MUDA; ಸಿದ್ದರಾಮಯ್ಯ ಪತ್ನಿ ವಿರುದ್ಧ ಕ್ರಯಪತ್ರ ತಿದ್ದುಪಡಿ ಆರೋಪ
Team Udayavani, Oct 20, 2024, 6:00 AM IST
ಮೈಸೂರು: ಮುಡಾ 50:50ರ ಅನುಪಾತದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರ ಮೇಲೆ ಕ್ರಯಪತ್ರ ತಿದ್ದುಪಡಿ ಮಾಡಿದ ಆರೋಪ ಕೇಳಿಬಂದಿದೆ.
ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ಹೆಬ್ಟಾಳ ಕೈಗಾರಿಕಾ ಪ್ರದೇಶದಲ್ಲಿನ ಸರ್ವೇ ನಂಬರ್ 445ರ ಜಮೀನಿನಲ್ಲಿ 20 ಗುಂಟೆ ಜಾಗವನ್ನು ಎ.ಎಸ್. ಗಣೇಶ್ ದೀಕ್ಷಿತ್ ಅವರಿಂದ 29-9-2023ರಂದು 1.86 ಕೋಟಿ ರೂ.ಗೆ ಪಾರ್ವತಿ ಅವರು ಖರೀದಿಸಿದ್ದರು. ಆದರೆ, ಈ 20 ಗುಂಟೆ ಜಾಗದ ಗಡಿ ಗುರುತಿಸಲು ಹೋದಾಗ ಕೂರ್ಗಳ್ಳಿ ಗ್ರಾ.ಪಂ. ಖಾತೆಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ನೀಡಿರುವ ವಿನ್ಯಾಸ ನಕ್ಷೆಗೂ ವ್ಯತ್ಯಾಸ ಕಂಡುಬಂದಿದೆ.
ಈ ಬಗ್ಗೆ ಆರೋಪ ಮಾಡಿರುವ ಆರ್‌ಟಿಐ ಕಾರ್ಯಕರ್ತ ಗಂಗರಾಜು, ಭೂ ಮಾಲಕ ರಾಮಕೃಷ್ಣ 2014ರಲ್ಲಿ 4.11 ಎಕರೆ ಭೂಮಿಯಲ್ಲಿ 20 ಗುಂಟೆ ಭೂಮಿ ಮಾತ್ರ ವಸತಿ ಉದ್ದೇಶಕ್ಕೆ ಭೂಮಿ ಪರಿವರ್ತನೆ ಮಾಡಿ ಪಪ್ಪುರಾಜ್ ಅವರಿಗೆ ಮಾರಾಟ ಮಾಡಿದ್ದರು. ಆ ಬಳಿಕ ಭೂ ಪರಿವರ್ತನೆ ಮತ್ತು ನಕ್ಷೆ ಅನುಮೋದನೆ ವೇಳೆ 20 ಗುಂಟೆ ಜಾಗದಲ್ಲಿ 7 ಗುಂಟೆಯಷ್ಟು ಜಾಗವನ್ನು ರಸ್ತೆ ಮತ್ತು ವಾಟರ್ ಪೈಪ್‌ಲೈನ್‌ಗೆ ಅಗತ್ಯವಿದ್ದ ಕಾರಣ ಮುಡಾ ಸ್ವಾಧೀನಪಡಿಸಿಕೊಂಡಿತ್ತು. ಆದರೆ, 2019ರಲ್ಲಿ ಪಪ್ಪುರಾಜ್ ಅವರು ತಮ್ಮ ಹೆಸರಿನಲ್ಲಿದ್ದ 13 ಗುಂಟೆ ಜಾಗದ ಬದಲಿಗೆ 20 ಗುಂಟೆ ಜಾಗವನ್ನೇ ಗಣೇಶ್ ದೀಕ್ಷಿತ್‌ಗೆ ಮಾರಾಟ ಮಾಡಿದ್ದರು. ಬಳಿಕ 2023 ಸೆ. 29ರಂದು ಬಿ.ಎಂ. ಪಾರ್ವತಿ ಅವರಿಗೆ ಗಣೇಶ್ ದೀಕ್ಷಿತ್ 20 ಗುಂಟೆ ಭೂಮಿ ಮಾರಾಟ ಮಾಡಿದ್ದಾರೆ. ಇದರಲ್ಲಿ ಮುಡಾ ಸ್ವಾಧೀನಪಡಿಸಿಕೊಂಡ 7 ಗುಂಟೆ ಭೂಮಿಯೂ ಒಳಗೊಂಡಿದೆ. ಹೀಗಿದ್ದರೂ ಸಿಎಂ ಪತ್ನಿ ಹೇಗೆ 20 ಗುಂಟೆ ಜಾಗ ಖರೀದಿಸಿದರು ಎಂದು ಗಂಗರಾಜು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.