ಬಿಜೆಪಿ ವಿರುದ್ದ ಆಕ್ಷೇಪಾರ್ಹ ಅರ್ಧ ಪದ ಬಳಸಿದ ಸಿದ್ದರಾಮಯ್ಯ!
ಆ ಪದ ಬಳಸಬಾರದಿತ್ತು....ತತ್ ಕ್ಷಣವೇ ಕ್ಷಮೆಯಾಚಿದ ಮಾಜಿ ಸಿಎಂ
Team Udayavani, May 5, 2022, 12:23 PM IST
ಮೈಸೂರು : ಬಿಜೆಪಿ ವಿರುದ್ದ ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಕ್ಷೇಪಾರ್ಹ ಅರ್ಧ ಪದ ಬಳಸಿದ ಪ್ರಸಂಗ ಗುರುವಾರ ನಡೆದಿದೆ.
ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ , ಆಕ್ಷೇಪಾರ್ಹ ಪದ ಅರ್ಧಕ್ಕೆ ಬಳಸಿ ನಿಲ್ಲಿಸಿ, ತತ್ ಕ್ಷಣವೇ ಎಚ್ಚೆತ್ತು ಕ್ಷಮೆಯಾಚಿದರು. ಆ ಪದ ಬಳಸಬಾರದಿತ್ತು. ಇದನ್ನು ಮತ್ತೆ ಮತ್ತೆ ಹಾಕಬೇಡಿ ಮಾಧ್ಯಮದವರಿಗೆ ಮನವಿ ಮಾಡಿದರು.
ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ
ಪಿಎಸ್ಐ ಪರೀಕ್ಷೆ ಹಗರಣವನ್ನ ಮುಚ್ಚಿಹಾಕಲು ಬಿಜೆಪಿ ಸರಕಾರ ಪ್ರಯತ್ನಿಸಿತ್ತು. ಈಗ ಬಂಧಿಸಿರುವವರೆಲ್ಲಾ ಮಧ್ಯವರ್ತಿಗಳು. ಮುಖ್ಯವಾದವರನ್ನು ಪತ್ತೆ ಹಚ್ಚಬೇಕಿದೆ. ಪೊಲೀಸರು ಸರ್ಕಾರದ ವಿರುದ್ದ ತನಿಖೆ ಮಾಡಲು ಸಾಧ್ಯವಿಲ್ಲ. ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ವಹಿಸಬೇಕು. ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ವೀಕ್ಷಣೆಯಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕೇಂದ್ರದ ನಾಯಕರು ಇವರನ್ನು ಸಮರ್ಥಿಸುತ್ತಿದ್ದಾರೆ. ಇವರ ಭ್ರಷ್ಟಾಚಾರಕ್ಕೆ ಪರ ಮುದ್ರೆ ಒತ್ತುತ್ತಿದ್ದಾರೆ. ನೋಟಿಸ್ ಕೊಡಲು ಅಧಿಕಾರ ಇಲ್ಲ. ಅವರೇನು ಸಾಕ್ಷಿದಾರರಾ ಅಪರಾಧಿನಾ ? ಅವನ ಮೇಲೆ ಕ್ರಿಮಿನಲ್ ಮೊಕದಮ್ಮೆ ಇದೆಯಾ ? ಅವರು ನೋಟಿಸ್ ಕೊಟ್ಟ ತಕ್ಷಣ ಹೋಗುವುದಕ್ಕಾಗುತ್ತಾ? ಇದು ರಾಜಕೀಯ, ಜನರ ಗಮನ ಬೇರೆ ಸೆಳೆಯಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದರು.
ಒಬ್ಬೊಬ್ಬ ಅಭ್ಯರ್ಥಿಯಿಂದ 40 ಲಕ್ಷದಿಂದ 1 ಕೋಟಿವರೆಗೂ ವಸೂಲಿ ಮಾಡಲಾಗಿದೆ. ಸುಮಾರು 300 ಕೋಟಿ ಹಣ ಪಡೆಯಲಾಗಿದೆ. ಎಂದು ಗಂಭೀರ ಆರೋಪ ಮಾಡಿದರು.
ದರ್ಶನ್ ಗೌಡ ಮೊದಲ ಪತ್ರಿಕೆಯಲ್ಲಿ ಕಡಿಮೆ ಅಂಕ, ಎರಡನೇ ಪತ್ರಿಕೆಯಲ್ಲಿ ಹೆಚ್ಚು ಅಂಕ, ಕಿವಿಗೆ ಬ್ಲೂ ಟೂಥ್ ಹಾಕಿಕೊಂಡು ಬರೆದಿದ್ದಾರೆ. ಖಾಲಿ ಪೇಪರ್ ಕೊಟ್ಟು ಆಮೇಲೆ ಬರೆಸಿದ್ದಾರೆ. ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಇದು ಮಾತ್ರವಲ್ಲ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ಅಕ್ರಮ. ಇದಕ್ಕೆಲ್ಲಾ ಯಾರು ಜವಾಬ್ದಾರರು. ಅದಕ್ಕೆ ನ್ಯಾಯಾಂಗ ತನಿಖೆಯಾಗಬೇಕು. ಸತ್ಯ ಹೊರಗೆ ಬರಬೇಕಾದರೆ ಕಳ್ಳರಿಗೆ ಶಿಕ್ಷೆಯಾಗಬೇಕಾದರೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದರು.
ರಾಜ್ಯದಲ್ಲಿ ಮನೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಕೇಳಿದ್ದು ಜನರಿಗೆ ಕಟ್ಟಿಕೊಟ್ಟ ಮನೆ ಬಗ್ಗೆ. ನೀವು ಕಟ್ಟಿಸಿಕೊಂಡ ಮನೆಗಳ ಬಗ್ಗೆ ಅಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಅವರಿಗೆ ಟಾಂಗ್ ನೀಡಿ, ನಾನು ಕಟ್ಟಿಸಿದ ಮನೆಯನ್ನು ನಾನೇ ಏಕೆ ನೋಡಲಿ. ನೀವು ಕಟ್ಟಿಸಿರುವ ಮನೆ ಬಗ್ಗೆ ಒಂದು ದಾಖಲೆ ತಂದು ಕೊಡಿ ಸಾಕು. ಇವರು ಯಡಿಯೂರಪ್ಪ ಅವಧಿಯಲ್ಲಾಗಲಿ, ಬಸವರಾಜ ಬೊಮ್ಮಾಯಿ ಅವಧಿಯಲ್ಲಾಗಲಿ ಒಂದೂ ಮನೆ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಸವರಾಜ ಬೊಮ್ಮಾಯಿ ಆಯ್ಕೆಯಾದ ಸಿಎಂ ಅಲ್ಲ, ನೇಮಕವಾದ ಸಿಎಂ. ಯಡಿಯೂರಪ್ಪ ಸಹ ನೇಮಕವಾದ ಸಿಎಂ. ಇವರಿಗೆ ಜನ ಬಹುಮತ ಕೊಟ್ಟಿರಲಿಲ್ಲ. ಹಣ ಬಳಸಿ ಚುನಾವಣೆ ಮಾಡಿ ಅಧಿಕಾರಕ್ಕೆ ಬಂದರು. ಇವರು ಯಾವ ರೀತಿ ಬಂದರು ಅಂತಾ ಗೊತ್ತಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.