ಆರ್ ಎಸ್ ಎಸ್ ಬಗ್ಗೆ ಮಾತಾಡಿದ್ರೆ ಹುಷಾರ್..! ಸಿದ್ದರಾಮಯ್ಯಗೆ ಆರ್.ಅಶೋಕ್ ಎಚ್ಚರಿಕೆ
Team Udayavani, Jun 5, 2022, 4:46 PM IST
ಬೆಂಗಳೂರು: ಆರ್‌ಎಸ್‌ಎಸ್ ಚಡ್ಡಿ ಸುಡುವ ಅಭಿಯಾನದ ಬಗ್ಗೆ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಈ ರೀತಿ ಸುಡೋರೆಲ್ಲ ಮನೆ ಸುಟ್ಟಿಕೊಂಡಿದ್ದಾರೆ.ಆಂಜನೇಯನ ಬಾಲಕ್ಕೆ ಬೆಂಕಿ ಬಿದ್ದು, ಇಡೀ ಲಂಕೆಯೇ ಸುಟ್ಡಿ ಹೋಯಿತು ಆರ್ ಎಸ್ಎಸ್ ಶಕ್ತಿ ಏನು ಪ್ರಪಂಚಕ್ಕೆ ಕಾಂಗ್ರೆಸ್ ಗೆ ಗೊತ್ತಿದೆ.
ಪ್ಯಾಂಟ್, ಚಡ್ಡಿ ಸುಡುವುದನ್ನೆಲ್ಲಾ ಬಿಟ್ಡು ಬಿಡಿ. ಆರ್ ಎಸ್ ಎಸ್ ತಂಟೆಗೆ ಬಂದರೆ ಸುಟ್ಡು ಹೋಗುತ್ತೀರಿ ಎಂದರು.
ನೀವೆಲ್ಲರೂ ಚುನಾವಣೆಗೆ ಹೋಗ್ತಿದ್ದೀರಿ,ಸ್ವಲ್ಪ ಹುಷಾರಾಗಿರಿ ನೀವೇ ಬಾದಾಮಿಯಲ್ಲಿ ಸ್ವಲ್ಪ ಅಂತರದಿಂದ ಗೆದ್ದಿದ್ದೀರಿ . ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕ್ಷೇತ್ರ ಹುಡುಕ್ತಿದ್ದೀರಿ ಈಗ ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡಿದ್ರೆ, ಚುನಾವಣೆಯಲ್ಲಿ ಸೋಲುತ್ತೀರಿ. ಕೇವಲ ಸೋನಿಯಾ ಗಾಂಧಿಯನ್ನ ಮೆಚ್ಚಿಸುವುದಕ್ಕೆ ಹೋಗಿ ನೀವು ಚುನಾವಣೆಯಲ್ಲಿ ಸುಟ್ಟು ಹೋಗುತ್ತೀರಿ ಹುಷಾರ್ ಎಂದು ಸಿದ್ದರಾಮಯ್ಯಗೆ ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ರಾಜ್ಯಸಭಾ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿ ಗೆಲ್ಲುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸಚಿವರು ನಮ್ಮ ಬಳಿ ಅಗತ್ಯ ಮತಗಳು ಇರೋದಕ್ಕೆ ಮೂರನೇ ಅಭ್ಯರ್ಥಿ ಹಾಕಿದ್ದೇವೆ ನೂರಕ್ಕೂ ನೂರರಷ್ಟು ಮೂರು ಅಭ್ಯರ್ಥಿಗಳು ಆಯ್ಕೆ ಆಗುತ್ತಾರೆ. ಈಗಾಗಲೇ ಅಭ್ಯರ್ಥಿಗಳನ್ನು ಗೆಲ್ಲಿಸಲು ನಮ್ಮ ನಾಯಕರೆಲ್ಲರೂ ಸೇರಿ ಫೀಲ್ಡಿಗೆ ಇಳಿದಿದ್ದೇವೆ ಇಲ್ಲಿ ಕಾಂಗ್ರೆಸ್, ಜೆಡಿಎಸ್ ಅನಾವಶ್ಯಕವಾಗಿ ಅಭ್ಯರ್ಥಿಗಳು ಹಾಕಿದ್ದಾರೆ ಒಂದು ಕಡೆ ನಿತ್ಯ ಇಬ್ರು ಕಿತ್ತಾಡ್ತಾರೆ ಇನ್ನೊಂದು ಕಡೆ ಅವರು ಇವರನ್ನು ಮತ ಕೇಳಿದ್ದೇವೆ ಅಂತಾರೆ ಕೊನೆಗೆ ಇದು ಯಾವುದು ವರ್ಕೌಟ್ ಆಗಲ್ಲಎಂದು ಹೇಳಿದರು.
ನಿಜವಾಗಿಯೂ ಮತದಾನ ನಡೆಯೋದ ಓಟ್ ಮೇಲೆ, ಮತದಾನ ವ್ಯಾಲ್ಯೂ ಮೇಲೆ ಎರಡನೇ ಪ್ರಾಶಸ್ತ್ಯ ಮತ, ಮೂರನೇ ಪ್ರಾಶಸ್ತ್ಯ ಮತ ಮೌಲ್ಯಗಳ ಮೇಲೆ ಚುನಾವಣೆ ನಡೆಯೋದು ನಮಗೆ 122 ಮತಗಳು ಇವೆ, ಸುಲಭವಾಗಿ ಗೆಲ್ಲುವ ವಿಶ್ವಾಸ ಇದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷ?
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷ?
Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
1857 ಸಿಪಾಯಿ ದಂಗೆ ಕಾಲದ ಶಸ್ತ್ರಾಸ್ತ್ರ ಹೊಲದಲ್ಲಿ ಪತ್ತೆ!
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.