Siddaramaiah; ಸಿದ್ದು ಹಿಂದ ಬಾಣ!: ಕನಕ ಪೀಠ ಸ್ಥಾಪಿಸಿ ಕುರುಬರಿಗೆ ಶಕ್ತಿ ನೀಡಿದ್ದು ನಾನು
Team Udayavani, Jan 6, 2025, 6:55 AM IST
ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ “ಔತಣಕೂಟ ರಾಜಕಾರಣ’ ಸದ್ದು ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆಮುಂದೆ ನೋಡದೆ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮತ್ತೂಮ್ಮೆ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಹಿಂದುಳಿದ, ದಲಿತ ಸ್ವಾಮೀಜಿಗಳು ಹಾಗೂ ತಮ್ಮ ಆಪೆ¤àಷ್ಟ ಸಚಿವರು, ಶಾಸಕರ ಸಮ್ಮುಖದಲ್ಲಿ ಸಿಎಂ ಬದಲಾವಣೆ ಕೂಗಿಗೆ ತೀಕ್ಷ್ಣ ತಿರುಗೇಟು ನೀಡಿದ್ದು, ಮುಂದಿನ ಮೂರೂವರೆ ವರ್ಷ ನಾನೇ ಸಿಎಂ ಎಂಬ ಪರೋಕ್ಷ ಸಂದೇಶವನ್ನೂ ರವಾನಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ವಿದೇಶ ಪ್ರವಾಸ ದಲ್ಲಿರುವಾಗಲೇ ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದು ಅಧಿಕಾರ ಹಸ್ತಾಂತರ ವೃತ್ತಾಂತ ಮತ್ತೂಂದು ಮಜಲು ತಲುಪಿದೆ.
ರವಿವಾರ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ 537ನೇ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಕನಕ ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಚಿತ್ರದುರ್ಗ ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಆಪ್ತ ಸಚಿವ ಬೈರತಿ ಸುರೇಶ್, ಮಾಜಿ ಸಚಿವರಾದ ಎಚ್. ಆಂಜನೇಯ, ಎಚ್.ಎಂ. ರೇವಣ್ಣ, ಶಾಸಕರಾದ ಕೆ.ಎಸ್. ಬಸವಂತಪ್ಪ, ಡಿ.ಜಿ. ಶಾಂತನಗೌಡ, ಲತಾ ಮಲ್ಲಿಕಾರ್ಜುನ್ ಸಮ್ಮುಖದಲ್ಲಿ ತಮ್ಮ ಹಿಂದೆ ಇರುವ ಬಲವನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ ಅಧಿಕಾರ ಬದಲಾವಣೆ ಸಂದರ್ಭ ಬಂದರೆ ತಮ್ಮ ಬೆನ್ನಿಗೆ ನಿಲ್ಲುವಂತೆ ಪರೋಕ್ಷವಾಗಿ ಮನವಿಯನ್ನೂ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಶೋಷಿತರ ಪರ ಆಡಳಿತ ನೀಡಲು ನನಗೆ ಎಲ್ಲರ ಬೆಂಬಲ ಬೇಕು. ಎಸ್.ಆರ್. ಬೊಮ್ಮಾಯಿ ಸರಕಾರದಲ್ಲಿ ಸಾರಿಗೆ ಸಚಿವನಾಗಿದ್ದಾಗ ಕನಕದಾಸರ 500ನೇ ಜಯಂತಿ ಆರಂಭಿಸಿದೆವು. ಬಳಿಕ ಇಡೀ ರಾಜ್ಯ ಪ್ರವಾಸ ಮಾಡಿ ನಾನೇ ಕಾಗಿನೆಲೆ ಗುರುಪೀಠ ರೂಪಿಸಿ ಮಠ ಸ್ಥಾಪನೆ ಮಾಡಿದ್ದೇನೆ’ ಎಂದು ಇಡೀ ಸಮುದಾಯ ತಮ್ಮ ಬೆನ್ನಿಗೆ ನಿಲ್ಲುವಂತೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಕೂಡ ಸಿದ್ದು ಬೆಂಬಲಕ್ಕೆ ನಿಂತಿದ್ದು, “ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಇರಬೇಕು. ಅವರು ಮುಖ್ಯಮಂತ್ರಿಯಾಗಿದ್ದರೆ ಎಲ್ಲರಿಗೂ ನೆಮ್ಮದಿ.ಹಾಗಾಗಿ ನಾವು ಅಂದರೆ ಎಲ್ಲ ಶೋಷಿತ, ದಲಿತ, ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಸೇರಿ ಅವರಿಗೆ ಅನ್ನದಾತ… ಅಧಿಕಾರಭವ… ಎಂಬ ಆಶೀರ್ವಾದ ಮಾಡುತ್ತೇವೆ. ಸಿದ್ದರಾಮಯ್ಯ ದಲಿತರು, ಹಿಂದುಳಿದವರು, ಶೋಷಿತರ ಪರ ಇದ್ದಾರೆ. ಹಾಗಾಗಿ ನಾವು ಕೂಡ ಅವರ ಪರವಾಗಿಯೇ ಇರುತ್ತೇವೆ’ ಎಂದು ಬಹಿರಂಗವಾಗಿ ಅಭಯ ನೀಡಿದ್ದಾರೆ.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕೂಡ, “ಅಹಿಂದ ವರ್ಗದ ನಾಯಕರಾಗಿರುವ ಸಿದ್ದರಾಮಯ್ಯ ಮುಂದಿನ ಮೂರೂವರೆ ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ನಾನು ಕುರುಬ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿರುವ ಸಿದ್ದರಾಮಯ್ಯ ಇರುವವರೆಗೆ ನಾವೆಲ್ಲರೂ ಸೇರಿ ಅವರ ಕೈ ಬಲಪಡಿಸಬೇಕು’ ಎಂದು ವೇದಿಕೆ ಮೇಲಿದ್ದ ಸ್ವಾಮೀಜಿಗಳಿಗೂ ಮನವಿ ಮಾಡಿ ಹಿಂದುಳಿದ ಹಾಗೂ ದಲಿತ ಸಮುದಾಯ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲುವ ದಾಳ ಉರುಳಿಸಿದ್ದಾರೆ.
ಎಸ್.ಆರ್. ಬೊಮ್ಮಾಯಿ ಸರಕಾರದಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ ಕನಕದಾಸರ 500ನೇ ಜಯಂತಿ ಆರಂಭಿಸಿದೆವು. ಬಳಿಕ ಇಡೀ ರಾಜ್ಯ ಪ್ರವಾಸ ಮಾಡಿ ಕಾಗಿನೆಲೆ ಗುರುಪೀಠ ರೂಪಿಸಿ ಮಠ ಸ್ಥಾಪನೆ ಮಾಡ ಲಾಯಿತು. ಆದ್ದರಿಂದ ಇಡೀ ಸಮುದಾಯ ಒಟ್ಟಾಗಿ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು. ಭಿನ್ನಾಭಿಪ್ರಾಯ ಮರೆತು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕನಕ ಜಯಂತಿ ಆಚರಣೆ ಮಾಡಬೇಕು.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಎಸ್‌ಸಿ ಒಳಮೀಸಲಾತಿಗೆ ಬದ್ಧ: ಸಿದ್ದು ಭರವಸೆ
ದಾವಣಗೆರೆ: ಎಸ್‌ಸಿ ಸಮುದಾಯಕ್ಕೆ ಒಳ ಮೀಸಲಾತಿ ನೀಡಲು ನಮ್ಮ ಸರಕಾರ ಬದ್ಧ ವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಒಳ ಮೀಸಲಾತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ್ದು, ಪ್ರಾಯೋಗಿಕ ಮಾಹಿತಿ ಇಲ್ಲದೆ ಇರುವುದರಿಂದ ನ್ಯಾ| ನಾಗ ಮೋಹನ್ ದಾಸ್ ನೇತೃತ್ವದ ಸಮಿತಿ ರಚಿಸ ಲಾಗಿದೆ ಎಂದಿದ್ದಾರೆ.
ಜಾತಿಗಣತಿ: ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ
ದಾವಣಗೆರೆ: ಶಾಶ್ವತ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜು ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಾನು ಜಾತಿ ಜನ ಗಣತಿ ಪರವಾಗಿ ಇದ್ದೇನೆ. ಇದರಿಂದ ಜಾತಿಗಳ ಜನಸಂಖ್ಯೆ ಆಧಾರದಲ್ಲಿ ಯಾವುದೇ ಕಾರ್ಯ ಕ್ರಮ, ಯೋಜನೆ ರೂಪಿಸಲು ಅನುಕೂಲ ಆಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸ್ಪಷ್ಟನೆ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.