Covid Scams: ಬಿಜೆಪಿ ಕಾಲದ ಕೋವಿಡ್ ಹಗರಣ ತನಿಖೆಗೆ ಎಸ್‌ಐಟಿ
Team Udayavani, Oct 11, 2024, 7:20 AM IST
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷ ಬಿಜೆಪಿ ತೀವ್ರ ಒತ್ತಡ ಹೇರುತ್ತಿರುವ ಸಂದರ್ಭದಲ್ಲೇ ಸರಕಾರವು ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್-19 ಅಕ್ರಮ ವ್ಯವಹಾರ ಕುರಿತ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ನೇಮಿಸಲು ನಿರ್ಧರಿಸಿದೆ. ಇದರ ಮೇಲ್ವಿಚಾರಣೆಗಾಗಿ ಸಂಪುಟ ಉಪ ಸಮಿತಿಯನ್ನು ಕೂಡ ರಚಿಸಿದೆ.
ಈ ಮೂಲಕ ಕಾಂಗ್ರೆಸ್ ಎದುರಾಳಿಗಳ ವಿರುದ್ಧ “ರಾಜಕೀಯ ಹೋರಾಟ’ದ ಮತ್ತೂಂದು ದಾಳ ಉರುಳಿಸಿದೆ.
ಮುಡಾ ನಿವೇಶನ ಹಂಚಿಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಸಂಪುಟ ಸಭೆ ಈ ನಿರ್ಣಯ ಕೈಗೊಂಡಿದೆ.
ಕೋವಿಡ್-19 ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಈಚೆಗೆ ನಿವೃತ್ತ ನ್ಯಾ| ಮೈಕಲ್ ಡಿ’ ಕುನ್ಹಾ ನೀಡಿರುವ ಮಧ್ಯಾಂತರ ವರದಿ ಆಧರಿಸಿ ಸಚಿವ ಸಂಪುಟ ಸಭೆಯು ಎಸ್‌ಐಟಿ ನೇಮಿಸಲು ತೀರ್ಮಾನಿಸಿದೆ. ಉಪ ಸಮಿತಿಯಲ್ಲಿ ಯಾರ್ಯಾರನ್ನು ನೇಮಿಸಬೇಕು ಎಂಬುದನ್ನು ಸ್ವತಃ ಸಿಎಂ ನಿರ್ಧರಿಸಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಎಸ್‌ಐಟಿ ನೇಮಕ ಮತ್ತು ಉಪ ಸಮಿತಿ ರಚನೆ ಜತೆಗೆ ನ್ಯಾ| ಕುನ್ಹಾ ಅವರ ಮಧ್ಯಾಂತರ ವರದಿ ಆಧರಿಸಿಯೇ ಪ್ರಕರಣದಲ್ಲಿ ಶಾಮೀಲಾದ ವಿವಿಧ ಕಂಪೆನಿಗಳಿಂದ ತತ್‌ಕ್ಷಣ 500 ಕೋಟಿ ರೂ. ವಸೂಲಾತಿಗೂ ನಿರ್ಧರಿಸಲಾಗಿದೆ. ಜತೆಗೆ ಆ ಕಂಪೆನಿಗಳನ್ನು ಕಪ್ಪುಪಟ್ಟಿಗೂ ಸೇರಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ 500 ಕೋ. ರೂ. ಮೊತ್ತದ ಉಪಕರಣಗಳ ಖರೀದಿಗೆ ಸಂಬಂಧಿಸಿ ದ್ದಾಗಿರಬಹುದು ಎಂದು ಪರಮೇಶ್ವರ್ ಹೇಳಿದರಾದರೂ ಆ ಕಂಪೆನಿಗಳು ಯಾವುವು ಎಂಬ ಮಾಹಿತಿ ನೀಡಿಲ್ಲ.
ವಿಚಾರಣ ಆಯೋಗವೊಂದರ ಮಧ್ಯಾಂತರ ವರದಿಯ ಆಧಾರದಲ್ಲಿ ಎಸ್‌ಐಟಿ ಮತ್ತು ಸಚಿವ ಸಂಪುಟ ಉಪ ಸಮಿತಿ ರಚಿಸುತ್ತಿರುವುದು ಇದೇ ಮೊದಲು. ಕೋವಿಡ್ ಅವಧಿ ಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಎರಡೂ ಖಾತೆಗಳನ್ನು ಡಾ| ಕೆ. ಸುಧಾಕರ್ ನಿರ್ವಹಿಸಿದ್ದರು.
ಡಿಕೆಶಿ ಅಧ್ಯಕ್ಷತೆಯಲ್ಲಿ ಉಪಸಮಿತಿ
ಕೋವಿಡ್ ಹಗರಣದ ಸಂಬಂಧ ಸಚಿವ ಸಂಪುಟದ ನಿರ್ಣಯದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಸಚಿವರಾದ ಡಾ| ಪರಮೇಶ್ವರ್, ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಹಾಗೂ ಡಾ| ಶರಣ ಪ್ರಕಾಶ್ ಪಾಟೀಲ್ ಸದಸ್ಯರನ್ನಾಗಿ ನೇಮಿಸಲಾಗಿದೆ.
11 ಸಂಪುಟಗಳ ವರದಿ ಸಲ್ಲಿಕೆ
ನ್ಯಾ| ಕುನ್ಹಾ ಆಯೋಗ 11 ಸಂಪುಟಗಳ ವರದಿ ಸಲ್ಲಿಸಿದೆ. 7,223. 64 ಕೋ.ರೂ. ಮೊತ್ತದ ಅವ್ಯವಹಾರದ ತನಿಖೆ ನಡೆದಿದೆ. ಬಿಬಿಎಂಪಿಯ 4 ವಲಯಗಳಿಂದ ಹಾಗೂ ಕೆಲವು ಜಿಲ್ಲೆ ಗಳಿಂದ ಕ್ರೋಢೀಕರಿಸಿದ ಮಾಹಿತಿ ಆಧರಿಸಿ ಮಧ್ಯಾಂತರ ವರದಿ ನೀಡ ಲಾಗಿದೆ. ಸುಮಾರು 55 ಸಾವಿರ ಕಡತಗಳನ್ನು ಆಯೋಗ ಪರಿಶೀಲಿಸಿದೆ. ಬಿಬಿಎಂಪಿಯ ಇನ್ನೂ ನಾಲ್ಕು ವಲಯ ಹಾಗೂ 31 ಜಿÇÉೆಗಳಿಂದ ವರದಿ ಬರಬೇಕಿದೆ. ಕೋವಿಡ್-19 ಅವಧಿಯಲ್ಲಿ ಸಾರ್ವಜನಿಕರ ಹಣದ ದುರುಪಯೋಗ ಮತ್ತು ಅಧಿಕಾರ ದುರುಪಯೋಗ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ನೀಡಿತ್ತು. ಅದನ್ನು 2023ರ ಜುಲೈ ತಿಂಗಳಿನಲ್ಲಿ ಮಂಡಿಸಲಾಗಿತ್ತು. ಅದರಲ್ಲಿ ಬಹುಕೋಟಿ ರೂ. ಹಗರಣ ನಡೆದಿರುವ ಬಗ್ಗೆ ಉಲ್ಲೇಖೀಸಿತ್ತು. ಈ ವರದಿ ಆಧಾರದಲ್ಲಿ ಸತ್ಯ ಶೋಧನೆ ಮಾಡಿ ವರದಿ ನೀಡುವಂತೆ ನ್ಯಾ| ಮೈಕಲ್ ಡಿ’ಕುನ್ಹಾ ಆಯೋಗವನ್ನು ನೇಮಿಸಲಾಗಿತ್ತು. ಅದು ಕಳೆದ ಆಗಸ್ಟ್ ನಲ್ಲಿ ಮಧ್ಯಾಂತರ ವರದಿ ಸಲ್ಲಿಸಿತ್ತು. ಅದು 12 ವಿಶ್ಲೇಷಣ ವರದಿಗಳನ್ನು ನೀಡಿದೆ. ಅದನ್ನು ಆಧರಿಸಿ ಈಗ ಸಂಪುಟ ನಿರ್ಣಯ ಕೈಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.