ಮೋದಿ ಜತೆ ಇಂದು ಶ್ರೀನಿವಾಸ ಸಂವಾದ
ವಿಶ್ವ ಜಲ ದಿನ ಮಾತುಕತೆಗೆ ರಾಜ್ಯದ ಏಕೈಕ ಗ್ರಾ.ಪಂ. ಅಧ್ಯಕ್ಷ
Team Udayavani, Mar 22, 2021, 7:00 AM IST
ಬೀದರ್: ವಿಶ್ವ ಜಲ ದಿನಾಚರಣೆ ಪ್ರಯುಕ್ತ ಜಲ ಸಂರಕ್ಷಣೆಯ ಮಹತ್ವದ ಕಾರ್ಯದಲ್ಲಿ ಯಶಸ್ಸು ಸಾಧಿಸಿರುವ ದೇಶದ 5 ಗ್ರಾ.ಪಂ. ಅಧ್ಯಕ್ಷರ ಜತೆ ಮಾ. 22 ರಂದು ಪ್ರಧಾನಿ ಮೋದಿ ವೀಡಿಯೋ ಸಂವಾದ ನಡೆಸಲಿದ್ದಾರೆ. ಇದರಲ್ಲಿ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಧೂಪ ತಮಹಾಗಾಂವ್ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಅವರು ಭಾಗವಹಿಸಲಿದ್ದಾರೆ.
ಈ ಐದು ಗ್ರಾ.ಪಂ. ಅಧ್ಯಕ್ಷರು ತಮ್ಮ ಪಂಚಾಯತ್‌ಗಳಲ್ಲಿ ಜಲಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಯಶೋಗಾಥೆಗಳನ್ನು ಕಿರುಚಿತ್ರದ ಮೂಲಕ ತಿಳಿಯಲಿದ್ದಾರೆ. ಅಂತರ್ಜಲ ಸಮಸ್ಯೆ ನೀಗಿಸಲು ಅಗತ್ಯ ಸಲಹೆ ಸ್ವೀಕರಿಸಲಿದ್ದಾರೆ. ಕರ್ನಾಟಕ, ಗುಜರಾತ್, ರಾಜಸ್ಥಾನ ಮತ್ತು ಹರಿಯಾಣ ರಾಜ್ಯಗಳ 5 ಗ್ರಾ.ಪಂ. ಅಧ್ಯಕ್ಷರ ಜತೆ ಮಾ. 22ರಂದು ವರ್ಚುವಲ್ ಸಂವಾದ ನಡೆಯಲಿದೆ.
ಧೂಪತಮಹಾಗಾಂವ್ ಜಲಕ್ರಾಂತಿ :
ಧೂಪತಮಹಾಗಾಂವ್‌ನಲ್ಲಿ ಹೂಳು ತುಂಬಿದ್ದ ಸುಮಾರು 1.5 ಎಕರೆ ವಿಸ್ತಾರದ ಗೊಗ್ಗವ್ವೆ ಕೆರೆಯನ್ನು ಲಾಕ್‌ಡೌನ್ ಅವಧಿಯಲ್ಲಿ ನರೇಗಾದಡಿ 10 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ. ಹಾಳು ಕೊಂಪೆಯಾಗಿದ್ದ ಗ್ರಾ.ಪಂ. ವ್ಯಾಪ್ತಿಯ ಪುರಾತನ ಬಾವಿಗಳನ್ನು ಪುನಶ್ಚೇತನಗೊಳಿಸಲಾಗಿದೆ.
ಪ್ರಧಾನಿ ಜತೆಗೆ ಸಂವಾದ ನಡೆಸುವ ದೇಶದ ಐದು ಗ್ರಾ.ಪಂ. ಅಧ್ಯಕ್ಷರಲ್ಲಿ ನಾನೂ ಒಬ್ಬನಾಗಿರುವುದು ಹೆಮ್ಮೆ, ಖುಷಿ ತಂದಿದೆ. ಈ ಅವಕಾಶದಿಂದ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ಸಿಕ್ಕಂತಾಗಲಿದೆ. – ಶ್ರೀನಿವಾಸ ಜೊನ್ನೆಕೇರಿ, ಧೂಪತಮಹಾಗಾಂವ್ ಗ್ರಾ.ಪಂ. ಅಧ್ಯಕ್ಷ
-ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
MUST WATCH
ಹೊಸ ಸೇರ್ಪಡೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.