ವಿದೇಶಾಂಗ ಸಚಿವರಾಗಿ ಎಸ್‌ಎಂಕೆ ಚಾಣಾಕ್ಷತೆ; ಪಾಕ್ ಜತೆಗೆ ಉತ್ತಮ ಸಂಬಂಧ ಹೊಂದುವಲ್ಲೂ ಸಫಲ
80ಕ್ಕೂ ಅಧಿಕ ದೇಶಗಳಿಗೆ ಪ್ರವಾಸ; ಹಲವು ರಾಷ್ಟ್ರಗಳ ಜತೆಗೆ ಉತ್ತಮ ಬಾಂಧವ್ಯ
Team Udayavani, Dec 11, 2024, 7:45 AM IST
ಯುಪಿಎ-2ರ ಅವಧಿಯಲ್ಲಿ ದೇಶದ ವಿದೇಶಾಂಗ ಸಚಿವರಾಗಿ ಎಸ್.ಎಂ.ಕೃಷ್ಣ ಕಾರ್ಯನಿರ್ವಹಿಸಿದ್ದರು. 2009 ಮೇ 3ರಿಂದ 2012 ಅ.28ರ ವರೆಗೆ ಅವರು ಸಚಿವಾಗಿದ್ದರು. ಜನಾನುರಾಗಿ ಮನೋ ಭಾವ, ಸುದೀರ್ಘ ರಾಜಕೀಯ ಪಯಣದ ಅನುಭವ ಹಾಗೂ ರಾಜತಾಂತ್ರಿಕ ಚಾಣಕ್ಯತೆಯೊಂದಿಗೆ ವಿದೇಶಾಂಗ ಸಚಿವ ಸ್ಥಾನವನ್ನು ನಿಭಾಯಿಸಿದ ಅವರು ತಮ್ಮ ಸೇವಾ ಅವಧಿಯಲ್ಲಿ ಬರೋಬ್ಬರಿ 80ಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಿದ್ದರು, 80ನೇ ವಯಸ್ಸಿಗೆ ಸಚಿವ ಸ್ಥಾನದಿಂದ ಕೆಳಗಿಳಿದರು.
20/11 ಮುಂಬಯಿ ದಾಳಿ ಬಳಿಕ ಪಾಕಿಸ್ಥಾನ ಮತ್ತು ಭಾರತದ ನಡುವಿನ ಸಂಬಂಧ ಮುರಿದು ಬಿದ್ದಿತ್ತು. ಈ ಸಂದರ್ಭದಲ್ಲಿ ಪಾಕ್ ಜತೆಗೆ ಮಾತುಕತೆ ನಡೆಸಿ ಆಗಿನ ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಟಾನಿ ಖಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದುವಲ್ಲೂ ಕೃಷ್ಣ ಸಫಲರಾದರು. ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಸೇರಿದಂತೆ ಅನೇಕ ದಿಗ್ಗಜರ ಜತೆಗೆ ಸ್ನೇಹಮಯ ಬಾಂಧವ್ಯವನ್ನು ಹೊಂದಿದ್ದರು. ವಿಶ್ವ ರಾಷ್ಟ್ರಗಳೊಂದಿಗೆ ಕೃಷ್ಣ ಉತ್ತಮ ಬಾಂಧವ್ಯ ಹೊಂದಿದ್ದರು ಎಂಬುದಕ್ಕೆ 2010ರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಶಾಶ್ವತವಲ್ಲದ ಸದಸ್ಯತ್ವ ಪಡೆಯಲು ಭಾರತದ ಪ್ರಯತ್ನಕ್ಕೆ ಸಿಕ್ಕ ಫಲವೇ ಸಾಕ್ಷಿ.
100ಕ್ಕೂ ಅಧಿಕ ದೇಶಗಳ ವಿದೇಶಾಂಗ ಸಚಿವರ ಜತೆಗೆ ಫೋನ್ ಮಾತಕತೆ ಹಾಗೂ ಹಲವರನ್ನು ಭೇಟಿಯಾಗಿಯೂ ಮಾತುಕತೆ ನಡೆಸಿದ್ದರು. ಇದು ಅಗತ್ಯಕ್ಕಿಂತ ಹೆಚ್ಚಿಗೆ 59 ಮತವನ್ನು ಮಂಡಳಿಯಲ್ಲಿ ಭಾರತದ ಪರವಾಗಿ ತಂದುಕೊಟ್ಟಿತು. 192 ಮತಗಳ ಪೈಕಿ 187 ಮತಗಳು ಭಾರತಕ್ಕೆ ಬಂದಿದ್ದವು. ಪಾಸ್‌ಪೋರ್ಟ್, ವೀಸಾ ಸೇವೆಗಳ ವಿಳಂಬ ಕಡಿತಕ್ಕಾಗಿ 77 ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಸ್ಥಾಪನೆಗೆ ಯೋಜನೆ ಘೋಷಿಸಿದ್ದು ಮತ್ತು ಲಿಬಿಯಾ ಕ್ರಾಂತಿಯ ವೇಳೆ ಭಾರತೀಯರನ್ನು ಮರಳಿ ಕರೆತರುವಲ್ಲಿ ಕೃಷ್ಣ ನೇತೃತ್ವದಲ್ಲಿ ನಡೆದ ಆಪರೇಷನ್‌ಗಳು ಕೂಡ ಸ್ಮರಣೀಯ.
ತಪ್ಪು ಭಾಷಣ ಓದಿದ್ದರು: 2011ರಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾಷಣ ಮಾಡುತ್ತಿದ್ದ ಕೃಷ್ಣ ಅವರು ತಮ್ಮ ಭಾಷಣದ ಬದಲಿಗೆ ಪೋರ್ಚುಗೀಸ್ ವಿದೇಶಾಂಗ ಸಚಿವ ಲೂಯಿಸ್ ಅಮಾಡೋ ಅವರ ಭಾಷಣ ಪ್ರತಿಯನ್ನು ಓದಿಬಿಟ್ಟಿದ್ದರು. 3 ನಿಮಿಷಗಳ ವರೆಗೂ ಅದೇ ಭಾಷಣ ಪ್ರತಿಯನ್ನು ಓದಿದ ಕೃಷ್ಣ ಅವರನ್ನು ಆಗಿನ ರಾಯಭಾರ ಹದೀìಪ್ ಸಿಂಗ್ ಪುರಿ ಎಚ್ಚರಿಸಿದರು. ಬಳಿಕ ಮತ್ತೂಮ್ಮೆ ಮೊದಲಿನಿಂದ ಭಾಷಣ ಮಾಡಲು ಅವರಿಗೆ ಅವಕಾಶ ನೀಡಲಾಗಿತ್ತು. ಇದರಿಂದ ಕೃಷ್ಣ ಮುಜು ಗರಕ್ಕೀಡಾಗಿದ್ದರು.
ಅಜಾತಶತ್ರುವಾದರೂ
ಬೆನ್ನುಬಿಡದ ವಿವಾದಗಳು
ಎಸ್.ಎಂ.ಕೃಷ್ಣ ಅವರು ಅಜಾತಶತ್ರು ಎನಿಸಿಕೊಂಡರೂ ಹಲವು ವಿವಾದಗಳು ಅವರನ್ನು ಕಾಡಿದವು. ಶಾಸಕರಾಗಿದ್ದಾಗ ಹಾಗೂ ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದ ಸಮಯದಲ್ಲಿ ಹೆಚ್ಚು ಕಾಲ ಟೆನಿಸ್ ಆಡುತ್ತಾರೆ. ರಾಜಕೀಯ ಚಟುವಟಿಕೆಗಳಲ್ಲಿ ಅವರ ಭಾಗವಹಿಸುವಿಕೆ ಕಡಿಮೆ ಎಂಬ ಆರೋಪಗಳು ಕೇಳಿಬಂದಿದ್ದವು.
ಬಾಲ್ಯದಿಂದಲೂ ಸಂಗೀತಾಭ್ಯಾಸ ಮಾಡಿದ್ದ ಕೃಷ್ಣ ಅವರು ಬಿಡುವಿನ ಸಮಯದಲ್ಲೆಲ್ಲ ಸಂಗೀತ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗಿಯಾಗುತ್ತಿದ್ದರು. ಪ್ರಮುಖ ಸಂಗೀತಗಾರರ ಕಾರ್ಯಕ್ರಮವಿದ್ದಾಗ ಕೃಷ್ಣ ಅವರು ಭಾಗಿಯಾಗುತ್ತಿದ್ದುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರನ್ನು “ವೈಟ್ ಕಾಲರ್ ಸಿಎಂ’ ಎಂದು ಕರೆಯಲಾಗುತ್ತಿತ್ತು. ಜನರ ಜತೆ ಹೆಚ್ಚು ಬೆರೆಯುವುದಿಲ್ಲ. ಯಾವಾಗಲೂ ಉದ್ಯಮಿಗಳ ಜತೆಯಲ್ಲೇ ಕಾಲ ಕಳೆಯುತ್ತಾರೆ ಎಂಬ ಟೀಕೆಗಳು ಕೇಳಿಬರುತ್ತಿದ್ದವು.
ವಿದೇಶಾಂಗ ಸಚಿವರಾಗಿದ್ದ ಸಮಯದಲ್ಲಿ ವಿಶ್ವಸಂಸ್ಥೆ ಯಲ್ಲಿ ಪೋರ್ಚುಗಲ್ ಭಾಷಣ ಓದಿ ಟೀಕೆಗೆ ತುತ್ತಾಗಿ ದ್ದರು. ಅಲ್ಲದೇ ಭಾರತದ ಅಧಿಕಾರಿಯನ್ನು ಉಗ್ರನಿಗೆ ಹೋಲಿಸಿದ ಸಂದರ್ಭದಲ್ಲಿ ಅದರ ವಿರುದ್ಧ ಕೃಷ್ಣ ಅವರು ಮಾತನಾಡಲಿಲ್ಲ ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಮೃದು ಮಾತನಾಡುವ ಕೃಷ್ಣ ವಿದೇಶಾಂಗ ಸಚಿವರಾಗಲು ಸರಿಯಲ್ಲ ಎಂಬ ಟೀಕೆ ಸದಾ ಕೇಳಿಬರುತ್ತಿತ್ತು.
ಕೃಷ್ಣ ವಿರುದ್ಧ ನೆಹರೂ ಪ್ರಚಾರ ಮಾಡಿದ್ರೂ ಗೆದ್ದಿದ್ದರು
ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದ ಎಸ್‌ಎಂಕೆ ಅವರಿಗೆ ಜವಹಾರ್ ಲಾಲ್ ನೆಹರೂ ಅವರ ನೀತಿಗಳು ಹಿಡಿಸುತ್ತಿರಲಿಲ್ಲ. ನೆಹರೂ ಅವರ ಆಪ್ತರಾಗಿದ್ದ ಡಾ| ಅಶೋಕ್ ಮೆಹ್ತಾರ ಜತೆ ನಿರಂತರ ಸಂಪರ್ಕದಲ್ಲಿದ್ದರೂ ಕಾಂಗ್ರೆಸ್ ಸೇರಲು ಅವರಿಂದ ಬಂದಿದ್ದ ಪರೋಕ್ಷ ಆಹ್ವಾನವನ್ನು ತಿರಸ್ಕರಿಸಿದ್ದರು. 1962ರಲ್ಲಿ ಮದ್ದೂರು ಕ್ಷೇತ್ರದಿಂದ ಪಿಎಸ್‌ಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದಾಗ ಪ್ರಧಾನಿಯಾಗಿದ್ದ ನೆಹರೂ ಅವರೇ ಕೃಷ್ಣ ವಿರುದ್ಧ ಪ್ರಚಾರ ನಡೆಸಿದ್ದರು. ಆದರೂ ಗೆಲುವು ಕೃಷ್ಣ ಅವರ ಪಾಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.