Sirsi-Kumta road: ರಾಗಿಹೊಸಳ್ಳಿ ಗುಡ್ಡ ಕುಸಿತ; ಮತ್ತಷ್ಟು ಅವಾಂತರ!
Team Udayavani, Jul 19, 2024, 9:34 AM IST
ಶಿರಸಿ: ರಾಗಿಹೊಸಳ್ಳಿ ಗುಡ್ಡಕುಸಿದು ರಾಷ್ಟ್ರಿಯ ಹೆದ್ದಾರಿ 766ಇ ಶಿರಸಿ-ಕುಮಟಾ ಸಂಪರ್ಕ ಕಡಿತವಾಗಿದ್ದು, ಶುಕ್ರವಾರಕ್ಕೆ 5ನೇ ದಿನಕ್ಕೆ ಕಾಲಿಟ್ಟಿದೆ.
ಜು.15ರ ಸೋಮವಾರ ರಾತ್ರಿ ಕುಸಿದ ಗುಡ್ಡ ತೆರವಿಗೆ ಜು.16ರ ಮಂಗಳವಾರದಿಂದ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಲಾಗುತ್ತಿತ್ತು. ಸಾಗರ ಮಾಲಾ ಯೋಜನೆಯಲ್ಲಿ ಗುತ್ತಿಗೆ ಪಡೆದ ಆರ್.ಎಸ್.ಎನ್.ಎಸ್. ಕಂಪನಿ ಹಾಗೂ ತಾಲೂಕು ಆಡಳಿತ ಮರ ಹಾಗೂ ಮಣ್ಣಿನ ತೆರವು ಮಾಡುತ್ತಿತ್ತು. ಇದೀಗ ಜು.20ರ ಶನಿವಾರ ಸಂಜೆಯೊಳಗೆ ತೆರವು ಕಾರ್ಯಾಚರಣೆ ಮುಗಿಸಿ ನಾಳೆಯಿಂದ (ಶನಿವಾರ) ಸಂಚಾರಕ್ಕೆ ಬಳಸಬಹುದೆಂಬ ಲೆಕ್ಕಾಚಾರ ಕೂಡ ಈಗ ತಲೆಕೆಳಗಾಗಿದೆ.
ಜು. 18ರ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಮತ್ತೆ ಗುಡ್ಡ ರಸ್ತೆಗೆ ಬಿದ್ದಿದೆ. ಎಕರೆಗೂ ಅಧಿಕ ಪ್ರದೇಶದ ಮಣ್ಣು ರಸ್ತೆಯಿಂದ ತೆರವು ಮಾಡಿದರೂ ಖಾಲಿಯಾಗದ ಸ್ಥಿತಿ ನಿರ್ಮಾಣವಾಗಿದೆ.
ಬದಲಿ ಮಾರ್ಗ ಹೀಗಿದೆ :
ಅಂಕೋಲಾ, ಕಾರವಾರ, ಗೋವಾಗಳಿಗೆ ಸಂಚರಿಸುವವರು ಯಲ್ಲಾಪುರ ಮಾರ್ಗವಾಗಿ ಸಂಚರಿಸಬೇಕು, ಗೋಕರ್ಣ ಕುಮಟಾಕ್ಕೆ ಯಾಣ ಮಾರ್ಗವಾಗಿ ಸಂಚರಿಸಬೇಕು, ಹಾಗೆಯೇ ಹೊನ್ನಾವರ ಕುಮಟಾ, ಮಂಗಳೂರು ಭಾಗಗಳಿಗೆ ಸಂಚರಿಸುವವರು ಸಿದ್ದಾಪುರ ಬಡಾಳ ಘಟ್ಟದ ಮೂಲಕ ಸಂಚರಿಸಲು ಸೂಚಿಸಲಾಗಿದೆ ಎಂದು ಶಿರಸಿ ತಹಶೀಲ್ದಾರ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್.ಕೆ.ಪಾಟೀಲ್
ಮಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಜಾಮೀನು ವಿಚಾರಣೆ ಅರ್ಜಿ ಮುಂದೂಡಿಕೆ
Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.