ಕೈ ಪಕ್ಷಕ್ಕೆ ಮ್ಯಾನೇಜರ್ ಗಳಿದ್ರೆ ಸಾಕು,ಸಕ್ರಿಯ ರಾಜಕಾರಣ ಮುಂದುವರಿಕೆ
Team Udayavani, Jan 29, 2017, 12:36 PM IST
ಬೆಂಗಳೂರು : 46 ವರ್ಷಗಳಿಂದ ನೆಮ್ಮದಿಯಿಂದ ವಾಸವಾಗಿದ್ದ ಸ್ವಂತ ಮನೆಯನ್ನು ತೊರೆಯಬೇಕಾಗಿರುವ ಅನಿವಾರ್ಯತೆ ಎದುರಾಗಿದೆ… ಇದು ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ತೊರೆದು ಭಾನುವಾರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ ನೋವಿನ ಮಾತು.
ಸುದ್ದಿಗೋಷ್ಠಿಯ ಮೊದಲಿಗೆ ನಾನು ಪತ್ರಕರ್ತರೊಂದಿಗೆ ಬೆಳೆದಿದ್ದೇನೆ ಮತ್ತು ಅವರು ನನ್ನನ್ನು ಬೆಳೆಸಿದ್ದಾರೆ. ಕೆಲವರು ನಮ್ಮನ್ನಗಲಿದ್ದಾರೆ ಅವರೆಲ್ಲರನ್ನೂ ನಾನು ನೆನಪಿಸಿಕೊಳ್ಳುತ್ತೇನೆ ಎಂದರು.
1962 ಅಮೆರಿಕದಿಂದ ವಾಪಾಸ್ ಬಂದೆ ಆಗ ದೇಶ ಸಾರ್ವತ್ರಿಕ ಚುನಾವಣೆಗಳಿಗೆ ಸಿದ್ದವಾಗುತ್ತಿದೆ. ನಾನು ಪ್ರತಿಷ್ಠಿತ ಮುಖಂಡರೊಬ್ಬರ ವಿರುದ್ದ ನಾನು ಪ್ರಜಾ ಸಮಾಜವಾದಿ ಪಕ್ಷದಿಂದ ನಿಲ್ಲಬೇಕಾದ ಪರಿಸ್ಥಿತಿ ಬಂತು.ನೆಹರೂ ಅವರು ಪ್ರಚಾರಕ್ಕೆ ಬಂದಿದ್ದರು. ನಾನು ಪಕ್ಷದ ಕಚೇರಿಯಿಂದ ನೋಡುತ್ತಿದೆ ,25 ರಿಂದ 35 ಸಾವಿರ ಜನರು ಅವರನ್ನು ನೋಡಲು ಸೇರಿದ್ದರು. ಆದರೆ ನಾನು ಹೆದರಲ್ಲಿಲ್ಲ . ಆ ಚುನಾವಣೆಯಲ್ಲಿ ಪ್ರಬಲ ಹೋರಾಟ ಮಾಡಿ ಜಯಗಳಿಸಿದೆ. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಆಗ ಕಾಂಗ್ರೆಸ್ ಪ್ರತಿಷ್ಠಿತವಾಗಿತ್ತು, ನಾನು ಅಲೆಯನ್ನು ನೆಚ್ಚಿಕೊಂಡು ಬಂದ ನಾಯಕನಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
1968 ರಲ್ಲಿ 31 ನೇ ವಯಸ್ಸಿನಲ್ಲಿ ಲೋಕಸಭೆಗೆ ಹೋದ ಕಾಲದಲ್ಲಿ ಕೈ ಇಬ್ಟಾಗವಾಯಿತು. ಇಂದಿರಾಗಾಂಧಿ ಅವರ ಅಲ್ಪ ಮತದ ಸರ್ಕಾರವನ್ನು ನಾವೆಲ್ಲರು ಎತ್ತಿ ಹಿಡಿದೆವು . ಇಂದಿರಾ ಅವರೊಂದಿಗೆ ಗಾಢವಾದ ಮೈತ್ರಿ ಹೊಂದುವ ಅವಕಾಶ ಒದಗಿ ಬಂತು. ಇಂದಿರಾ ಮತ್ತು ಪಿಎಸ್‌ಪಿ ಮುಖಂಡರ ನಡುವೆ ರಾಯಭಾರಿಯಾಗಿದ್ದೆ. ಅವರು ಬಹಳ ಗೌರವ ಮತ್ತು ವಿಶ್ವಾಸ ದಿಂದ ನಡೆಸಿಕೊಂಡಿದ್ದರು ಎಂದರು.
ಪಕ್ಷ ನಿಷ್ಠೆ ಮಾತ್ರ ಎಷ್ಟೇ ಸವಾಲು ಎದುರಾದರೂ ಬದಲಾಗಿಲ್ಲ.ಇಂದು ದೊಡ್ಡ ಸವಾಲು ಎದುರಾಗುತ್ತಿದೆ. ನನಗನ್ನಿಸುತ್ತದೆ ಕಾಂಗ್ರೆಸ್‌ಗೆ ಜನಸಮುದಾಯದ ಲೀಡರ್‌ಗಳು ಬೇಕೊ ಬೇಡವೊ ಎನ್ನುವ ಗೊಂದಲದಲ್ಲಿದೆ. ಅವರಿಗೆ ಪರಿಸ್ಥಿತಿಯನ್ನು ನಿಭಾಯಿಸುವ ಮ್ಯಾನೇಜರ್‌ಗಳು ಇದ್ದರೆ ಸಾಕು ಅನ್ನುವ ತೀರ್ಮಾನಕ್ಕೆ ಬಂದಿದ್ದಾರೆ.
ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ದ್ವಂದ್ವತೆ ಕಾಣಲಿಕ್ಕೆ ಪ್ರಾರಂಭವಾಗಿದ್ದು ಅವುಗಳನ್ನು ರಾಜಕೀಯ ಪಕ್ಷಗಳು ಮೆಟ್ಟಿ ನಿಲ್ಲಬೇಕಿದೆ. ಯಾವ ಪಕ್ಷದಲ್ಲಿ ಹಿರಿತನಕ್ಕೆ ಬೆಲೆ ಇಲ್ಲವೋ ಅದು ಒಳ್ಳೆಯದಲ್ಲ , ಎಲ್ಲಾ ಪಕ್ಷಗಳು ಹಿರಿತನಕ್ಕೆ ಬೆಲೆ ನೀಡಬೇಕು ಹಾಗಂತ ಅವರದ್ದೇ ಪಾಲಿಸಬೇಕೆಂದು ಹೇಳುವುದಿಲ್ಲ ಎಂದರು.
ಇಂದಿರಾ ಗಾಂಧಿ ಅವರ ಶಕೆ ಮುಗಿದ ಬಳಿಕ ರಾಜೀವ್ ಗಾಂಧಿ ಅವರ ಶಕೆ ಪ್ರಾರಂಭವಾಯಿತು. ನನ್ನನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಿದ್ದೇ ಅವರು .ರಾಜೀವ್ ಗಾಂಧಿ ಅವರ ಕೊಡುಗೆ ಅಪಾರ ,ಅವರು ಹತ್ತಾರು ವರ್ಷ ನಮ್ಮೊಂದಿಗೆ ಇರಬೇಕಾಗಿತ್ತು ಆದರೆ ವಿಧಿಯ ಲಿಖೀತ ಬೇರೆಯೇ ಆಗಿತ್ತು ಎಂದರು.
ಸಾರ್ವಜನಿಕ ಜೀವನದಲ್ಲಿ ರಾಗ ದ್ವೇಷಗಳನ್ನು ದೂರ ಇಡಬೇಕಾದುದ್ದು ಅವಶ್ಯ , ಅಧಿಕಾರ ಪಡೆದ ಬಳಿಕ ಎಲ್ಲ ಸಮಾಜಗಳನ್ನು ಒಂದೇ ದೃಷ್ಟಿಯಿಂದ ನೋಡಬೇಕು ಎಂದರು.
ನನಗೆ ನೋವಾದದ್ದು ವಯಸ್ಸನ್ನು ಕಾರಣವನ್ನಾಗಿ ಮಾಡಿಕೊಂಡು ಒಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನನ್ನು ಸೈಡ್ ಲೈನ್ ಮಾಡುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಲೆ ಇದೆ ಎಂದು ನೋವು ತೋಡಿಕೊಂಡರು.
ವಯಸ್ಸು ನಿಮ್ಮ ಮನೋಸ್ಥಿತಿಯಲ್ಲಿ ನಿಲ್ಲುತ್ತದೆ. ಕೆಲವರು 40 ರಲ್ಲಿ 80 ವ ವಯಸ್ಸಿನಂತಿರಬಹುದು. ಇನ್ನು ಕೆಲವರು 80 ರ ಗಡಿಯಲ್ಲಿ ಚುರುಕಾಗಿರಬಹುದು. ನನ್ನ ನಡೆದಾಟದಲ್ಲೂ ನಿಧಾನಗತಿ ಬಂದಿದೆ. ಪ್ರಾಯ ಎನ್ನುವಂತಹದ್ದು ತರತಕ್ಕಂತಹ ಪ್ರಾಕೃತಿಕ ಬದಲಾವಣೆ ಎಂದರು.
ಪ್ರತಿಯೊಬ್ಬರಿಗೂ ಸ್ವಾಭಿಮಾನ, ಆತ್ಮಗೌರವ ಎಲ್ಲರಿಗೂ ಅಮೂಲ್ಯವಾದುದ್ದು , ತಲೆಮಾರುಗಳು ಬದಲಾದರೂ ಮೌಲ್ಯಗಳು ಬದಲಾಗುವುದಿಲ್ಲ ಎಂದರು.
ನನಗೆ ಸೋನಿಯಾ ಗಾಂಧಿ ಅವರು ಅಪಾರ ಗೌರವ ನೀಡಿದ್ದಾರೆ. ಅವರ ಆರೋಗ್ಯ ಸುಧಾರಿಸಲಿ ಎನ್ನುವುದು ನನ್ನ ಪ್ರತಿನಿತ್ಯದ ಪ್ರಾರ್ಥನೆ. ನನಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದೆ.ಈಗ ನಾನು ಪಕ್ಷವನ್ನು ತೊರೆಯುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದರು.
ನಿವೃತ್ತಿ ಎನ್ನುವಂತಹ ಪದ ನನ್ನ ಡಿಕ್ಷನರಿಯಲ್ಲೇ ಇಲ್ಲ
ಕೆಲವರಿಗೆ ನನ್ನನ್ನು ರಾಜಕೀಯದಿಂದ ನಿವೃತ್ತಿ ಮಾಡಬೇಕೆಂಬ ಉದ್ದೇಶ ಇರಬೇಕು. ಆದರೆ ನಾನು ನಿವೃತ್ತಿಯಾಗುವುದೇ ಇಲ್ಲ ಎಂದರು.
ರಾಹುಲ್ ಗಾಂಧಿ ಬಗ್ಗೆ ಕೇಳಿದಾಗ ನಾನು ಉಪಾಧ್ಯಕ್ಷರ ವಿಚಾರದಲ್ಲಿ ಮಾತನಾಡುವುದಿಲ್ಲ , ಅಧ್ಯಕ್ಷರ ವಿಚಾರದಲ್ಲಿ ಮಾತನಾಡುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.