ಅಡಿಗಾಸ್ ಯಾತ್ರಾದಿಂದ ವಿಶೇಷ ರಿಯಾಯಿತಿ ಪ್ರವಾಸ
Team Udayavani, Nov 2, 2019, 3:05 AM IST
ಬೆಂಗಳೂರು: ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದ ಅಡಿಗಾಸ್ ಯಾತ್ರಾ ವತಿಯಿಂದ ರಾಜ್ಯೋತ್ಸವ ಹಾಗೂ ದೀಪಾವಳಿ ಹಿನ್ನೆಲೆ ದೇಶದ ಸುಪ್ರಸಿದ್ಧ ತಾಣಗಳಿಗೆ ವಿಶೇಷ ರಿಯಾಯಿತಿಯಲ್ಲಿ ಪ್ರವಾಸ ಆಯೋಜಿಸಲಾಗಿದೆ.
ಅಡಿಗಾಸ್ ಯಾತ್ರಾ ಸಂಸ್ಥಾಪಕ ಕೆ. ನಾಗರಾಜ ಅಡಿಗ ಅವರು ಪ್ರವಾಸ ಕಾರ್ಯಕ್ರಮ ಪಟ್ಟಿಯನ್ನು ಸಂಸ್ಥೆಯ www.adigasyatra.in ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದರು. 500ಕ್ಕೂ ಪ್ರವಾಸಗಳನ್ನು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ. ಪ್ರವಾಸಿಗರ ಸಮಯ, ಭದ್ರತೆ, ಅತ್ಯುತ್ತಮ ಕಾರ್ಯಕ್ರಮ ಪಟ್ಟಿ, ಮಾರ್ಗದರ್ಶನ ಮತ್ತು ಮಾಹಿತಿ ಒಳಗೊಂಡಿದೆ.
ಪ್ರವಾಸಿ ಗರ ಅನುಕೂಲಕ್ಕೆ ತಕ್ಕಂತೆ ಸ್ಟಾಂಡರ್ಡ್, ಡೀಲಕ್ಸ್, ಲಕ್ಸುರಿ, ಪ್ರೀಮಿಯಂ ಪ್ರವಾಸ ದರವನ್ನು ನಿಗದಿಪಡಿಸಲಾಗಿದೆ. ಇನ್ನು ಬಜೆಟ್ ಅನುಗುಣವಾಗಿ 2 ಸ್ಟಾರ್, 3 ಸ್ಟಾರ್, 4 ಸ್ಟಾರ್, 5 ಸ್ಟಾರ್ ಹೋಟೆಲ್‌ಗಳ ಪ್ಯಾಕೇಜುಗಳು ಲಭ್ಯವಿದೆ.
ಉತ್ತರ ಭಾರತ ಹಾಗೂ ನೇಪಾಳ (23 ಪ್ರವಾಸಗಳು), ಪೂರ್ವ ಭಾರತ (9 ಪ್ರವಾಸಗಳು), ಪಶ್ಚಿಮ ಹಾಗೂ ಮಧ್ಯಭಾರತ (8 ಪ್ರವಾಸಗಳು), ದಕ್ಷಿಣಭಾರತ (6 ಪ್ರವಾಸಗಳು), ಹೀಗೆ 40ಕ್ಕೂ ಅಧಿಕ ಪ್ರವಾ ಸ ಗಳು ಲಭ್ಯವಿದೆ. ಪ್ರವಾಸವು ಸಸ್ಯಾಹಾರಿ ಊಟೋಪಹಾರ, ನುರಿತ ಮಾರ್ಗ ದರ್ಶನ, ರೈಲು ಹಾಗೂ ವಿಮಾನ ಪ್ರಯಾ ಣದ ವ್ಯವಸ್ಥೆ, ಸುಸಜ್ಜಿತ ವಾಹನ ಹಾಗೂ ವಸತಿ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.
ಮೇ ತಿಂಗಳಿನಲ್ಲಿ ಪ್ರಾರಂಭವಾಗುವ ಚಾರಧಾಮ ಯಾತ್ರೆ, ಜನವರಿ, ಫೆಬ್ರವರಿ, ಮಾರ್ಚ್‌ನಲ್ಲಿ ಜರುಗುವ ಗುಜರಾತಿನ ರಾನ್ ಆಫ್ ಕಚ್ ಹಾಗೂ ಇತರ ಪ್ರೇಕ್ಷಣೀಯ ಸ್ಥಳಗಳು, ರಾಜಸ್ಥಾನ, ಶಿಮ್ಲಾ, ಮನಾಲಿ, ಸಿಕ್ಕಿಂ, ಡಾರ್ಜಿಲಿಂಗ್, ಈಶಾನ್ಯ ಭಾರತದ ಸಪ್ತ ಸಹೋದರಿಯರೆಂದು ಪ್ರಸಿದ್ಧ ವಾದ ಅಸ್ಸಾಂ, ಅರುಣಾ ಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ಮಿಝೊರಾಂ, ಮಣಿಪುರ, ತ್ರಿಪುರ ಪ್ರವಾಸಗಳಿಗೂ ರಿಯಾಯಿತಿ ಲಭ್ಯವಿದೆ.
ಇನ್ನು ಸುಂದರ ಗಿರಿಧಾಮಗಳು, ನೈಸರ್ಗಿಕ ತಾಣಗಳು, ಐತಿಹಾಸಿಕ ಸ್ಥಳಗಳು, ತೀರ್ಥಕ್ಷೇತ್ರಗಳು, ಜ್ಯೋತಿರ್ಲಿಂಗ, ಕಾಶಿ ಯಾತ್ರೆ, ಅಮರನಾಥ ಯಾತ್ರೆ, ಚಾರಧಾಮ ಯಾತ್ರೆ ಮುಂತಾದ ಯಾತ್ರೆ ಮಾಡುವವರಿಗೆ ಅಗತ್ಯ ವ್ಯವಸ್ಥೆ ಲಭ್ಯವಿದೆ. ಆಸಕ್ತರು ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪ್ರವಾಸಿಗರು ತಮಗೆ ಲಭ್ಯವಿರುವ ದಿನಗಳು, ತಮ್ಮ ಕನಸಿನ ತಾಣ, ತಮ್ಮ ಪ್ರವಾಸದ ವೆಚ್ಚವನ್ನು ನಮೂದಿಸಿದಲ್ಲಿ ಸುಲಭವಾಗಿ ಮಾಹಿತಿಯನ್ನು ಪಡೆಯಬಹುದಾಗಿದೆ.
ಮಾಹಿತಿಗಾಗಿ: ಬೆಂಗಳೂರು ಬಸವನಗುಡಿ: 080-26616678, 9611600810, ಮಲ್ಲೇಶ್ವರ: 080-23346678, 7022259003, ಹುಬ್ಬಳ್ಳಿ: 0836-2256678, 7022259002 ವೆಬ್‌ಸೈಟ್: www.adigasyatra.in ಇ ಮೇಲ್: [email protected] ಸಂಪರ್ಕಿಸಲು ಕೋರಿದೆ.
ವಿಶೇಷ ರಿಯಾಯಿತಿ: ಈ ಪ್ರವಾಸವನ್ನು ನವೆಂಬರ್ 15ರೊ ಳಗೆ ಕಾಯ್ದಿರಿಸಿದವರಿಗೆ ವಿಶೇಷ ರಿಯಾಯಿತಿ ನೀಡಲಾಗುವುದು. ಅಲ್ಲದೆ, 10ಕ್ಕೂ ಅಧಿಕ ಸೀಟ್ ಕಾದಿರಿಸಿ ದವರಿಗೆ ಉಚಿತ ಪ್ರವಾಸ ಸೌಲಭ್ಯಗಳಿವೆ ಎಂದು ಅಡಿಗಾಸ್ ಯಾತ್ರಾ ನಿರ್ದೇಶಕ ರಾದ ಆಶಾ ನಾಗರಾಜ್ ಅಡಿಗ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.