ಮಗ ಸರೆಂಡರ್ ಅಗ್ತಾನೆ; ರಾಜಕಾರಣ ಮಾಡ್ಬೇಡಿ:ಹ್ಯಾರಿಸ್
Team Udayavani, Feb 19, 2018, 9:49 AM IST
ಬೆಂಗಳೂರು: ಶನಿವಾರ ರಾತ್ರಿ ಬೆಂಗಳೂರಿನ ಹೊಟೇಲೊಂದರಲ್ಲಿ ಟೇಬಲಿಗೆ ಕಾಲು ತಾಗಿತು ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ವತ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪುತ್ರ ಮಹಮದ್ ನಲಪಾಡ್‌ಗೆ ಪೊಲೀಸರಿಗೆ ಶರಣಾಗಲು ಸೂಚಿಸಿದ್ದೇನೆ ಎಂದು ಕಾಂಗ್ರೆಸ್‌ನ ಪ್ರಭಾವಿ ಶಾಸಕ ಹ್ಯಾರಿಸ್ ಹೇಳಿಕೆ ನೀಡಿದ್ದಾರೆ.
ಸೋಮವಾರ ಬೆಳಗ್ಗೆ ಮನೆ ಪರಿಶೀಲನೆಗೆಂದು ಪೊಲೀಸರು ಬಂಧ ತಕ್ಷಣ ಶಾಂತಿನಗರದ ನಿವಾಸದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಹ್ಯಾರಿಸ್ ‘ಜವಾಬ್ಧಾರಿಯುತ ನಾಗರಿಕನಾಗಿ, ಶಾಸಕನಾಗಿ ಕಾನೂನನ್ನು ಪಾಲನೆ ಮಾಡಿಕೊಂಡು ಬಂದವನು ನಾನು. ಈ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ, ನನಗೂ ಅದಕ್ಕೂ ಸಂಬಂಧವೇ ಇಲ್ಲ. ಕಾನೂನಿಗಿಂದ ದೊಡ್ಡವರು ಯಾರು ಇಲ್ಲ . ನನ್ನ ಮಗ ನನಗೆ ಘಟನೆ ನಡೆದ ಬಳಿಕ ಫೋನ್ ಕಾಲ್ ಮಾಡಿಯೇ ಇಲ್ಲ. ಅವನ ತಾಯಿಗೆ ಕರೆ ಮಾಡಿ ಮಾತನಾಡಿದ್ದ. ಈಗ ನಾನೇ ಸರೆಂಡರ್ ಆಗುವಂತೆ ಹೇಳಿದ್ದೇನೆ’ ಎಂದರು.
‘ನಾನಾಗಲಿ, ಮಗನಾಗಲಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ನಿನ್ನೆ ಅವನು ನಮ್ಮೊಂದಿಗೆ ಇದ್ದರೆ ಅವನ್ನು ಠಾಣೆಗೆ ಕಳುಹಿಸಿಕೊಡುತ್ತಿದ್ದೆ, ನಾವು ಇಟ್ಟುಕೊಂಡು ಮಾಡುವಂತದ್ದೇನಿಲ್ಲ . ತಪ್ಪು ಸರಿ ಪಡಿಸುವ ಕಾರ್ಯ ಯಾರೂ ಮಾಡಬಾರದು’ಎಂದರು.
‘ಅವನಿಗೆ ದೇವರು ಆಯಸ್ಸು ಕೊಟ್ರೆ ಅವನಿಗೆ ಒಳ್ಳೆ ಬುದ್ದಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ಇದನ್ನು ಉಪಯೋಗಿಸಿ ನೀಚ ರಾಜಕಾರಣ ಮಾಡಬೇಡಿ . ಶವದ ಮೇಲೆ ಚಾಕು ವಿನಿಂದ ಚುಚ್ಚಿ ರಾಜಕಾರಣ ಮಾಡುವುದು ಬೇಡ’ ಎಂದರು.
‘ಎಲ್ಲಾ ಮಧ್ಯಮ ಸ್ನೇಹಿತರು ನನ್ನನ್ನು ನೋಡಿದ್ದೀರಿ ನನ್ನ ಮಗನನ್ನು ಸರೆಂಡರ್ ಮಾಡಿಸುತ್ತಿದ್ದೇನೆ. ಕಾನೂನು ಏನು ಕ್ರಮ ತೆಗೆದುಕೊಳ್ಳುತ್ತನೆ ಅದನ್ನು ತೆಗೆದುಕೊಳ್ಳಲಿ .ಬೆಳೆದಿರುವ ಮಗ,ಮದುವೆಯೂ ಆಗಿದೆ ಅವನಿಗೆ’ ಎಂದರು.
ನಮ್ಮ ತಾಯಿಗೆ ಹುಚ್ಚು ಹಿಡಿದರೆ..!: ಮಾಧ್ಯಮಗಳ ವಿರುದ್ಧ ಕಿಡಿ
‘ಬೇರೆಯವರ ತಾಯಿಗೆ ಹುಚ್ಚು ಹಿಡಿದರೆ ನೋಡಿ ನಗಲು ಖುಷಿ ಆಗುತ್ತದೆ. ಆದರೆ ನಮ್ಮ ತಾಯಿಗೆ ಹುಚ್ಚು ಹಿಡಿದರೆ ಏನಾಗುತ್ತದೆ. ನಿಮಗೆ ಯಾರಿಗೂ ಈ ರೀತಿಯ ಸ್ಥಿತಿ ಬರದಿರಲಿ’ ಎಂದು ಮಾಧ್ಯಮಗಳ ವಿರುದ್ಧವೂ ಕಿಡಿ ಕಾರಿದರು.
‘ನಾನು ಜನರಿಗೋಸ್ಕರ ಇರುವವನು, ಬೇಕಾದರೆ ರಾಜಕೀಯವನ್ನು ಬಿಟ್ಟು ಬಿಡುತ್ತೇನೆ. ನಾನು ಮಾಧ್ಯಮ ದವರಲ್ಲಿ ವಿನಂತಿ ಮಾಡುತ್ತಿದ್ದೇನೆ ಏನು ಮಾಡಬಾರದು ಅಂದುಕೊಂಡಿದ್ದೇನೋ ಅದನ್ನು ಮಾಡುವಂತೆ ಮಾಡಿದ್ದೀರಿ. ನೀವು ತುಂಬಾ ಬಿಲ್ಡ್ ಅಪ್ ಕೊಡಬೇಡಿ’ ಎಂದು ಮನವಿ ಮಾಡಿದರು.
ನಲಪಾಡ್ ಮತ್ತು ಹತ್ತು ಮಂದಿಯ ಗ್ಯಾಂಗ್ ಪುಂಡಾಟಿಕೆ ನಡೆಸಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು, ಬಳಿಕ ಮಲ್ಯ ಆಸ್ಪತ್ರೆಗೂ ಬಂದು ವಿದ್ವತ್,ಸಹೋದರನ ಮೇಲೂ ಹಲ್ಲೆ ನಡೆಸಿ ಗೂಂಡಾಗಿರಿ ಮೆರೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.