30ರಂದು ಶೃಂಗೇರಿ ಶ್ರೀ 70ನೇ ವರ್ಧಂತ್ಯುತ್ಸವ
Team Udayavani, Mar 19, 2020, 3:05 AM IST
ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ 36 ನೇ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳ 70ನೇ ವರ್ಧಂತಿ ಮಹೋತ್ಸವ ಮಾ.30ರಂದು ನಡೆಯ ಲಿದ್ದು, ಇದರ ಅಂಗವಾಗಿ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. 2011ರಲ್ಲಿ ಜಗದ್ಗುರುಗಳ ಷಷ್ಠಬ್ಧಿ ಕಾರ್ಯಕ್ರಮವೂ ವಿಜೃಂಭಣೆಯಿಂದ ನಡೆದಿತ್ತು. 60ನೇ ವರ್ಧಂತಿ ಕಾರ್ಯ ಕ್ರಮದಲ್ಲಿ ಆಯುತಚಂಡಿಕಾ ಯಾಗ ನಡೆದಿತ್ತು.
ಇದೀಗ ಮಠದಲ್ಲಿ ಜಗ ದ್ಗುರುಗಳ ವರ್ಧಂತಿ ಮಹೋತ್ಸವ ನಿಮಿತ್ತ ಮಾ.25ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ. ಲೋಕ ಕಲ್ಯಾಣಾರ್ಥವಾಗಿ ನರಸಿಂಹವನದ ಗುರುಭವನದ ಸಮೀಪ ಆಯುತ ಚಂಡಿಕಾ ಯಾಗ ನಡೆಯಲಿದೆ. ಲಕ್ಷ ಮೋದಕ ಗಣಪತಿ ಹೋಮದೊಂದಿಗೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. 26ರಂದು ಅತಿರುದ್ರ ಮಹಾಯಾಗದ ಸಂಕಲ್ಪ, 27ರಂದು ಆಯುತ ಚಂಡಿ ಮಹಾಯಾಗದ ಸಂಕಲ್ಪ ನಡೆಯಲಿದೆ.
ವರ್ಧಂತಿ ಅಂಗವಾಗಿ ಮಾ.29ರಂದು ಬೆಟ್ಟದ ಶ್ರೀಮಲಹಾನಿಕ ರೇಶ್ವರ ಸ್ವಾಮಿ ಸನ್ನಿ ಧಿಗೆ ತೆರಳಲಿರುವ ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 30ರಂದು ಶ್ರೀಗಳು ಗುರುಭವನದಲ್ಲಿ ಭಕ್ತಾದಿಗಳಿಗೆ ಆಹಿಕ ದರ್ಶನ ನೀಡಲಿದ್ದಾರೆ. ನಂತರ ಶ್ರೀ ಶಾರದಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವರು. ಸಂಜೆ ಶ್ರೀಗಳಿಂದ ಆಶೀರ್ವಚನ ಹಾಗೂ ಭಕ್ತಾದಿಗಳಿಂದ ಫಲಪುಷ್ಪ ಸಮರ್ಪಣೆ ನಡೆಯಲಿದೆ.
ಏ.1ರಂದು ಜಗದ್ಗುರುಗಳ ಉಪಸ್ಥಿತಿ ಯಲ್ಲಿ ಆಯುತ ಚಂಡಿ ಮಹಾ ಯಾಗದ ಪೂರ್ಣಾಹುತಿ ನೆರವೇರಲಿದೆ. ಏ.2 ರಂದು ರಾಮನವಮಿ ಅಂಗವಾಗಿ ಶ್ರೀ ರಾಮಚಂದ್ರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವರು. ಏ.6ರಂದು ಅತಿರುದ್ರಮ ಹಾಯಾಗದ ಪೂರ್ಣಾಹುತಿ ನಡೆಯ ಲಿದೆ. ಏ.8ರಂದು ಲಲಿತಾ ಹೋಮದ ಪೂರ್ಣಾಹುತಿ ನಡೆಯಲಿದೆ. ನರಸಿಂಹವನದ ಗುರುಭವನದ ಸಮೀಪ 6 ಎಕರೆ ಜಾಗದಲ್ಲಿ ಅಗತ್ಯ ಪೂರ್ವ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಮಹಾ ಯಾಗ ನಡೆಯುವ ಜಾಗ ವನ್ನು ಸಮತಟ್ಟು ಮಾಡಲಾಗಿದ್ದು, 101 ಹೋಮ ಕುಂಡಗಳನ್ನು ಸಿದ್ಧಪಡಿಸ ಲಾಗಿದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.