ಎಚ್‌ಡಿಕೆ ಸಿಎಂ ಆಗಲು ಸಿದ್ದರಾಮಯ್ಯ ಕಾರಣ
Team Udayavani, Aug 24, 2019, 3:06 AM IST
ಬೆಂಗಳೂರು: “ಕುಮಾರಸ್ವಾಮಿ 14 ತಿಂಗಳು ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರೆ ಅದಕ್ಕೆ ಸಿದ್ದರಾಮಯ್ಯ ಅವರೇ ಕಾರಣ. ಮೈತ್ರಿ ಸರ್ಕಾರ ರಚನೆಯಾಗದಿದ್ದರೆ, ಕಾಂಗ್ರೆಸ್‌ಗೆ ಒಳ್ಳೆಯ ಭವಿಷ್ಯವಿತ್ತು’ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರ ಅಭಿ ಪ್ರಾಯ ಕೇಳದೇ ಕುಮಾರ ಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರು. ಈ ಬಗ್ಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಇತ್ತು. ಆದರೆ, 37 ಶಾಸಕರನ್ನು ಹೊಂದಿರುವ ಜೆಡಿಎಸ್‌ನವರಿಗೆ ಏಕೆ ಅಸಮಾಧಾನ ಎಂದು ಹೇಳಿದರು.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರೀತಿಯ ನಾಯಕರಾಗಿ ಕುಮಾರಸ್ವಾಮಿ ಬೆಳೆಯಲಿ ಎಂದು ನಾವು ಬಯಸಿದ್ದೆವು. ಆದರೆ, ಅವರು ಈ ರೀತಿಯ ನಾಯಕರಾಗುತ್ತಾರೆ ಎಂದುಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂಬರುವ ಉಪ ಚುನಾವಣೆಯಲ್ಲಿ ನೇರವಾಗಿ ಎದುರಿಸಲು ಜೆಡಿಎಸ್‌ಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಕ್ಕಲಿಗರ ಮತಗಳನ್ನು ಒಗ್ಗೂಡಿಲು ತಂತ್ರ ಹೆಣೆದಿದ್ದಾರೆ.
ಆ ಕಾರಣಕ್ಕಾಗಿಯೇ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಪತನವಾಗಲು ಕುಮಾರಸ್ವಾಮಿಯೇ ಕಾರಣ. ರೇವಣ್ಣ ಅವರ ಮೇಲೆ ಅನಗತ್ಯ ಆರೋಪ ಮಾಡುವುದಿಲ್ಲ. ಕುಮಾರಸ್ವಾಮಿ ಸಹಿ ಮಾಡದೇ ಎಂ.ಟಿ.ಬಿ. ನಾಗರಾಜ್ ಖಾತೆಯಲ್ಲಿ ಹೇಗೆ ವರ್ಗಾವಣೆಗಳು ಆಗುತ್ತವೆ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.