ಸಿಎಎ ವಿರೋಧಿಸಿ ಏಕಾಂಗಿ ಹೋರಾಟ
Team Udayavani, Dec 22, 2019, 3:04 AM IST
ಸಾಗರ: ಸಿಎಎ ಹಾಗೂ ಎನ್‌ಆರ್‌ಸಿ ಜಾರಿ ವಿರೋ ಧಿಸಿ ಕಲಾವಿದೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಪೂರ್ಣಿಮಾ ಎಲ್.ಕೆ. ಅವರು ತಾಳಗುಪ್ಪದ ರಾಷ್ಟ್ರೀಯ ಹೆದ್ದಾರಿ-206ರ ಪಕ್ಕದಲ್ಲಿ ಒಂಟಿಯಾಗಿ ಫಲಕ ಹಿಡಿದು ಕೂತು ಶನಿವಾರ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಶಾಸನಗಳು ಮೇಲ್ನೋಟಕ್ಕೆ ಅಲ್ಪಸಂಖ್ಯಾತರ ವಿರೋಧಿ ಎಂಬಂತೆ ಬಿಂಬಿತವಾಗಿವೆ. ವಾಸ್ತವವಾಗಿ ಆದಿವಾಸಿಗಳ, ಅಲೆಮಾರಿಗಳ, ದಲಿತರ, ಮಹಿಳೆಯರ ವಿರೋ ಧಿಯೂ ಆಗಿದೆ. ಮುಗ್ಧರಾದ ಈ ಜನರಿಗೆ ತಮಗಿರುವ ಮೂಲಭೂತ ಹಕ್ಕುಗಳೇನು ಎಂಬುದರ ಅರಿವೂ ಇಲ್ಲ.
ಈ ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೊಳಿಸುವುದರಿಂದ ಹುಟ್ಟಿ ಬೆಳೆದ ಸ್ಥಳದಲ್ಲಿಯೇ ಅವರು ಪರದೇಶಿಗಳಾಗುವ ಅಪಾಯವಿದೆ. ಸಂವಿಧಾನದ ಆಶಯಕ್ಕೆ ವಿರೋಧಿಯಾದ ಈ ಶಾಸನದ ಕರಾಳತೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈ ಮಾದರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.
ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಸೂಚಿಸಿ ಎಚ್ಚರಿಕೆ ನೀಡಿದರು. ನಂತರ, ಪೂರ್ಣಿಮಾ ತಮ್ಮ ಹೋರಾಟವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.