ಶ್ರೀರಂಗಪಟ್ಟಣಕ್ಕೂ ಬಂತು “ಟ್ರಿಣ್ ಟ್ರಿಣ್’ ಸೈಕಲ್
Team Udayavani, Dec 28, 2017, 4:39 PM IST
ಮಂಡ್ಯ: ನಾಲ್ಕು ತಿಂಗಳ ಹಿಂದಷ್ಟೇ ಮೈಸೂರಿನಲ್ಲಿ ಆರಂಭಗೊಂಡ “ಮೈ ಟ್ರಿಣ್ ಟ್ರಿಣ್ ಡಾಟ್ ಕಾಂ’ ಮಾದರಿಯಲ್ಲೇ ಶ್ರೀರಂಗಪಟ್ಟಣದಲ್ಲೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶ ದಿಂದ “ಟ್ರಿಣ್ ಟ್ರಿಣ್’ ಸೈಕಲ್‌ಗಳು ರಿಂಗಣಿಸುತ್ತಿವೆ.
ಶ್ರೀರಂಗಪಟ್ಟಣದ ಬಸ್ ನಿಲ್ದಾಣದ ಬಳಿ ಮೊದಲ ಹಂತದಲ್ಲಿ 20 ಸೈಕಲ್‌ಗಳಿಗೆ ಚಾಲನೆ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ನಮ್ಮ-ನಿಮ್ಮ ಸೈಕಲ್ ಫೌಂಡೇಶನ್ ಸಹಯೋಗದೊಂದಿಗೆ ಸೈಕಲ್‌ಗಳನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡುತ್ತಿದ್ದು, ಪ್ರತಿ ಗಂಟೆಗೆ 10 ರೂ.ನಂತೆ ಸೈಕಲ್‌ಗಳನ್ನು ಸವಾರಿಗೆ ಕೊಡಲಾಗುತ್ತಿದೆ. ಪ್ರವಾಸಿಗರಿಂದ ಆಧಾರ್ ಕಾರ್ಡ್‌ನ ಝೆರಾಕ್ಸ್ ಪಡೆದು ಸೈಕಲ್‌ಗಳನ್ನು ನೀಡಲಾಗುತ್ತಿದೆ.
ರೈತ ಮುಖಂಡ ಕಿರಂಗೂರು ಪಾಪು ಅವರು ಶ್ರೀರಂಗಪಟ್ಟಣದಲ್ಲಿ ಟ್ರಿಣ್ ಟ್ರಿಣ್ ಸೈಕಲ್‌ಗಳಿಗೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಇಲಾಖೆ ಸಚಿವರು, ಸಂಸದ ಸಿ.ಎಸ್.ಪುಟ್ಟರಾಜು, ಜಿಲ್ಲಾಧಿಕಾರಿ, ಪುರಸಭೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿದ್ದರು. ನಾಲ್ಕು ತಿಂಗಳ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ.
ಪ್ರೇಕ್ಷಣೀಯ ಸ್ಥಳಗಳು: ಶ್ರೀರಂಗಪಟ್ಟಣ ಪಟ್ಟಣ ವ್ಯಾಪ್ತಿಯಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಟ್ರಿಣ್ ಟ್ರಿಣ್ ಸೈಕಲ್‌ಗಳಿಗೆ ಚಾಲನೆ ನೀಡಲಾಗಿದೆ. ಐತಿಹಾಸಿಕ ಸ್ಥಳವಾದ
ಶ್ರೀರಂಗಪಟ್ಟಣದಲ್ಲಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಮಾತ್ರವಲ್ಲದೇ ಮೂಡಲಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಕ್ಷಣಾಂಬಿಕಾ ಜ್ಯೋತಿರ್ಮಹೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಗಂಗಾಧರೇಶ್ವರ ಸ್ವಾಮಿ, ಶ್ರೀ ನಿಮಿಷಾಂಬ ದೇಗುಲಗಳಿವೆ.
ಅದೇ ರೀತಿ ರಂಗನತಿಟ್ಟು ಪಕ್ಷಿಧಾಮ, ದರಿಯಾದೌಲತ್, ಟಿಪ್ಪುಸುಲ್ತಾನ್ ಮಡಿದ ಸ್ಥಳ, ಕರ್ನಲ್ ಬೇಲಿಯ ಸೆರೆಮನೆ,
ಮದ್ದಿನ ಮನೆಗಳು, ಕೋಟೆ ಬುರುಜುಗಳು, ಸುಲ್ತಾನ್ ಭತ್ತೇರಿ, ಗುಂಬಜ್, ಸಂಗಮ, ಗೋಸಾಯ್‌ಘಾಟ್ ಸೇರಿದಂತೆ ಅನೇಕ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಸೆಳೆಯುತ್ತಿವೆ.
ಪುರಾಣ ಪುಣ್ಯಕ್ಷೇತ್ರ ಎನ್ನಿಸಿರುವ ಶ್ರೀರಂಗಪಟ್ಟಣಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹೊರಗಿನಿಂದ ಆಗಮಿಸುತ್ತಿದ್ದಾರೆ. ಪರಿಣಾಮ ಪಟ್ಟಣ ಸದಾ ವಾಹನ ದಟ್ಟಣೆಗಳಿಂದ ತುಂಬಿಕೊಂಡಿದೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಆರಂಭಿಸಲಾಗಿರುವ ಟ್ರಿಣ್ ಟ್ರಿಣ್ ಸೈಕಲ್ ಸವಾರಿ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆ ಇದೆ.
ಹೊಸ ಅನುಭವ: ಮೊದಲ ಹಂತದಲ್ಲಿ 20 ಸೈಕಲ್‌ಗಳನ್ನು ಪ್ರವಾಸಿಗರಿಗಾಗಿ ತರಲಾಗಿದೆ. ಮೊದಲ ದಿನವೇ ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹತ್ತಕ್ಕೂ ಹೆಚ್ಚು ಸೈಕಲ್‌ಗಳಿಗೆ ಬೇಡಿಕೆ ಬಂದಿದ್ದು, ಪ್ರವಾಸಿಗರು ಉತ್ಸಾಹದಿಂದ ಸೈಕಲ್ ಏರಿ ಹೊಸ ರೀತಿಯ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೈಕಲ್‌ಗಳಿಗೆ ಬರುವ ಬೇಡಿಕೆಯನ್ನು ಆಧರಿಸಿ ನಾಲ್ಕರಿಂದ ಐದು ಸ್ಥಳಗಳಲ್ಲಿ ಆರಂಭಿಸುವ ದಿಕ್ಕಿನಲ್ಲಿ ಚಿಂತನೆ ನಡೆಸಲಾಗಿದೆ.
ದೂರದ ಊರಿನಿಂದ ಬರುವವರು ವಾಹನ ದಟ್ಟಣೆಯಲ್ಲಿ ಸಾಗಲಾರದೆ ತಮ್ಮ ವಾಹನಗಳನ್ನು ಒಂದೆಡೆ ಪಾರ್ಕಿಂಗ್ ಮಾಡಿ ಸೈಕಲ್‌ಗಳನ್ನು ಏರಿ ಸಾಗುತ್ತಿದ್ದಾರೆ. ಟ್ರಿಣ್ ಟ್ರಿಣ್ ಸೈಕಲ್ ಮೈಸೂರಿನಲ್ಲಿ ಯಶಸ್ವಿಯಾಗಿದ್ದು, ಇಲ್ಲಿಯೂ ಅದೇ ಮಾದರಿಯಲ್ಲಿ ಸ್ಪಂದನೆ ಸಿಗಬಹುದೆಂದು ನಿರೀಕ್ಷಿಸಲಾಗಿದೆ.
ಇನ್ನೆರಡು ಸ್ಥಳ ಗುರುತು: ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಒಂದು ಟ್ರಿಣ್ ಟ್ರಿಣ್ ಸೈಕಲ್ ಕೇಂದ್ರ ತೆರೆಯಲಾಗಿದ್ದು, ನಾಳೆಯಿಂದ ಶ್ರೀ ನಿಮಿಷಾಂಬ ದೇವಸ್ಥಾನ, ರೈಲು ನಿಲ್ದಾಣದ ಬಳಿಯೂ ಸೈಕಲ್‌ಗಳಿಗೆ ಚಾಲನೆ ನೀಡಲಾಗುವುದು. ಸದ್ಯ ಸೈಕಲ್ ಗಳ ನಿಲ್ದಾಣಕ್ಕೆ ವ್ಯವಸ್ಥೆ ಮಾಡಿಲ್ಲ. ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಬಿಸಿಲಿನಲ್ಲೇ ಸೈಕಲ್‌ಗಳನ್ನು ನಿಲ್ಲಿಸಲಾಗಿದೆ. ಯಾವುದೇ ನಾಮಫಲಕವನ್ನೂ ಅಳವಡಿಸಲಾಗಿಲ್ಲ. ಶೀಘ್ರದಲ್ಲೇ ಟ್ರಿಣ್ ಟ್ರಿಣ್ ಸೈಕಲ್‌ಗಳಿಗೆ ಸಮರ್ಪಕ ನಿಲ್ದಾಣ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಪ್ರವಾಸಿಗರಿಗೆ ಅನುಕೂಲ: ಟ್ರಿಣ್ ಟ್ರಿಣ್ ಸೈಕಲ್‌ನಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಿದೆ. ಶ್ರೀರಂಗಪಟ್ಟಣ ಸೇರಿದಂತೆ ಸುತ್ತಮುತ್ತ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅಲ್ಲಿಗೆ ವಾಹನಗಳಲ್ಲಿ ತೆರಳುವುದರಿಂದ ಪರಿಸರ ಮಾಲಿನ್ಯ ಸೃಷ್ಟಿಯಾಗುತ್ತಿತ್ತು. ಇದೀಗ ಪ್ರವಾಸಿ ಸ್ಥಳಗಳಿಗೆ ಸೈಕಲ್ ವ್ಯವಸ್ಥೆ ಆರಂಭಿಸಿರುವುದರಿಂದ ಪ್ರವಾಸಿಗರಿಗೆ ಅನುಕೂಲವಾಗಿದೆ. ಅಧಿಕಾರಿಗಳು ಇನ್ನೂ ಎರಡು ಸ್ಥಳಗಳನ್ನು ಗುರುತಿಸಿದ್ದು, ಸದ್ಯದಲ್ಲೇ ಅಲ್ಲಿಯೂ ಚಾಲನೆ ಸಿಗಲಿದೆ.
ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.