ಸಾಹಿತ್ಯದಲ್ಲಿದೆ ಸಮಾಜ ಒಗ್ಗೂಡಿಸುವ ಶಕ್ತಿ

"ಹದಿಹರೆಯಕ್ಕೆ ಸಾಹಿತ್ಯ ಸುಧೆ' ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ

Team Udayavani, Mar 16, 2021, 6:52 PM IST

ಬೀದರ : ಸಾಹಿತ್ಯ ಗಾಯ ಮಾಡುವ ಆಯುಧವಲ್ಲ. ಬದಲಾಗಿ ಅದು ಔಷಧ ಹಚ್ಚುವ ಕೈ ಆಗಿದೆ. ದೇಶ, ಸಮಾಜ ಮತ್ತು ಮನಸ್ಸು ಒಂದುಗೂಡಿಸುವ ಶಕ್ತಿ ಸಾಹಿತ್ಯದಲ್ಲಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ ಹೇಳಿದರು.

ನಗರದ ಕರ್ನಾಟಕ ಕಾಲೇಜು ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಾತೃಭೂಮಿ ಸೇವಾ ಪ್ರತಿಷ್ಠಾನದಿಂದ ನಡೆದ “ಹದಿಹರೆಯಕ್ಕೆ ಸಾಹಿತ್ಯ ಸುಧೆ’ ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆ ಜೀವಿ ಕಲ್ಯಾಣ ಸಾ ಧಿಸುವಂತೆ ಪ್ರೇರೇಪಿಸುವ ಸಾಹಿತ್ಯ ಹೊರಬರಬೇಕು ಎಂದು ಸಲಹೆ ನೀಡಿದರು.

ಇಂದಿನ ಕಾಲದಲ್ಲಿ ಕವಿಗಳಿಗೆ ತನ್ನ ಕಾವ್ಯದಲ್ಲಿ ರಸ ಬೇಕಾಗಿಲ್ಲ. ಕಸವೇ ಬೇಕಾಗಿದೆ. ವಿಮರ್ಶೆ ಎಂದರೆ ಹೆದರುತ್ತಾರೆ. ಇಂತಹ ಸಾಹಿತ್ಯ ಬಹಳ ದಿನ ಉಳಿಯಲ್ಲ. ಗಡಿ ಸಮಸ್ಯೆ ಕನ್ನಡದಿಂದ ಮರಾಠಿಗೆ, ಮರಾಠಿಯಿಂದ ಕನ್ನಡಕ್ಕೆ ಸಾಹಿತ್ಯ ಅನುವಾದ ಮಾಡುವ ಮೂಲಕ ಬಗೆಹರಿಸಬೇಕೆ ವಿನಃ ರಾಜಕೀಯ ಸ್ವರೂಪದಿಂದ ವೈಮನಸ್ಸು ಬರುವಂತೆ ಮಾಡಬಾರದು ಎಂದು ಹೇಳಿದರು.

ಬೀದರ ಸಾಹಿತ್ಯ ಮತ್ತು ಸಾಹಿತಿಗಳ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ, ಸಾಹಿತಿ ಶಿವಕುಮಾರ ಕಟ್ಟೆ, “ವಡ್ಡಾರಾಧನೆ ಕೃತಿ ಶಿವಕೋಟ್ಯಾಚಾರ್ಯ ಬೀದರ ಜಿಲ್ಲೆಯಲ್ಲಿಯೇ ರಚಿಸಿದ್ದು ಹೆಮ್ಮೆಯ ವಿಷಯ. ವಿಶ್ವದ ಹೃದಯ ಗೆದ್ದ ವಚನ ಸಾಹಿತ್ಯ ಜಿಲ್ಲೆಯ ಬಸವಕಲ್ಯಾಣದಲ್ಲಿ ರಚನೆಯಾಗಿದ್ದು ಎಂದು ಹೇಳಲು ಹೃದಯತುಂಬಿ ಬರುತ್ತದೆ. ಜತೆಗೆ ಜಿಲ್ಲೆಯ ಸಾಹಿತಿಗಳು ಅಭಿನಂದನಾ ಗ್ರಂಥ, ತತ್ವಪದಗಳ ಸಂಗ್ರಹ, ಜನಪದ ಹಾಡುಗಳ ಸಂಗ್ರಹ, ಗಜಲ್‌ ರಚನೆ, ಆಧುನಿಕ ವಚನಗಳ ರಚನೆ, ಬೌದ್ಧ ಸಾಹಿತ್ಯ, ದಾಸ ಸಾಹಿತ್ಯ, ಕಾದಂಬರಿ, ಸಾನೆಟ್‌ ಕವಿತೆಗಳ ರಚನೆ, ಪ್ರವಾಸ ಕಥನ, ಶರಣ ಸಾಹಿತ್ಯ, ಲಲಿತ ಪ್ರಬಂಧ ಕಡೆಗೆ ಒಲವು ತೋರಿಸಿ ಇತ್ತೀಚೆಗೆ ರಚನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಬೀದರ ಜಿಲ್ಲೆಯ ಕವಿಗಳು ಹೆಚ್ಚು ಒಲವು ತೋರಿದ್ದು ಕಾವ್ಯ ಕ್ಷೇತ್ರಕ್ಕೆ. ಆದರೆ, ಖಂಡಕಾವ್ಯ, ನಾಟಕಗಳ ರಚನೆ ಮತ್ತು ಮಹಾಕಾವ್ಯಗಳ ಕಡೆಗೆ ಗಮನ ಹರಿಸದಿರುವುದು ವಿಪರ್ಯಾಸ. ಸಾಹಿತ್ಯ ವ್ಯಕ್ತಿಗೆ ಚಿಂತನೆಗೆ ಹಚ್ಚುತ್ತದೆ. ನಮ್ಮೊಳಗೆ ಇರುವ ವಿಶೇಷ ವ್ಯಕ್ತಿಗೆ ಜಾಗೃತಿಗೊಳಿಸುವ ಕಾರ್ಯ ಸಾಹಿತ್ಯ ಮಾಡುತ್ತದೆ. ಯುವಕರು ಸಾಹಿತ್ಯ ರಚಿಸುವ ಜತೆಗೆ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವ ಕಾರ್ಯ ಹೆಚ್ಚು ಮಾಡಬೇಕು ಎಂದರು.

ಕವನ ವಾಚನ: ಕಣ್ಣಿನ ಮಹತ್ವ, ತಂದೆ-ತಾಯಿಗಳ ಕಾಳಜಿ, ನಿಸರ್ಗ, ಅಧ್ಯಯನ ವಿಷಯಗಳನ್ನೊಳಗೊಂಡ ಕವಿತೆಗಳನ್ನು ವಿದ್ಯಾರ್ಥಿಗಳಾದ ಪ್ರಾರ್ಥನಾ, ರೀಟಾ, ಭವಾನಿ, ನಿಖೀತಾ ಮತ್ತು ಶಿಭಾ ಇತರರು ವಾಚನ ಮಾಡಿದರು. ಈ ವೇಳೆ ಡಾ| ಡಿ.ಬಿ ಕಂಬಾರ, ಡಾ| ಸುನಿತಾ ಕೂಡ್ಲಿಕರ್‌, ಡಾ| ಎಂ.ಡಿ ಯೋಗೀಶ, ಡಾ| ಮಾದಯ್ಯ ಸ್ವಾಮಿ, ಪ್ರೊ| ಲಕೀÒ$¾ ಕುಂಬಾರ ಇತರರಿದ್ದರು. ಕಾಲೇಜು ಪ್ರಾಚಾರ್ಯ ಡಾ| ಜಗನ್ನಾಥ ಹೆಬ್ಟಾಳೆ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಗುರುನಾಥ ರಾಜಗೀರಾ ಪ್ರಾಸ್ತಾವಿಕ ಮಾತನಾಡಿದರು. ಸಚಿನ್‌ ವಿಶ್ವಕರ್ಮ ನಿರೂಪಿಸಿದರು. ಡಾ| ವಿವೇಕಾನಂದ ಸಜ್ಜನ್‌ ವಂದಿಸಿದರು.

ಶರಣರ ತತ್ವದಿಂದ ಅನ್ಯಾಯ ತಡೆ: ಡಾ|ಅವಧೂತರು ಬೀದರ: ಆಧುನಿಕ ಬದುಕಿನಲ್ಲಿ ಮನುಷ್ಯ ಅಕ್ಕ ಮಹಾದೇವಿ ಹಾಗೂ ಇತರ ಶಿವಶರಣರ ತತ್ವ ಅಳವಡಿಸಿಕೊಂಡು ಅವರ ಸಾಹಿತ್ಯ ಅಧ್ಯಯನ ಮಾಡಬೇಕಿದೆ. ಶಿವಶರಣೆಯರನ್ನು ಅಧ್ಯಯನ ಮಾಡುವ ಮೂಲಕ ಆಧುನಿಕ ವ್ಯವಸ್ಥೆಯಲ್ಲಿನ ಅನ್ಯಾಯ, ಅತ್ಯಾಚಾರ, ಅನಾಚಾರ ತಡೆಯಬಹುದು ಎಂದು ನೆರೆಯ ತೆಲಂಗಾಣದ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿ ಪತಿ ಡಾ| ಬಸವಲಿಂಗ ಅವಧೂತರು ಹೇಳಿದರು.

ಭಾಲ್ಕಿ ತಾಲೂಕಿನ ಮರೂರ ಗ್ರಾಮದಲ್ಲಿ ನಡೆದ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ತಂದೆ-ತಾಯಿ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹೀಗಾಗಿ ವೃದ್ಧಾಪ್ಯದಲ್ಲಿ ಮಕ್ಕಳು ಅವರಿಗೆ ಆಸರೆಯಾಗಬೇಕು. ತಂದೆ-ತಾಯಿಗಳನ್ನೂ ಅನಾಥರನ್ನಾಗಿ ಮಾಡಬೇಡಿ ಎಂದ ಅವರು, ಮಕ್ಕಳಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಸಂಸ್ಕಾರ ಕೊಡಿ ಎಂದು ಸಲಹೆ ನೀಡಿದರು. ಓಂ ನಮಃ ಶಿವಾಯ ಎಂಬ ನಾಮದ ಬೀಜವ ನಾಲಿಗೆ ತುದಿಯಲ್ಲಿ ಬಿತ್ತಿರಯ್ಯ ಹಾಡು ಹಾಡಿದರು. ಕಾರ್ಯಕ್ರಮ ಮೊದಲಿಗೆ ಅಕ್ಕಮಹಾದೇವಿ ತೊಟ್ಟಿಲು ಮತ್ತು ಶ್ರೀ ಮಲ್ಲಿಕಾರ್ಜುನ ಲಿಂಗಕ್ಕೆ ಪೂಜ್ಯರು ಪೂಜೆ ಮಾಡಿದರು. ಮೆರವಣಿಗೆ: ಸಮಾರಂಭಕ್ಕೂ ಮೊದಲು ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ನಡೆಯಿತು. ಕುಂಭ-ಕಳಶ ಹೊತ್ತ ಮಹಿಳೆಯರು, ಅವಧೂತರ ಹಾಡುಗಳ ಮೇಲೆ ಯುವಕರ ಕುಣಿತ ಆಕರ್ಷಣೆಯಾಗಿದ್ದವು.

ಈ ವೇಳೆ ಗ್ರಾಮದ ಮುಖಂಡರಾದ ಆನಂದ ಗಂಗೂ, ವಿಜಯಕುಮಾರ, ಸಂಗಶೆಟ್ಟಿ ಮಜಿಗೆ, ಅನಂತರಾಯ ಚಿಮಕೊಡೆ, ಶಿವಕಾಂತ ಮಜಿಗೆ ಇತರರಿದ್ದರು. ಬೀದರ: ಗಡಿ ಭಾಗದಲ್ಲಿ ಅನುದಾನ ಕೇಂದ್ರಿತ ಕಾರ್ಯಕ್ರಮಗಳಿಗಿಂತ ರಚನಾತ್ಮಕ ಕಾರ್ಯಕ್ರಮ ಮಾಡುವ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ ಹೇಳಿದರು. ನಗರದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗಡಿ ಭಾಗದಲ್ಲಿ ಕನ್ನಡ ಶಾಲೆಗಳ ಸುಧಾರಣೆ, ಕನ್ನಡ ಶಿಕ್ಷಕರ ನೇಮಕಾತಿ, ಕನ್ನಡ ರಂಗ ಪ್ರಯೋಗ ಸೇರಿದಂತೆ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಭಾಷಾ ಬಾಂಧವ್ಯ ಬೆಳೆಸಬೇಕು. ಸೌಹಾರ್ದಯುತವಾದ ಸಾಂಸ್ಕೃತಿಕ ವಾತಾವರಣ ನಿರ್ಮಿಸಬೇಕಾದ ಅಗತ್ಯವಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಬೀದರನಲ್ಲಿ ಉದಯೋನ್ಮುಖ ಬರಹಗಾರರ ಸಂಖ್ಯೆ ಹೆಚ್ಚಾಗಿದ್ದು, ಕಾವ್ಯ, ಕಥಾ ಕಮ್ಮಟ ಆಯೋಜಿಸುವ ಅಗತ್ಯವಿದೆ. ಇದಕ್ಕೆ ಕಸಾಪ ಎಲ್ಲ ರೀತಿಯ ನೆರವು ನೀಡಲಿದೆ ಎಂದರು.

ಈ ವೇಳೆ ಗೌರವ ಕಾರ್ಯದರ್ಶಿ ಡಾ| ಬಸವರಾಜ ಬಲ್ಲೂರ, ರಾಜ್ಯ ವಿಜ್ಞಾನ ಪರಿಷತ್‌ ಸದಸ್ಯ ಬಾಬು ದಾನಿ, ಮಹಾರುದ್ರಪ್ಪ ಆಣದುರೆ, ಪ್ರಕಾಶ ಲಗಶೆಟ್ಟಿ, ಪ್ರೊ| ಎಸ್‌.ಬಿ. ಸಜ್ಜನಶೆಟ್ಟಿ, ಗುರುನಾಥ ರಾಜಗೀರಾ, ಗುಂಡಪ್ಪ ಹುಡಗೆ, ಸಿದ್ದಾರೆಡ್ಡಿ ನಾಗೋರಾ, ಕಲ್ಯಾಣರಾವ್‌ ಚಳಕಾಪುರೆ, ವಿದ್ಯಾವತಿ ಬಲ್ಲೂರ, ಶಿವಪುತ್ರ ಪಟಪಳ್ಳಿ, ಜಗನ್ನಾಥ ಕಮಲಾಪುರೆ, ಭೀಮಣ್ಣ ಸೋರಳ್ಳಿ ಇತರರಿದ್ದರು.

ಟಾಪ್ ನ್ಯೂಸ್

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.