ಸ್ಪೀಕರ್, ಸಭಾಪತಿ ಪ್ರಸ್ತಾವನೆಗೆ ಕಾಗೋಡು ಅಸಮಾಧಾನ
Team Udayavani, Jan 24, 2017, 3:45 AM IST
ಬೆಂಗಳೂರು: ರಾಜ್ಯಾಡಳಿತದ ಕೇಂದ್ರ ವಿಧಾನಸೌಧ ಮತ್ತು ಬೆಳಗಾವಿಯ ಸುವರ್ಣ ವಿಧಾನಸೌಧದ ನೆಲಮಹಡಿ ಮತ್ತು ಮೊದಲ ಮಹಡಿಗಳನ್ನು ಸಚಿವಾಲಯದ ಸುಪರ್ದಿಗೆ ಒಪ್ಪಿಸುವಂತೆ ಸ್ಪೀಕರ್ ಮತ್ತು ಸಭಾಪತಿಗಳು
ಕಳುಹಿಸಿಕೊಟ್ಟಿರುವ ಪ್ರಸ್ತಾವನೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ,
ನಾನಿರುವವರೆಗೂ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧ ಮತ್ತು ಸುವರ್ಣ ವಿಧಾನಸೌಧದ ನೆಲ ಮತ್ತು ಮೊದಲ ಮಹಡಿಗಳನ್ನು ಸಚಿವಾಲಯಕ್ಕೆ
ಬಿಟ್ಟುಕೊಡುವಂತೆ ಸ್ಪೀಕರ್ ಮತ್ತು ಸಭಾಪತಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ
ಉತ್ತರಿಸಿದ ಅವರು, ಅಲ್ಲಿ ಕೆಲ ಹುಳಗಳು ಸೇರಿಕೊಂಡಿವೆ. ಅವು ಹೀಗೆಲ್ಲ ಮಾಡಿ ಎಂದು ಹೇಳಿಕೊಡುತ್ತವೆ. ಇವರು
ಹಾಗೆಯೇ ಮಾಡುತ್ತಾರೆ. ಇವರಿಗೆಲ್ಲ ಏನಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಕಿಡಿ ಕಾರಿದರು.
ವಿಧಾನಸೌಧ ನಿರ್ಮಿಸಿ ಇಷ್ಟು ವರ್ಷಗಳಾಗಿವೆ. ಇದುವರೆಗೆ ಸಾಕಷ್ಟು ಸ್ಪೀಕರ್, ಸಭಾಪತಿಗಳು ಬಂದುಹೋಗಿದ್ದಾರೆ.
ವಿಧಾನಸೌಧವನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿರುವುದರಿಂದ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ
ಸಚಿವಾಲಯದ ಗೌರವಕ್ಕೆ ಚ್ಯುತಿಯಾದರೆ, ಅವರ ಹಕ್ಕು-ಬಾಧ್ಯತೆಗಳಿಗೆ ಧಕ್ಕೆಯಾಗಿದ್ದರೆ ಹೇಳಲಿ. ಇದುವರೆಗೂ ಅಂತಹ ಸಮಸ್ಯೆಗಳಾಗಿವೆಯೇ? ಹೀಗಿರುವಾಗ ನಮಗೆ ಬಿಟ್ಟುಕೊಡಿ ಎಂದು ಕೇಳುವುದರಲ್ಲಿ ಅರ್ಥವೇನು ಎಂದು ಪ್ರಶ್ನಿಸಿದರು.
ಹಿಂದೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಒಟ್ಟಾಗಿ ವಿಧಾನ ಮಂಡಲ ಸಚಿವಾಲಯ ಇತ್ತು. ಎಲ್ಲಾ ಶಾಸಕರಿಗೂ
ಶಾಸಕರ ಭವನದಲ್ಲಿ ಒಂದೇ ಕಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಂತರ ವಿಧಾನಸಭೆ ಮತ್ತು ವಿಧಾನ ಪರಿಷತ್ ಸಚಿವಾಲಯ ಎಂದು ಪ್ರತ್ಯೇಕಿಸಲಾಯಿತು. ಶಾಸಕರ ಭವನದಲ್ಲೂ ಎರಡೂ ಸದನದವರಿಗೆ ಪ್ರತ್ಯೇಕ ವಾಸ್ತವ್ಯ ಕಲ್ಪಿಸಲಾಯಿತು. ಈಗ ವಿಧಾನಸೌಧವನ್ನು ಪ್ರತ್ಯೇಕಿಸಿ ನೆಲ ಮತ್ತು ಮೊದಲ ಮಹಡಿಗಳನ್ನು ನಮಗೆ ಕೊಡಿ
ಎಂಬುದಾಗಿ ಕೇಳುತ್ತಿದ್ದಾರೆ. ಮುಂದೆ ಇಡೀ ವಿಧಾನಸೌಧ ನಮ್ಮದು, ಮುಖ್ಯಮಂತ್ರಿಗಳ ಅನುಮತಿಯಿಲ್ಲದೆ ಒಳಬರುವಂತಿಲ್ಲ ಎಂದು ಹೇಳಬಹುದು ಎಂದು ಹೇಳಿ ಜೋರಾಗಿ ನಕ್ಕರು.
ಕಾಡುಗೊಂಡನಹಳ್ಳಿಯಲ್ಲಿ ಟೌನ್ ಶಿಪ್ ನಿರ್ಮಿಸಲು 100 ಎಕರೆ ಭೂಮಿ ನೀಡುವಂತೆ ಸಚಿವಾಲಯದ ಕಡೆಯಿಂದ
ಕಂದಾಯ ಇಲಾಖೆಗೆ ಪ್ರಸ್ತಾವನೆ ಬಂದಿರುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.