ಅಶಿಸ್ತು ತೋರಿದ ಉಭಯ ಸದನ ಸದಸ್ಯರಿಗೆ ಸಭಾಧ್ಯಕ್ಷ, ಸಭಾಪತಿ ನೀತಿ ಪಾಠ

Team Udayavani, Jul 4, 2018, 6:00 AM IST

p-29.jpg

ವಿಧಾನಸಭೆ/ವಿಧಾನಪರಿಷತ್‌: ಉಭಯ ಸದನಗಳಲ್ಲಿ ಅಶಿಸ್ತು ತೋರಿದ ಸಚಿವರು ಹಾಗೂ ಶಾಸಕರಿಗೆ ಸಭಾಧ್ಯಕ್ಷ ರಮೇಶ್‌ಕುಮಾರ್‌ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಶಿಸ್ತಿನ ಪಾಠ ಹೇಳಿದ ಪ್ರಸಂಗ ಮಂಗಳವಾರವೂ ಜರುಗಿತು. ಮಂಗಳವಾರ ಭೋಜನಾ ನಂತರ ಕಲಾಪ ಆರಂಭವಾದಾಗ ಸಚಿವರ ಸಾಲಿನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇ ಗೌಡ ಹೊರತು ಪಡಿಸಿ ಬೇರೆ ಸಚಿವರು ಇರಲಿಲ್ಲ. ಈ ಬಗ್ಗೆ ಗಮನ ಸೆಳೆದ ಪ್ರತಿಪಕ್ಷ ಬಿಜೆಪಿ ಸದಸ್ಯರು, ಮೊದಲ ದಿನವೇ ಮೊದಲ ಬೆಂಚ್‌ ಖಾಲಿ ಇದೆ ಎಂದಾದರೆ ಇವರೇನು ಸದನ ನಡೆಸುತ್ತಾರೆಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌, ಭೋಜನಾ ನಂತರ ಪ್ರತಿಪಕ್ಷ ನಾಯಕರು ಮಾತನಾಡುತ್ತಾರೆಂದು ಮೊದಲೇ ತಿಳಿಸಲಾಗಿತ್ತು. ಪ್ರತಿಪಕ್ಷ ನಾಯಕರು ಮಾತನಾಡುವಾಗ ಸಭಾನಾಯಕರು (ಸಿಎಂ) ಇರಲೇ ಬೇಕು. ಇಲ್ಲದಿದ್ದರೆ ಮಾತನಾಡಬೇಡಿ ಎಂದು ಪ್ರತಿಪಕ್ಷ ನಾಯಕರಿಗೆ ನಾನೇ ಹೇಳುತ್ತೇನೆ. ಈ ಸದನದ ರಕ್ಷಕನಾಗಿ ನಾನಿದ್ದೇನೆ. ಪ್ರತಿಪಕ್ಷ ನಾಯಕರು ಮಾತನಾಡುವಾಗ ಸಭಾನಾಯಕರು ಹಾಜರಿರುವುದು ಆ ಸ್ಥಾನಕ್ಕೆ ಕೊಡುವ ಗೌರವ ಎಂದರು. 

ಅಷ್ಟರ ನಡುವೆಯೂ ಸೂಕ್ಷ್ಮ ಸಂವೇದಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ನಮ್ಮಲ್ಲಿದ್ದಾರೆಂದು ಸ್ಪೀಕರ್‌ ಹೇಳುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್‌ ಸದನಕ್ಕೆ ಆಗಮಿಸಿದರು. ತಕ್ಷಣ ಸಚಿವ ಕೃಷ್ಣಬೈರೇಗೌಡ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಬಂದಿದ್ದಾರೆ. ಸಚಿವರೂ ಬರುತ್ತಾರೆ. ಸ್ವಲ್ಪ ತಾಳ್ಮೆಯಿಂದಿರಿ ಎಂದು ಪ್ರತಿಪಕ್ಷ ಸದಸ್ಯರಿಗೆ ಹೇಳಿದರು.

ಇದರಿಂದ ಸ್ವಲ್ಪ ಅಸಮಾಧಾನಗೊಂಡ ಸ್ಪೀಕರ್‌, ನಮ್ಮದು ಇದೇ ಕೆಲಸವಾಗಿದೆ. ನೋಟಿಸ್‌ ಕೊಟ್ಟಿದ್ದೇವೆ,ಅಜೆಂಡಾ ಕಳುಹಿಸಿದ್ದೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಬಂದರೂ ಸಚಿವರು ಬಂದಿಲ್ಲ ಎಂದರೆ ಇವರಿಗಿಂತ ದೊಡ್ಡ ಕೆಲಸವೇ ಅವರದ್ದು? ಸಮರ್ಥನೆ ಮಾಡಿ ಕೊಳ್ಳಬೇಡಿ. ಮೊದಲು ಸಲಹೆ ನೀಡಿ, ನಂತರ ತಾಕೀತು ಮಾಡಿ ಎಂದು ಕಾನೂನು ಸಚಿವರಿಗೆ ಸೂಚಿಸಿದರು.

ಶಿಸ್ತುಪಾಲನೆ ಬಗ್ಗೆ “ಕ್ಲಾಸ್‌’: ಇನ್ನು ವಿಧಾನಪರಿಷತ್‌ನಲ್ಲಿ ಸದಸ್ಯರು ಪದೇ ಪದೆ ಎದ್ದು ನಿಲ್ಲುವುದು, ಅನುಮತಿ ಪಡೆಯದೆ ಮಾತನಾಡುವುದು, ಮತ್ತೂಬ್ಬ ಸದಸ್ಯರು ಮಾತನಾಡುತ್ತಿದ್ದಾಗ ಮಧ್ಯಪ್ರವೇಶ ಮಾಡುವುದು ಸೇರಿದಂತೆ ಸದಸ್ಯರ ವರ್ತನೆಯಿಂದ ಸಿಡಿಮಿಡಿಗೊಂಡ ಸಭಾಪತಿ ಬಸವರಾಜ ಹೊರಟ್ಟಿ, ಶಿಸ್ತುಪಾಲನೆ ಬಗ್ಗೆ “ಕ್ಲಾಸ್‌’ ತೆಗೆದುಕೊಂಡರು. ಮಂಗಳವಾರದ ಕಲಾಪದಲ್ಲಿ ಹಲವಾರು ಬಾರಿ ಸದಸ್ಯರು ಎದ್ದು ನಿಂತು ಮಾತನಾಡಲು ಪ್ರಾರಂಭಿಸಿದ್ದರಿಂದ ಮಧ್ಯಪ್ರವೇಶಿದ ಸಭಾಪತಿ, ಅನಗತ್ಯ ಪೀಠಿಕೆ, ಅಭಿನಂದನೆ, ಟೀಕೆ, ಟಿಪ್ಪಣಿ ಮಾಡುವ ಬದಲಿಗೆ
ನೇರವಾಗಿ ವಿಷಯ ಪ್ರಸ್ತಾಪಿಸಬೇಕು, ಅನಗತ್ಯ ಉಪಪ್ರಶ್ನೆ ಕೇಳದಂತೆಯೂ ತಾಕೀತು ಮಾಡಿದರು.

ಸದನ ಆರಂಭವಾದ ಕೆಲ ಹೊತ್ತಿನಲ್ಲೇ ಪ್ರಶ್ನೋತ್ತರ ಕಲಾಪ ನಡೆಯದಿರುವ ಬಗ್ಗೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಆಗ ಎದ್ದುನಿಂತು ಮಾತನಾಡಲಾರಂಭಿಸಿದ ಜೆಡಿಎಸ್‌ನ ಬೋಜೇಗೌಡರನ್ನು ತಡೆದ ಸಭಾಪತಿ, ಸದನದ ಗೌರವ ಕಾಪಾಡಬೇಕು. ಎಲ್ಲರೂ ಎದ್ದುನಿಂತು ಮಾತನಾಡುವುದು ಸರಿಯಲ್ಲ. ಪೀಠ ನೋಡಿ ಮಾತನಾಡಬೇಕೆ ಹೊರತು ಸದಸ್ಯರು ಪರಸ್ಪರ ಮಾತುಕತೆಯಲ್ಲಿ ತೊಡಗಬಾರದು ಎಂದು ತಾಕೀತು ಮಾಡಿದರು.

ಅಧಿಕಾರಿಗಳ ಗೈರು: ಭೋಜನ ವಿರಾಮದ ಬಳಿಕ ಕಲಾಪ ಆರಂಭವಾದಾಗ ಅಧಿಕಾರಿಗಳ ಗ್ಯಾಲರಿಯಲ್ಲಿಯಾರೊಬ್ಬ ಅಧಿಕಾರಿಯೂ ಇಲ್ಲದಿರುವುದನ್ನು ಗಮನಿಸಿದ ಸಭಾಪತಿ ಬಸವರಾಜ ಹೊರಟ್ಟಿ ಗರಂ ಆದರು. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತಿರುವಾಗಲೂ ಯಾವೊಬ್ಬ ಅಧಿಕಾರಿಯೂ ಇರುವುದಿಲ್ಲ ಎಂದರೆ ಹೇಗೆ? ಇಂತಹದ್ದನ್ನು ನಾನು ಎಂದಿಗೂ ಸಹಿಸುವುದಿಲ್ಲ. ಅಧಿಕಾರಿಗಳ ಪಟ್ಟಿ 
ತರಿಸಿಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಭಾನಾಯಕಿ ಜಯಾಮಾಲ ಅವರಿಗೆ ಸೂಚನೆ ನೀಡಿದರು. ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಸಚೇತಕರ ನೇಮಕವಾದರೆ ಈ ಸಮಸ್ಯೆ ಇರುವುದಿಲ್ಲ ಎಂದರು. ಆ ಉಸಾಬರಿ ನಿಮಗ್ಯಾಕೆ ಎಂದು ಸಭಾಪತಿಯವರು ಪ್ರತಿಪಕ್ಷ ನಾಯಕರನ್ನು ಸುಮ್ಮನಾಗಿಸಿದರು.

ಪ್ರಶ್ನೋತ್ತರ ಕಲಾಪ ಇಲ್ಲದಕ್ಕೆ ಆಕ್ಷೇಪ: ಕಲಾಪ ಆರಂಭವಾಗುತ್ತಿದ್ದಂತೆ ನಿಯಮ 330ಎ ಅಡಿ ವಿಷಯ ಪ್ರಸ್ತಾಪನೆಗೆ ಸಭಾಪತಿ ಅವಕಾಶ
ನೀಡುತ್ತಿದ್ದಂತೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿಯ ಅರುಣ್‌ ಶಹಾಪುರ, ಪ್ರಶ್ನೋತ್ತರ ಕಲಾಪ ನಡೆಸದಿ ರುವುದು ಸರಿಯಲ್ಲ
ಎಂದರು. ಬಳಿಕ ಬಿಜೆಪಿಯ ರಘುನಾಥರಾವ್‌ ಮಲ್ಕಾಪುರೆ, ಸರ್ಕಾರ ಟೇಕ್‌ ಆಫ್ ಆಗದ ಕಾರಣ ಟೀಕೆ ಮಾಡುವುದಿಲ್ಲ. ಪ್ರಶ್ನೋತ್ತರ ಕಲಾಪ ಇಲ್ಲದ
ಸದನ ನೋಡಿಯೇ ಇಲ್ಲ. ಇದರಿಂದ ಸದಸ್ಯರ ಹಕ್ಕುಚ್ಯುತಿಯಾಗಿಲ್ಲವೇ ಎಂದು ಪ್ರಶ್ನಿಸಿದರು.

ಸದನ ಸಲಹಾ ಸಮಿತಿ
ಮೇಲ್ಮನೆ ಕಲಾಪಗಳನ್ನು ಸುಗಮವಾಗಿ ನಡೆಸುವ ಸಲುವಾಗಿ ಸದನ ಸಲಹಾ ಸಮಿತಿ ರಚನೆಯಾಗಿದೆ. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಸದನ ಸಲಹಾ ಸಮಿತಿ ರಚನೆಯಾಗಿದೆ. ಸಭಾ ನಾಯಕಿ ಡಾ.ಜಯಮಾಲಾ, ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕಾಂಗ್ರೆಸ್‌ನ ಎಸ್‌.ಆರ್‌.ಪಾಟೀಲ್‌, ಬಿಜೆಪಿಯ ಕೆ.ಬಿ.ಶಾಣಪ್ಪ, ಜೆಡಿಎಸ್‌ನ
ಕೆ.ಟಿ.ಶ್ರೀಕಂಠೇಗೌಡ ಸದಸ್ಯರಾಗಿದ್ದು, ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಗ್ರಾಮೀಣಾಭಿವೃದಿಟಛಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೃಷ್ಣ ಬೈರೇಗೌಡ ವಿಶೇಷ ಆಹ್ವಾನಿತರಾಗಿದ್ದಾರೆ.

ಟಾಪ್ ನ್ಯೂಸ್

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

Yatnal-Team

Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್‌ ಬಿಜೆಪಿ ವಕ್ಫ್ ಪ್ರವಾಸ

Congress-Session

Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್‌ ಪಣ

state-news

Negotiation: ಹೆಬ್ಬಾಳ್ಕರ್‌-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.