ಬಾನುಲಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತಾ ಕಾರ್ಯಕ್ರಮ
Team Udayavani, Feb 26, 2020, 3:04 AM IST
ಬೆಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಕಾಶವಾಣಿ ಮತ್ತು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ) ಸಹಯೋಗದಲ್ಲಿ ಪರೀಕ್ಷಾ ಸಿದ್ಧತಾ ಕಾರ್ಯಕ್ರಮ ಮಾ.2ರಿಂದ 24ರವೆರೆ ನಡೆಯಲಿದೆ.
ರಾಜ್ಯದ 13 ಆಕಾಶವಾಣಿ ಕೇಂದ್ರಗಳಲ್ಲಿ ಮಾಧ್ಯಾಹ್ನ 2.35ರಿಂದ 3 ಗಂಟೆಯವರೆಗೆ ಏಕಕಾಲದಲ್ಲಿ ಪ್ರಸಾರವಾಗಲಿದೆ. ರಾಜ್ಯದ ನುರಿತ ಶಿಕ್ಷಕರು, ಶಿಕ್ಷಣ ತಜ್ಞರು, ಮಾನಸಿಕ ತಜ್ಞರು, ವೈದ್ಯರು, ಸಚಿವರು ಹಾಗೂ ಇಲಾಖಾ ಅಧಿಕಾರಿಗಳು ಪರೀಕ್ಷೆಯ ವಿವಿಧ ಆಯಾಮದ ಮಾಹಿತಿಯನ್ನು ಆಕಾಶವಾಣಿ ಮೂಲಕ ವಿದ್ಯಾರ್ಥಿಗಳಿಗೆ ನೀಡಲಿದ್ದಾರೆ ಎಂದು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎಸ್.ಆರ್.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮಗಳೆಲ್ಲವೂ ಸಂಜೆ 5.30ಕ್ಕೆ ಬೆಂಗಳೂರಿನ ಎಫ್.ಎಂ.ರೇನ್‌ಬೋ 101.3ನಲ್ಲಿ ಮರುಪ್ರಸಾರವಾಗಲಿದೆ. https://primary.airbengaluru.com ಲಿಂಕ್ ಬಳಸಿ ಪ್ರತಿದಿನ ಮಾಧ್ಯಾಹ್ನದ ಲೈವ್ ಕಾರ್ಯಕ್ರಮ ಹಾಗೂ https://rainbow.airbengaluru.com ನಲ್ಲಿ ಮರು ಪ್ರಸಾರವನ್ನು ಸಂಜೆ 5.30ಕ್ಕೆ ಕೆಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರತಿ ದಿನದ ಕಾರ್ಯಕ್ರಮ (ಮಧ್ಯಾಹ್ನ 2.35ರಿಂದ 3 ಗಂಟೆವರೆಗೆ)
ಮಾ.2: ಕನ್ನಡ ಪ್ರಥಮ ಭಾಷೆ(ಗದ್ಯ ಮತ್ತು ಗ್ರಾಮರ್)
ಮಾ.3: ಕನ್ನಡ ಪ್ರಥಮ ಭಾಷೆ(ಗದ್ಯ ಮತ್ತು ಗ್ರಾಮರ್)
ಮಾ.4: ಇಂಗ್ಲಿಷ್ ದ್ವಿತೀಯ ಭಾಷೆ
ಮಾ.5: ಗಣಿತ(ಅಂಕಗಣಿತ, ಬೀಜಗಣಿತ)
ಮಾ.6: ಗಣಿತ(ರೇಖಾಗಣಿತ)
ಮಾ.9: ವಿಜ್ಞಾನ( ಭೌತಶಾಸ್ತ್ರ, ರಸಾಯನಶಾಸ್ತ್ರ)
ಮಾ.10: ವಿಜ್ಞಾನ(ಜೀವಶಾಸ್ತ್ರ)
ಮಾ.11: ಸಮಾಜ ವಿಜ್ಞಾನ(ಇತಿಹಾಸ ಮತ್ತು ರಾಜ್ಯಶಾಸ್ತ್ರ)
ಮಾ.12: ಸಮಾಜ ವಿಜ್ಞಾನ(ಭೂಗೋಳ ಮತ್ತು ಅರ್ಥಶಾಸ್ತ್ರ)
ಮಾ.13: ಹಿಂದಿ ತೃತೀಯ ಭಾಷೆ
ಮಾ.16: ಶಿಕ್ಷಣ ಸಚಿವರ ಹಿತನುಡಿ
ಮಾ.17: ಸಂಸ್ಕೃತ ಪ್ರಥಮ ಭಾಷೆ
ಮಾ.18: ಇಂಗ್ಲಿಷ್ ಪ್ರಥಮ ಭಾಷೆ
ಮಾ.19: ಉರ್ದು ಪ್ರಥಮ ಭಾಷೆ
ಮಾ.20: ಪರೀಕ್ಷಾ ಸಮಯ ನಿರ್ವಹಣೆ
ಮಾ.23: ಮನಶಾಸ್ತ್ರಜ್ಞರು ಮತ್ತು ವೈದ್ಯರಿಂದ ಪರೀಕ್ಷಾ ಸಮಯದ ಜಾಗೃತಿ
ಮಾ.24: ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಡಿಎಸ್‌ಇಆರ್‌ಟಿ ನಿರ್ದೇಶಕರಿಂದ ಮಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
MUST WATCH
ಹೊಸ ಸೇರ್ಪಡೆ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.