BJPಯ ಜನ ವಿರೋಧಿ ನೀತಿಯ ಬಗ್ಗೆ ‘ನರಪೀಡಕ’ ಎಂಬ ಪುಸ್ತಕ ಹೊರ ತಂದಿದ್ದೆನೆ : ಸಿದ್ದರಾಮಯ್ಯ
Team Udayavani, Aug 2, 2021, 6:45 PM IST
ಅಂಕೋಲಾ : ಈ ರಾಜ್ಯದಲ್ಲಿ ಜನರಪರ ಸರಕಾರವಿಲ್ಲ. ನರಪೀಡಕ ಸರಕಾರ ನಿಂತಿದೆ. ಆದರು ಯಡಿಯುರಪ್ಪ ತನ್ನ ಎರಡು ವರ್ಷ ಸಾಧನೆಯನ್ನು ಎತ್ತಿ ತೊರಿಸುತ್ತಿದ್ದಾರೆ. ಈ ಸರಕಾರದ ಜನ ವಿರೋಧಿ ನೀತಿಯ ಕುರಿತು ನರಪೀಡಕ ಎನ್ನುವ ಪುಸ್ತಕ ನಾನು ಹೊರ ತಂದಿದ್ದೆನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಅವರು ಅಂಕೋಲಾ ನೆರೆ ಪಿಡೀತ ಪ್ರದೇಶವನ್ನು ಪರಿಶೀಲನೆ ನಡೆಸಿ ಪಟ್ಟಣದ ನಾಡವರ ಸಭಾಭವನದಲ್ಲಿ ಆಯೋಜಸಿದ ಅಹವಾಲು ಸಭೆಯಲ್ಲಿ ಮಾತನಾಡಿ ಉತ್ತರ ಕನ್ನಡ ಜಿಲ್ಲೆಗೆ ನೆರೆ ಪರಿಶೀಲನೆಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಕಾಟಾಚಾರಕ್ಕೆ ಬಂದು ಹೊಗಿದ್ದಾರೆ. ಸರಿಯಾದ ಮಾಹಿತಿಯನ್ನು ಪಡೆಯದೆ ಸಂತ್ರಸ್ಥರ ಅಳಲನ್ನು ಆಲಿಸದೆ ಕೇವಲ ಕಣ್ಣಿರು ಒರೆಸುವ ಕುತಂತ್ರ ಮಾಡಿದ್ದಾರೆ. ಕಷ್ಟದಲ್ಲಿದ್ದವರು ಸಿಎಂ ಬರುತ್ತಾರೆಂದು ಕಾದರೆ ಅವರ ಬಾವನೆಗೆ ದಕ್ಕೆ ತಂದು ಅವರ ಮನಸ್ಸಿಗೆ ಇನ್ನಷು ನೋವು ಮಾಡಿ ಹೊಗಿದ್ದಾರೆ.
ಇದನ್ನೂ ಓದಿ : ಬಾಣಂತಿ, ಮಗುವನ್ನು ಊರು ತಲುಪಿಸಿ ಮಾನವೀಯತೆ ಮೆರೆದ ಸಾರಿಗೆ ಸಂಸ್ಥೆ ಸಿಬ್ಬಂದಿ
2019 ರಲ್ಲಿ ಇಲ್ಲಿ ನೆರೆ ಬಂದಿತ್ತು. ಆಗ ಹಾನಿಗೊಳಗಾದ ಸಂತ್ರಸ್ತರಿಗೆ ಸರಿಯಾದ ನೀಡಿಲ್ಲ. ಈಗ ಮತ್ತೆ 200 ಕೋಟಿಯ ಘೋಷಣೆ ಮಾಡಿದ್ದಾರೆ. ಕೇವಲ ಕಣ್ಣಿರು ಒರೆಸುವ ಕುತಂತ್ರವಾಗಿ ವೀಕ್ಷಣೆ ನಡೆಸಿರುವುದು ಖಂಡನೀಯ. ಸರಕಾರದ ಎಲ್ಲಾ ವೈಪಲ್ಯವನ್ನು ಅಧಿವೇಶನ್‌ದಲ್ಲಿ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ನೆರೆ ಸಂತ್ರಸ್ಥರಿಗೆ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಯುವಕರಿಗೆ ನಾಮ ಇಟ್ಟ ಮೋದಿ : ಸಿದ್ದರಾಮಯ್ಯ
ಯುವಕರು ಮೋದಿ ಮೋದಿ ಮೋದಿ ಎಂದು ಜಪ ಮಾಡುತ್ತಿದ್ದಾರೆ. ಮೋದಿ ಎನ್ನು ಮಾಡಿದ್ದಾರೆ. ಎಲ್ಲಾ ಯುವಕರಿಗೆ ಸರಿಯಾಗಿ ಮೂರು ನಾಮ ಇಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 7 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೆನೆ ಎಂದು ಬೊಗಳೆ ಬಿಟ್ಟಿದ್ದರು. ದುರಂರ ಏನೆಂದರೆ 12 ಕೋಟಿ ಉದ್ಯೋಗವನ್ನು ನಾವು ಕಳೆದುಕೊಳ್ಳುವಂತಾಗಿದೆ. ಮನಮೋಹನ ಸಿಂಗ್ ಸರಕಾರದಲ್ಲಾದರು ಉದ್ಯೋಗ ಸೃಷ್ಠಿ ಆಗಿದ್ದವು. ಈಗ ಅದು ಯಾವುದಿಲ್ಲದೆ. ಮೋದಿ ಜಪ ಮಾಡುವವರಿಗೆ ನಾಮ ಇಟ್ಟಿದ್ದಾರೆ ಎಂದು ವ್ಯಂಗ್ಯವಾಗಿ ನುಡಿದರು.
ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ ಜನರ ಕಷ್ಟಕ್ಕೆ ಸ್ಪಂದಿಸದ ಸರಕಾರ ಇದ್ದರೇನು ಸತ್ತರೇನು. ಸರಕಾರ ಎನ್ನುವದಕ್ಕೆ ಸಾಮಾಜಿಕ ಕಳಕಳಿಯು ಇರಬೇಕು. ಆದರೆ ಬಿಜೆಪಿ ಸರಕಾರ ಕೇವಲ ಭ್ರಷ್ಟಾಚಾರ ಮೂಲಕ ಮುನ್ನೆಡೆಯುತ್ತಿದೆ ಎಂದರು.
ಮಾಜಿ ಶಾಸಕ ಸತೀಶ ಸೈಲ ಮಾತನಾಡಿ ನೆರೆಯಿಂದ ಮನೆಗೆ ನೀರು ನುಗ್ಗಿದ ಮನೆಗಳಿಗೆ ೧೦ ಸಾವಿರ ನೀಡಲು ಸರಕಾರ ನಿಂತಿದೆ. ಇದು ಮನೆ ಸ್ವಚ್ಛಗೊಳಿಸಲು ಸಾಲುತ್ತಿಲ್ಲ. ಕೂಡಲೇ ಸರಕಾರ ಹೆಚ್ಚಿ ಅನುದಾನವನ್ನು ಬಿಡುಗಡೆಗೊಳಿಸಲುವ ಮೂಲಕ ಸಂತ್ರಸ್ತರ ನೆರೆವಿಗೆ ನಿಲ್ಲಬೇಕು ಎಂದರು.
ಮಾಜಿ ಶಾಸಕರಾದ ಮಂಕಾಳು ವೈದ್ಯ, ಪ್ರಶಾಂತ ದೇಶಪಾಂಡೆ, ಪ್ರಮುಖರಾದ ಬೀಮಣ್ಣ ನಾಯ್ಕ, ಪಾಂಡುರ0ಗ ಗೌಡ, ರಮಾನಂದ ನಾಯಕ, ಸಾಯಿ ಗಾಂವಕರ, ಸುಜಾತಾ ಗಾಂವಕರ ಉಪಸ್ಥಿತರಿದ್ದರು.
ಇದನ್ನೂ ಓದಿ : ಕಾರ್ಕಳ : ಅರ್ಭಿ ಫಾಲ್ಸ್ ನಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿನಿ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.