Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
ಸಬ್‌ರಿಜಿಸ್ಟ್ರಾರ್‌ಗಳ ವಿಶೇಷಾಧಿಕಾರ ಮೊಟಕಿಗೆ ಕಾನೂನು ತಿದ್ದುಪಡಿ
Team Udayavani, Dec 28, 2024, 6:45 AM IST
ಬೆಂಗಳೂರು: ನೋಂದಣಿಯೇತರ ಒಡಂಬಡಿಕೆಗಳಿಗಾಗಿ ಬಳಸುವ ಸ್ಟ್ಯಾಂಪ್ ಪೇಪರ್‌ಗಳ ನಕಲಿ ಹಾವಳಿ ಹೆಚ್ಚುತ್ತಿರುವುದನ್ನು ಪತ್ತೆ ಹಚ್ಚಿರುವ ಕಂದಾಯ ಇಲಾಖೆಯು ಎ. 1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿಗೆ ನಿರ್ಧರಿಸಿದ್ದು, ಸಬ್ ರಿಜಿಸ್ಟ್ರಾರ್‌ಗಳ ವಿಶೇಷ ಅಧಿಕಾರವನ್ನು ಮೊಟಕುಗೊಳಿಸಲು ಕಾನೂನು ತಿದ್ದುಪಡಿಗೆ ನಿರ್ಧರಿಸಿದೆ.
ಸುಮಾರು 54 ಬಗೆಯ ನೋಂದಣಿಯೇತರ ಒಡಂಬಡಿಕೆ ಗಳಿಗಾಗಿ ಸ್ಟಾಂಪ್ ಪೇಪರ್‌ಗಳು ಬಳಕೆಯಾಗುತ್ತವೆ. ಮನೆ, ವಾಣಿಜ್ಯ ಮಳಿಗೆ ಒಪ್ಪಂದ ಪತ್ರ, ಸಾಲ, ಟೆಂಡರ್, ಸಾಮಗ್ರಿ ಸರಬರಾಜು ಸಹಿತ ಅನೇಕ ವಿಧದ ದಸ್ತಾವೇಜುಗಳು, ಎಸ್ಕಾಂಗಳಿಂದ ಗೃಹಬಳಕೆ ಹಾಗೂ ವಾಣಿಜ್ಯ ವಿದ್ಯುತ್ ಸಂಪರ್ಕ ಸೇರಿ ಸರಕಾರದ ಜತೆಗೆ ನಡೆಸುವ ಎಲ್ಲ ವಿಧದ ಒಡಂಬಡಿಕೆ ಸಂದರ್ಭದಲ್ಲಿ ಸ್ಟಾಂಪ್ ಪೇಪರ್ ಅಗತ್ಯವಾಗಿ ಬೇಕಾಗುತ್ತದೆ. ಆದರೆ “ತೆಲಗಿ ಛಾಪಾ ಕಾಗದ ಹಗರಣ’ ಮಾದರಿಯಲ್ಲಿ ಒಂದು ದಶಕದಿಂದ ಸ್ಟ್ಯಾಂಪ್ ಪೇಪರ್‌ಗಳ ಕಲರ್ ಝೆರಾಕ್ಸ್ ತೆಗೆದು ಅದಕ್ಕೆ ಸಬ್ ರಿಜಿಸ್ಟ್ರಾರ್‌ಗಳ ಸೀಲು-ಸಹಿ ಹಾಕಿ ಸರಕಾರದ ಆದಾಯಕ್ಕೆ ದೋಖಾ ಮಾಡುತ್ತಿರುವುದನ್ನು ಕಂದಾಯ ಇಲಾಖೆ ಪತ್ತೆ ಹಚ್ಚಿದೆ.
ಇದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 3ರಿಂದ 4 ಸಾವಿರ ಕೋಟಿ ರೂ.ಗೂ ಮೇಲ್ಪಟ್ಟು ವಾರ್ಷಿಕ ಆದಾಯ ನಷ್ಟವಾಗುತ್ತಿದೆ ಎಂದು ಆಡಿಟ್ ಸಂದರ್ಭದಲ್ಲಿ ಅಂದಾಜಿಸಲಾಗಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತಂದು ಚಲನ್ ನೀಡುವ ಮೂಲಕ ಸ್ಟ್ಯಾಂಪ್ ಪೇಪರ್ ದುರ್ಬಳಕೆ ತಡೆಯುವ ಬಗ್ಗೆ ಕಂದಾಯ ಇಲಾಖೆ ನಿರ್ಧ ರಿಸಿದೆ. ಸಚಿವ ಕೃಷ್ಣ ಬೈರೇಗೌಡ ಅವರೇ ಖುದ್ದಾಗಿ ಈ ವ್ಯವಸ್ಥೆ ಜಾರಿ ಬಗ್ಗೆ ಚಿಂತನೆ ನಡೆಸಿದ್ದು, ಎ. 1ರಿಂದ ಅನುಷ್ಠಾನಕ್ಕೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದರಿಂದ ವಾರ್ಷಿಕ 3ರಿಂದ 4 ಸಾವಿರ ಕೋಟಿ ರೂ. ಆದಾಯ ಹೆಚ್ಚಿಸಬಹುದೆಂಬುದು ಒಂದು ಅಂದಾಜು. ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಮೂಗಿನ ಕೆಳಗೆ 2013ರಿಂದಲೂ ಈ ಅವ್ಯವಹಾರ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸರಕಾರದ ಕೊನೆಯ ಅವಧಿಯಲ್ಲಿ ಅಂದಿನ ಕಂದಾಯ ಸಚಿವ ಆರ್. ಅಶೋಕ ಕೂಡಾ ಈ ಅವ್ಯವಸ್ಥೆಯ ನಿಯಂತ್ರಣಕ್ಕೆ ಮುಂದಾಗಿದ್ದರು. ಆದರೆ ಸರಕಾರದ ಕೊನೆಯ ಅವಧಿಯಲ್ಲಿ ಗಮನಕ್ಕೆ ಬಂದಿದ್ದರಿಂದ ಅಲ್ಲಿಗೇ ನಿಂತಿತ್ತು.
ಆದರೆ ಕೃಷ್ಣ ಬೈರೇಗೌಡ ಕಂದಾಯ ಸಚಿವರಾದ ಬಳಿಕ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿತ್ತು. ಕಾಮಗಾರಿಯ ಸ್ವರೂಪಕ್ಕೆ ತಕ್ಕಂತೆ ಸ್ಟಾಂಪ್ ಪೇಪರ್ ಖರೀದಿ ಮಾಡಬೇಕಾಗುತ್ತದೆ. ಆದರೆ ಹತ್ತಾರು ಚಲನ್‌ಗಳಲ್ಲಿ ಒಂದೇ ಸ್ಟ್ಯಾಂಪ್ ಪೇಪರ್ ನಂಬರ್ ಬಳಕೆ ಇದೆ. ವಿಶೇಷವೆಂದರೆ ಇದಕ್ಕೆ ಕಡಿವಾಣ ಹಾಕಬೇಕಿದ್ದ
ಉಪನೋಂದಣಾಧಿಕಾರಿಗಳು ತಮ್ಮ ಸೀಲು-ಸಹಿಯನ್ನು ಈ ಪತ್ರಕ್ಕೆ ಹಾಕಿ ಸರಕಾರದ ಆದಾಯದ ಸೋರಿಕೆಯಲ್ಲಿ ಕೈ ಜೋಡಿಸಿದ್ದಾರೆ. ಯಾವುದೋ ಒಂದು ಪ್ರಭಾವಿ ಜಾಲ ಈ ಸ್ಟ್ಯಾಂಪ್ ಪೇಪರ್ ನಕಲಿ ಮುದ್ರಣದ ಹಿಂದೆ ಇದೆ ಎಂಬ ಅನುಮಾನವೂ ಇದೆ. ಹೀಗಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೆಕ್ಷನ್ 10ಎ ಅಧಿಕಾರವನ್ನು ಸಬ್ ರಿಜಿಸ್ಟ್ರಾರ್‌ಗಳಿಂದ ಕಸಿ ದು ಕೊಂಡರೆ ಅವ್ಯವಹಾರ ತಡೆಯಬಹುದೆಂಬುದು ಲೆಕ್ಕಾಚಾರವಾಗಿದೆ.
ಬಜೆಟ್ ಅಧಿವೇಶನದಲ್ಲಿ ಮಂಡನೆ?
ಈ ವ್ಯವಸ್ಥೆಯನ್ನು ಜಾರಿಗೆ ತರಬೇಕಿದ್ದರೆ ಹಾಲಿ ಇರುವ ಕಂದಾಯ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಸಬ್ ರಿಜಿಸ್ಟ್ರಾರ್‌ಗಳಿಗೆ ನೀಡಿರುವ ಈ ವಿಶೇಷ ಅಧಿಕಾರವನ್ನು ವಾಪಸ್ ಪಡೆಯುವುದಕ್ಕೂ ಕಾನೂನು ತಿದ್ದುಪಡಿ ಅಗತ್ಯ ವಾಗುತ್ತದೆ. ಹೀಗಾಗಿ ಮುಂದಿನ ಬಜೆಟ್ ಅಧಿವೇಶನ ಸಂದರ್ಭದಲ್ಲಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿ ಹೊಸ ವ್ಯವಸ್ಥೆ ಜಾರಿಗೆ ತರಲು ಸರಕಾರದ ಹಂತದಲ್ಲಿ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.
2600 ಗುತ್ತಿಗೆದಾರರಿಗೆ ನೋಟಿಸ್
ಎಸ್ಕಾಂ ವ್ಯಾಪ್ತಿಯಲ್ಲಿನ 70 ಸಾವಿರ ಗುತ್ತಿಗೆದಾರರು ಸರಕಾರದ ಜತೆಗಿನ ಒಡಂಬಡಿಕೆ ಸಂದರ್ಭದಲ್ಲಿ ಕಲರ್ ಝೆರಾಕ್ಸ್ ಮಾರ್ಗವನ್ನೇ ಹಿಡಿದಿದ್ದಾರೆ ಎಂಬುದು ಆಡಿಟ್ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಕಳೆದ 2 ತಿಂಗಳು ಅವಧಿಯಲ್ಲಿ ಈ ಕಾರಣಕ್ಕಾಗಿ ಸುಮಾರು 2,600 ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಾಘವೇಂದ್ರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.