ಲಾಕ್ ಡೌನ್ ಸಂಕಷ್ಟ: 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಬಿಎಸ್ ವೈ
Team Udayavani, May 19, 2021, 11:35 AM IST
ಬೆಂಗಳೂರು: ಕೋವಿಡ್ 19 ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ರಾಜ್ಯಸರ್ಕಾರ 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಹಿರಿಯ ಸಚಿವರೊಂದಿಗೆ ಸಭೆ ಮುಗಿಸಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಯಡಿಯೂರಪ್ಪ. 1,250 ಕೋಟಿ ರೂ. ವಿಶೇಷ ಆರ್ಥಿಕ ನೆರವನ್ನು ಘೋಷಿಸಿದ್ದಾರೆ. ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿಶೇಷ ಆರ್ಥಿಕ ನೆರವು:
1) ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂ ಪರಿಹಾರ
2) ಅಟೋ, ಟ್ಯಾಕ್ಸಿ ಚಾಲಕರಿಗೆ 3 ಸಾವಿರ ರೂ ಪರಿಹಾರ
3) ಕಲಾವಿದರು, ಕಲಾ ತಂಡಗಳಿಗೆ 3 ಸಾವಿರ ರೂ ಪರಿಹಾರ
4) ಸವಿತಾ ಸಮಾಜದವರಿಗೆ 3 ಸಾವಿರ ಸಹಾಯಧನ
5) ಹೂವು ಬೆಳೆಗಾರರಿಗೆ ಹೆಕ್ಟೆರ್ ಗೆ 10 ಸಾವಿರ ರೂ.
6) ಬಹುತೇಕ ಎಲ್ಲಾ ಶ್ರಮಿಕ ವರ್ಗದವರಿಗೆ 3 ಸಾವಿರ ಸಹಾಯಧನ ನೀಡಲಾಗುತ್ತದೆ.
7) ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ಹೆಕ್ಟೇರ್ ಗೆ 10 ಸಾವಿರ ರೂ
ಕಟ್ಟಡ ಕಾರ್ಮಿಕರಿಗೆ 3000 ರೂ. (ಒಟ್ಟು 493 ಕೋಟಿ), ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ (3.5 ಲಕ್ಷ ಜನರು 65 ಕೋಟಿ ರೂ.) ರಸ್ತೆ ವ್ಯಾಪಾರಿಗಳು (2 ಲಕ್ಷ ಜನರು 45.ಕೋಟಿ), ಕಲಾವಿದರಿಗೆ ತಲಾ 3000 ರೂ (ಸುಮಾರು 4 ಕೋಟಿ). ಸಣ್ಣ ಮತ್ತು ಮಧ್ಯಮ ಅವಧಿ ಸಾಲ ಪಡೆದ ಮರು ಪಾವತಿ ಅವಧಿ 31-7 -21 ಕ್ಕೆ ವಿಸ್ತರಿಸಲಾಗಿದೆ
ಗರಿಬ್ ಕಲ್ಯಾಣ ಅಂತ್ಯೋದಯ ಯೋಜನೆ ಅಡಿಯಲ್ಲಿ ರಾಜ್ಯದಿಂದ 180 ಕೋಟಿ, ನೇಕಾರರು, ಕುಂಬಾರರು, ಚಮ್ಮಾರ ಮಡಿವಾಳರು, ಕಮ್ಮಾರರು, ಅಕ್ಕಸಾಲಿಗರು ಟೈಲರ್, ಚಿಂದಿ ಆಯುವವರಿಗೆ, ಹಮಾಲಿಗಳು, ಬೀಡಿ ಕಾರ್ಮಿಕರು ಸೇರಿದಂತೆ ವಿವಿಧ ಸಮುದಾಯಗಳಿಗೆ 2000 ರೂ.
ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ 10 ಕೆಜಿ ಅಕ್ಕಿ, ಪ್ರತಿ ಕೆಜಿಗೆ 15 ರೂ ನಂತೆ ಎಪಿಎಲ್ ಕಾರ್ಡುದಾರರಿಗೆ 10 ಕೆಜಿ ಅಕ್ಕಿ ನೀಡಲಾಗುವುದು. ನಗರ ಪ್ರದೇಶದ ನಿರ್ಗತಿಕರಿಗೆ ಇಂದಿರಾ ಕ್ಯಾಂಟೀನ್ ಉಚಿತ (6 ಲಕ್ಷ ಜನರು 25 ಕೋಟಿ)
ಈಗಾಗಲೇ 2.6 ಲಕ್ಷ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, 950 ಕೋಟಿ ವೆಚ್ಚ ಮಾಡಲಾಗಿದೆ. 3 ಕೋಟಿ ಲಸಿಕೆ ಆದೇಶ ನೀಡಲಾಗಿದ್ದು 1000 ಕೋಟಿ ವೆಚ್ಚ ಮಾಡಲಾಗುತ್ತಿದೆ. 2150 ವೈದ್ಯರನ್ನು ಮೂರು ದಿನದೊಳಗೆ ನೇರ ನೇಮಕ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಲೈನ್ ಮನ್, ಗ್ಯಾಸ್ ಸಿಲೆಂಡರ್ ಶಿಕ್ಷಕರು ಫ್ರಂಟ್ ಲೈನ್ ವರ್ಕರ್ಸ್ ಎಂದು ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ಗ್ರಾಮ ಪಂಚಾಯತಿಗಳ ನಿರ್ವಹಣೆಗೆ ಸಿಎಂ ನೇತೃತ್ವದಲ್ಲಿ ವಿಡಿಯೊ ಸಂವಾದ ನಡೆಸಲಾಗುತ್ತದೆ. ಹಣಕಾಸಿನ ಪರಿಸ್ಥಿತಿ ಸರಿ ಇಲ್ಲದಿದ್ದರೂ ಶಕ್ತಿ ಮೀರಿ ಪರಿಹಾರ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಬ್ಯಾಂಕ್ ಗಳ ಕಂತು ಕಟ್ಟುವುದನ್ನು ಮೂರು ತಿಂಗಳು ಮುಂದೂಡಲಾಗಿದೆ. ಮೂರು ತಿಂಗಳು ಬಡ್ಡಿ ಮೊತ್ತ 130 ಕೋಟಿ ರೂ. ರಾಜ್ಯ ಸರ್ಕಾರ ಕಟ್ಟಲಿದೆ. ಮೂರ್ನಾಲ್ಕು ದಿನಗಳಲ್ಲಿ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಅನಾಥ ಬಂಧು ಯೋಜನೆ ಜಾರಿಗೆ ತೀರ್ಮಾನ ಮಾಡಲಾಗಿದೆ. ಅದರ ಜೊತೆಗೆ ಪ್ರತಿ ಗ್ರಾಮ ಪಂಚಾಯತಿಗಳಿಗೆ 50 ಸಾವಿರ ರೂ. ನೀಡಲಾಗುವುದು. ಮುಂದಿನ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಮೇ 23 ರಂದು.ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.