ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು: ಮೊಟ್ಟೆ ಎಸೆದ ಕುರಿತು ಸಿಂಹ
ಕೊಡಗಿನಲ್ಲಿ ಇವತ್ತು ಆಕ್ರೋಶ, ನೋವು ಇದೆ
Team Udayavani, Aug 18, 2022, 8:13 PM IST
ಬೆಂಗಳೂರು: ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿರುವುದು ನನ್ನ ಗಮನಕ್ಕೆ ಬಂದಿದೆ.ಅದು ಒಳ್ಳೆಯ ಸಂಸ್ಕೃತಿ ಅಲ್ಲ,ಇವತ್ತು ಮೊಟ್ಟೆ ಬಿಸಾಡಲು ಕಾರಣ ಏನು ಎಂದು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪು ಜಯಂತಿ ಮಾಡಿ ಅಂತಾ ಯಾರು ಕೇಳಿಕೊಂಡರು? ಟಿಪ್ಪು ಬಗ್ಗೆ ಕೊಡಗಿನಲ್ಲಿ ಯಾವ ಅಭಿಪ್ರಾಯ ಇದೆ ಅಂತಾ ಸಿದ್ದರಾಮಯ್ಯಗೆ ಗೊತ್ತಿಲ್ಲವೇ? ಕೊಡಗಿನಲ್ಲಿ ಇವತ್ತು ಆಕ್ರೋಶ, ನೋವು ಇದೆ. ಕೊಡಗಿನ ಜನ ನಾಯಿಗೆ ಟಿಪ್ಪು ಅಂತಾ ಹೆಸರಿಡುವಷ್ಟು ಆಕ್ರೋಶ ಇದೆ.
ಮುಸ್ಲಿಮರಲ್ಲಿ ಅಲ್ಲಾಹುವನ್ನು ಹೊರತುಪಡಿಸಿ ಉಳಿದ ಯಾರೂ ಪೂಜೆಗೆ ಭಾಜನರಲ್ಲ, ಅಂದು ಕೋಮು ಅಜೆಂಡಾ ಇಟ್ಟುಕೊಂಡು ಟಿಪ್ಪು ಜಯಂತಿ ಮಾಡಿದರು. ಟಿಪ್ಪು ಜಯಂತಿ ವೇಳೆ ಕುಟ್ಟಪ್ಪ ಕಾಲು ಜಾರಿ ಸತ್ತ ಎಂದಿದ್ದು ಕೊಡಗಿನವರಿಗೆ ನೋವಾಗಿದೆ.ಇತ್ತೀಚೆಗೆ ಕೊಡವರು ದನ ತಿನ್ನುವವರು ಅಂತಾ ಸಿದ್ದರಾಮಯ್ಯ ಹೇಳಿದರು. ಕೊಡಗಿನವರ ಬಗ್ಗೆ ಸುಳ್ಳು ಆರೋಪ ಮಾಡಿರುವಾಗ ಸಹಜವಾಗಿ ಆಕ್ರೋಶದ ಧ್ವನಿ ಸಿದ್ದರಾಮಯ್ಯ ವಿರುದ್ಧ ಇದೆ. ಇಂದು ಹೋದಾಗ ಅದು ಈ ರೀತಿ ವ್ಯಕ್ತವಾಗಿದೆ. ಹಿಂದೆ ತಾವು ನಡೆದುಕೊಂಡ ರೀತಿಗೆ ಇಂದು ಅಲ್ಲಿ ಈ ರೀತಿ ಭಾವನೆ ವ್ಯಕ್ತವಾಗಿದೆ ಎಂದು ಸಿದ್ದರಾಮಯ್ಯ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯರಿಗೆ ಮಡಿಕೇರಿಯಲ್ಲೂ ಪ್ರತಿಭಟನೆಯ ಬಿಸಿ: ಕಾಂಗ್ರೆಸ್ ನಿಂದ ಪ್ರತಿರೋಧ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.