ಏ.3ರಿಂದ ವಿಶೇಷ ರೈಲು ಸಂಚಾರ
Team Udayavani, Mar 30, 2019, 2:27 PM IST
ಹುಬ್ಬಳ್ಳಿ: ರೈಲ್ವೆ ಮಂಡಳಿ ಏ.3ರಿಂದ ಜೂ.27ರವರೆಗೆ ಬಾಣಸವಾಡಿ-ಸಂಬಲಪುರ ಮಧ್ಯೆ ವಾರದ ಎಕ್ಸ್‌ಪ್ರೆಸ್ (08301/08302) ಒಟ್ಟು 13 ಟ್ರಿಪ್ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಪ್ರತಿ ಬುಧವಾರ ಸಂಬಲಪುರದಿಂದ ಸಂಜೆ 7:30ಕ್ಕೆ ಹೊರಡುವ ರೈಲು ಬಾಣಸವಾಡಿಗೆ ಗುರುವಾರ ಮಧ್ಯಾಹ್ನ 1:30ಕ್ಕೆ ಬಂದು ಸೇರಲಿದೆ.
ಬಾಣಸವಾಡಿಯಿಂದ ಪ್ರತಿ ಗುರುವಾರ ರಾತ್ರಿ 11:30ಕ್ಕೆ ಪ್ರಯಾಣ ಬೆಳೆಸುವ ರೈಲು ಶುಕ್ರವಾರ ಬೆಳಗ್ಗೆ 6:35ಕ್ಕೆ ಸಂಬಲಪುರಕ್ಕೆ ಆಗಮಿಸಲಿದೆ. ರೈಲು ಒಟ್ಟು 18 ಕೋಚ್ ಹೊಂದಿರಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಕೆಲ ರೈಲು ಸಂಚಾರ ಕಡಿತ: ಈ ಮಧ್ಯೆ, ನೈಋತ್ಯ ರೈಲ್ವೆ ವ್ಯಾಪ್ತಿಯ ಮೈಸೂರು ಡಿವಿಜನ್‌ನ ಮೈಸೂರು ಯಾರ್ಡ್‌ನಲ್ಲಿ ವಾಷೆಬಲ್ ಎಪ್ರಾನ್ ದುರಸ್ತಿ ಕಾರ್ಯದ ನಿಮಿತ್ತ ಮಾ.30ರಿಂದ ಏ.30ರವರೆಗೆ ಕೆಲ ರೈಲುಗಳ ಸಂಚಾರ ಕಡಿತಗೊಳಿಸಲಾಗಿದೆ.
ಶಿವಮೊಗ್ಗ ಟೌನ್-ಮೈಸೂರು ಪ್ಯಾಸೆಂಜರ್ (56269) ರೈಲು ಬೆಳಗುಳ ನಿಲ್ದಾಣದವರೆಗೆ ಮಾತ್ರ ಚಲಿಸಲಿದೆ. ಮೈಸೂರು-ಅರಸಿಕೆರೆ ಪ್ಯಾಸೆಂಜರ್ (56268) ರೈಲು ಮೈಸೂರು ಬದಲಿಗೆ ಬೆಳಗುಳ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ. ಚಾಮರಾಜನಗರ-ಮೈಸೂರು ಪ್ಯಾಸೆಂಜರ್ (56207) ರೈಲು ಅಶೋಕಪುರಂ ನಿಲ್ದಾಣದಲ್ಲಿ 40 ನಿಮಿಷ ನಿಲುಗಡೆಗೊಳ್ಳಲಿದೆ.
ಅರಸಿಕೆರೆ-ಮೈಸೂರು ಪ್ಯಾಸೆಂಜರ್ (56265) ರೈಲು ಬೆಳಗುಳ ನಿಲ್ದಾಣದವರೆಗೆ ಮಾತ್ರ ಚಲಿಸಲಿದೆ. ಮೈಸೂರು-ಬೆಂಗಳೂರು ನಗರ ಪ್ಯಾಸೆಂಜರ್ (56263) ರೈಲು 60 ನಿಮಿಷ ವಿಳಂಬವಾಗಿ ಮೈಸೂರಿನಿಂದ ಪ್ರಯಾಣ ಬೆಳೆಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.