮಿಸಿದ ವೇಳೆ ಸಂಸದ ಪ್ರತಾಪ್ಸಿಂಹ ಅವರನ್ನು ಕಂಡ ಸಿದ್ದರಾಮಯ್ಯ, ಪ್ರತಾಪ್ ಸಿಂಹ ಅವರ ಗಡ್ಡವನ್ನು ಗಮನಿಸಿ “ಏನಪ್ಪಾ, ವಿರಾಟ್ ಕೊಯ್ಲಿ ಹಾಗೆ ಗಡ್ಡ ಬಿಟ್ಟಿದ್ದೀಯಾ’ ಎಂದರು. ಈ ವೇಳೆ, ಪ್ರತಾಪ್ ಸಿಂಹ ಅವರು, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ತಮ್ಮ ವಿರುದ್ಧ ದೂರು ನೀಡಿರುವ ವಿಷಯವನ್ನು ಮುಖ್ಯಮಂತ್ರಿಯೊಂದಿಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನೀನು ಇನ್ನೂ ಚಿಕ್ಕವನು, ಹಾಗೆಲ್ಲ ಮಾತನಾಡಬೇಡ’ ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.