ಕರಾವಳಿಗೆ ಸೋಲಾರ್ ಪಾರ್ಕ್: ಖೂಬಾರಿಗೆ ಪೇಜಾವರ ಶ್ರೀ ಪತ್ರ
Team Udayavani, Sep 6, 2021, 7:00 AM IST
ಬೆಂಗಳೂರು: ಕೇಂದ್ರ ಸರಕಾರದ ರಸಗೊಬ್ಬರ ರಾಸಾಯನಿಕ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಮಂತ್ರಿ ಭಗವಂತ್ ಖೂಬಾ ಅವರು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ರವಿವಾರ ಭೇಟಿಯಾಗಿ ಗುರುವಂದನೆ ಸಲ್ಲಿಸಿದರು.
ಈ ಸಂದರ್ಭ ಕರಾವಳಿಯ ಮೂರು ಜಿಲ್ಲೆಗಳಿಗೆ ಅನ್ವಯವಾಗಿಸಿ ಒಂದು ಸೋಲಾರ್ ಪಾರ್ಕ್ ರಚಿಸುವ ಕುರಿತು ಕೋರಿಕೆಯ ಪತ್ರವನ್ನು ಸ್ವಾಮೀಜಿಯವರು ಸಚಿವರಿಗೆ ನೀಡಿದರು.
ಸಚಿವರೊಂದಿಗೆ ನವೀಕರಿಸಬಹು ದಾದ ಇಂಧನಗಳ ಸಾಧ್ಯತೆಗಳ ಕುರಿತು ಸಮಾಲೋಚನೆ ನಡೆಸಿದರು. ಗೋವಿನ ಸೆಗಣಿಯಿಂದ ವಿದ್ಯುತ್ ತಯಾರಿಸುವ ಬಗ್ಗೆಯೂ ಮಾತಾಡಿದ ಶ್ರೀಗಳು, ದೇಶದಲ್ಲಿ ದೊಡ್ಡ ದೊಡ್ಡ ಗೋಶಾಲೆಗಳಲ್ಲಿ ಗೋಮಯದ ಹೇರಳ ಲಭ್ಯತೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುವ ಬಗ್ಗೆ ಸರಕಾರ ವ್ಯವಸ್ಥೆ ಮಾಡಿದರೆ ಉತ್ತಮ ಎಂದರು. ಈ ವಿಚಾರದಲ್ಲಿ ಕೇಂದ್ರ ಸರಕಾರದ ಯೋಜನೆ ಗಳನ್ನು ಸಚಿವರು ವಿವರಿಸಿದರು.
ಸೂರ್ಯಶಕ್ತಿ ಎಲ್ಲ ರೀತಿಯಿಂದಲೂ ಭವಿಷ್ಯಕ್ಕೆ ಅತ್ಯಂತ ಭರವಸೆಯ ಇಂಧನವಾಗಿದೆ. ರಾಜ್ಯದ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಯಾವುದಾ ದರೂ ಒಂದು ಕಡೆ ಸೋಲಾರ್ ಪಾರ್ಕ್ ನಿರ್ಮಿಸಬೇಕೆಂದು ಲಿಖೀತ ಪತ್ರವನ್ನು ಶ್ರೀಗಳು ಸಚಿವರಿಗೆ ನೀಡಿದರು. ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರಕಾರದ ಜತೆ ಸಮಾಲೋಚಿಸಿ ತೀರ್ಮಾ ನಿಸುವುದಾಗಿ ಸಚಿವರು ತಿಳಿಸಿದರು.
ಜೊಲ್ಲೆ ದಂಪತಿ ಭೇಟಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರೂ ವರ್ಚುವಲ್ ಸಭೆ ಯಲ್ಲಿ ಭಾಗವಹಿಸಿ ಮಾತನಾಡಿದರು. ಪತಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಯವರು ಕೂಡ ಆಗಮಿಸಿದ್ದರು.
ಶ್ರೀಪಾದ ಯೆಸ್ಸೊ ನಾಯಕ್ ಭೇಟಿ :
ಕೇಂದ್ರದ ನೌಕಾಯಾನ ಮತ್ತು ಪ್ರವಾಸೋದ್ಯಮ ಖಾತೆ ಮಂತ್ರಿ ಶ್ರೀಪಾದ ಯೆಸೊÕ ನಾಯಕ್ ವರ್ಚುವಲ್ ಸಭೆಯಲ್ಲಿ ಭಾಗ ವಹಿಸಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರಂಥ ಮಹಾನ್ ತಪಸ್ವೀ ಶಕ್ತಿಗಳು ದುರ್ಲಭವಾಗಿದ್ದು ಈ ಭೂಮಿಯ ಭಾಗ್ಯವಾಗಿದ್ದಾರೆ. ಅವರ ಸಂಕಲ್ಪ ಸದಿಚ್ಛೆ ಸತ್ಕಾರ್ಯ ಗಳ ಫಲ ಬಹಳ ವರ್ಷ ಈ ದೇಶಕ್ಕೆ ಲಭಿಸಿದೆ. ಅವುಗಳನ್ನು ಮುಂದು ವರಿಸಿಕೊಂಡು ಹೋಗುವ ಕರ್ತವ್ಯ ನಮ್ಮದಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.