#DishaRavi ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ… : ಸಿದ್ದರಾಮಯ್ಯ ಟ್ವೀಟಾಕ್ರೋಶ
“ದಿಶಾ ರವಿಯವರ ಬಂಧನವು ನರೇಂದ್ರ ಮೋದಿ ಸರ್ಕಾರದ ಪ್ರಜಾಪ್ರಭುತ್ವದಲ್ಲಿನ ಒಡಕನ್ನು ತೋರಿಸುತ್ತದೆ"
Team Udayavani, Feb 15, 2021, 6:26 PM IST
ಬೆಂಗಳೂರು : ರೈತರ ಪ್ರತಿಭಟನೆಯ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಸಿದಂತೆ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ ಹಿನ್ನಲೆಯಲ್ಲಿ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.
ಓದಿ : ನಾಜಿ ಹುಟ್ಟಿದ ಕಾಲದಲ್ಲೇ RSS ಹುಟ್ಟಿದೆ…ರಾಮ ಮಂದಿರ ದೇಣಿಗೆ ಸಂಗ್ರಹ ಕುರಿತು HDK ಆತಂಕ
ದಿಶಾ ರವಿ ಅವರನ್ನು ರಾಜಕೀಯ ದುರುದ್ದೇಶದಿಂದ ಬಂಧಿಸಲಾಗಿದೆ ಎಂದು ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.
“ದಿಶಾ ರವಿಯವರ ಬಂಧನವು ನರೇಂದ್ರ ಮೋದಿ ಸರ್ಕಾರದ ಪ್ರಜಾಪ್ರಭುತ್ವದಲ್ಲಿನ ಒಡಕನ್ನು ತೋರಿಸುತ್ತದೆ. ದೆಹಲಿ ಪೊಲೀಸರ ರಾಜಕೀಯ ಪ್ರೇರಿತ ನಡೆಯನ್ನು ನಾನು ಖಂಡಿಸುತ್ತೇನೆ. ರೈತರನ್ನು ಬೆಂಬಲಿಸುವುದ ದೇಶದ್ರೋಹ ಪ್ರಕರಣ ಹೇಗಾಗುತ್ತದೆ..?” ಎಂದು ಆಂಗ್ಲ ಭಾಷಾ ಪತ್ರಿಕೆಯೊಂದರ ತುಣುಕಿನೊಂದಿಗೆ ಟ್ವೀಟ್ ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
The arrest of Disha Ravi, a climate activist, has exposed the cracks in the Indian democracy under @narendramodi.
How can the act of supporting farmers be charged under sedition?
I strongly condemn this politically motivated act by Delhi Police. pic.twitter.com/JLOXsNZIVI
— Siddaramaiah (@siddaramaiah) February 15, 2021
ಇನ್ನು, “ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಿತ ಹೆಣ್ಣು ಮಕ್ಕಳು ತಮ್ಮನ್ನು ಪ್ರಶ್ನಿಸಿದರೆ ಬಂಧಿಸಿ ಜೈಲಿಗೆ ಹಾಕುತ್ತಾರೆ.” “ದಿಶಾ ರವಿ ಬಂಧನ ಪ್ರಜೆಗೆಳ ಮೇಲಿನ ದೌರ್ಜನ್ಯ ಮಾತ್ರವಲ್ಲ, ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು. ನೆನಪಿರಲಿ, ನಾರಿ ಮುನಿದರೆ ಮಾರಿ” ಎಂದು ಮತ್ತೊಂದು ಟ್ವೀಟ್ ನಲ್ಲಿ ದಿಶಾ ರವಿ ಬಂಧನವನ್ನು ಸಿದ್ದರಾಮಯ್ಯ ವಿರೋಧಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಎನ್ನುವ ಪ್ರಧಾನಿ @narendramodi,
ಶಿಕ್ಷಿತ ಹೆಣ್ಣುಮಕ್ಕಳು ತಮ್ಮನ್ನು ಪ್ರಶ್ನಿಸಿದರೆ ಬಂಧಿಸಿ ಜೈಲಿಗೆ ಹಾಕುತ್ತಾರೆ.#DishaRavi ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ,
ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು.
ನೆನಪಿರಲಿ:
ನಾರಿ ಮುನಿದರೆ ಮಾರಿ.#DishaRaviArrested pic.twitter.com/qNsLwuPM0W— Siddaramaiah (@siddaramaiah) February 15, 2021
ಓದಿ : ಫಲ ನೀಡದ ಹೋರಾಟ-ಮನವಿ; ದಶಕದ ಹಿಂದೆ ಕೈ ತಪ್ಪಿದೆ ತೋಟಗಾರಿಕೆ ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.