ಸ್ತ್ರೀ ಲೋಲ,ಹೆತ್ತವರಿಗೇ ಸ್ಕೆಚ್;ಗನ್ ಸಹಿತ ಸೈಕೋ ಪಾತ್ ಕಳ್ಳ ಸೆರೆ
Team Udayavani, Jul 10, 2018, 3:20 PM IST
ಬೆಂಗಳೂರು: ಹೆತ್ತ ತಂದೆ ತಾಯಿಯನ್ನೇ ಕೊಲೆ ಮಾಡಲು ಗನ್ ಖರೀದಿ ಮಾಡಿ ಸಂಚು ಹೂಡಿದ್ದ ಸೈಕೋ ಪಾತ್ ಬೈಕ್ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಕಾಮಾಕ್ಷಿ ಪಾಳ್ಯದ ವೃಷಭಾವತಿನಗರ ನಿವಾಸಿ 25 ರ ಹರೆಯದ ಆದಿತ್ಯ ಶರಣ್ ಎಂಬಾತನಾಗಿದ್ದಾನೆ.
ಬಂಧಿತ ಆದಿತ್ಯ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಮುಗಿಸಿದ್ದ, ದಿನಕ್ಕೊಬ್ಬರಂತೆ ಹುಡುಗಿಯರನ್ನು ಮನೆಗೆ ಕರೆ ತರುತ್ತಿದ್ದ , ಮಗನ ದುರ್ಬುದ್ಧಿಯ ವಿರುದ್ಧ ಪೋಷಕರು ವಿರೋಧ ವ್ಯಕ್ತ ಪಡಿಸಿ ಮದುವೆ ಮಾಡಲು ಮುಂದಾಗಿದ್ದರು. ಆ ಬಳಿಕ ವಿಪರೀತ ದುರ್ಬುದ್ಧಿ ತೋರಿದ್ದ ಕಾರಣ ಆತನನ್ನು ಮನೆಯಿಂದ ಹೊರ ಹಾಕಿದ್ದರು ಮಾತ್ರವಲ್ಲದೆ ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮನೆಯಿಂದ ಹೊರ ಬಿದ್ದ ಬಳಿಕ ಮಾನಸಿಕವಾಗಿ ಖನ್ನತೆಗೆ ಜಾರಿದ್ದ ಆದಿತ್ಯ ತಂದೆ,ತಾಯಿಯನ್ನà ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ದಿನ ಕಳೆಯಲು ಬೈಕ್‌ಗಳ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ. ಬೈಕ್‌ಗಳ ನಂಬರ್ ಪ್ಲೇಟ್ ಫೋಟೋ ತೆಗೆದು ಆರ್‌ಟಿಓ ಕಚೇರಿಗೆ ತೆರಳಿ ದಾಖಲೆಗಳನ್ನು ಪಡೆದು ಬಳಿಕ ಕದ್ದು ಮಾರಾಟ ಮಾಡುತ್ತಿದ್ದ .ಈತ ಬೈಕ್ ಕಳ್ಳತನ ಮಾಡುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೆಚ್ಚಾಗಿ ಬುಲೆಟ್‌ಗಳನ್ನೇ ಗುರಿಯಾಗಿರಿಸಿಕೊಳ್ಳುತ್ತಿದ್ದ.
ತಂದೆ ತಾಯಿಯನ್ನು ಕೊಲ್ಲಲು ನಾನಾ ಯತ್ನ!
ತಂದೆ , ತಾಯಿಯನ್ನು ಕೊಂದೇ ತೀರುತ್ತೇನೆ ಎಂದು ಸಿದ್ದವಾಗಿದ್ದ ಆದಿತ್ಯ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ್ದ. ಆದರೆ ಆ ವಿಚಾರ ತಿಳಿದ ತಂದೆ,ತಾಯಿ ಪ್ರಾಣ ಉಳಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಪಿಸ್ತೂಲ್ ಖರೀದಿ
ಬಿಹಾರ ಮೂಲದ ಗೆಳೆಯನ ಸಹಾಯದಲ್ಲಿ ಪಿಸ್ತೂಲ್ ಖರೀದಿ ಮಾಡಿ ತಂದೆ, ತಾಯಿಯನ್ನು ಕೊಲ್ಲಲು ಮುಹೂರ್ತ ನೋಡುತ್ತಿದ್ದ.
ಬೈಕ್ ಕದಿಯುವಾಗ ಬಲೆಗೆ
ಬೈಕ್ ಕಳ್ಳತನ ಮಾಡುತ್ತಿದ್ದಾಗ ಖತರ್ನಾಕ್ ಆದಿತ್ಯ ಪೊಲೀಸರ ಬಲೆಗೆ ಬಿದ್ದಿದ್ದು, ಪಿಸ್ತೂಲ್ ಮತ್ತು 8 ಸಜೀವ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತನ ವಿರುದ್ಧ ಕೊಲೆಯತ್ನ, ಕಳ್ಳತನ, ಮೋಟಾರ್ ವಾಹನ ಕಾಯಿದೆ ಮತ್ತು ಆಕ್ರಮ ಶಸ್ತ್ರಾಸ್ತ್ರ ಕಾಯಿದೆ ಅಡಿ ಪ್ರಕರಣಗಳನ್ನು ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.