ಉಜಿರೆ ಎಸ್‌ಡಿಎಂಗೆ ಸ್ಟಾರ್ ಕಾಲೇಜು ಮನ್ನಣೆ
Team Udayavani, Dec 15, 2019, 3:03 AM IST
ಬೆಳ್ತಂಗಡಿ: ವಿಜ್ಞಾನ ವಿಭಾಗಗಳನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜನ್ನು ಸ್ಟಾರ್ ಕಾಲೇಜು ಯೋಜನೆಯಡಿ ಆಯ್ಕೆ ಮಾಡಿದೆ. ಕೇಂದ್ರದ ವಿಜ್ಞಾನ ತಂತ್ರಜ್ಞಾನ ಸಚಿವಾಲಯದ ಬಯೋಟೆಕ್ನಾಲಜಿ ಘಟಕವು ಉಜಿರೆ ಕಾಲೇಜಿಗೆ ಈ ಯೋಜನೆಯಡಿ 82 ಲಕ್ಷ ರೂ.ಗಳ ಅನುದಾನದೊಂದಿಗೆ ವಿಜ್ಞಾನ ವಿಭಾಗಗಳನ್ನು ಮೇಲ್ದರ್ಜೆಗೆ ಏರಿಸಲು ಉತ್ತೇಜನ ದೊರಕಿದೆ.
ಕಾಲೇಜಿನ ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಬಯೋಟೆಕ್ನಾಲಜಿ ವಿಭಾಗಗಳು ಸ್ಟಾರ್ ಕಾಲೇಜು ಯೋಜನೆಯಡಿ ಗುರುತಿಸಲ್ಪಟ್ಟಿವೆ. ವಿಭಾಗಗಳ ಪ್ರಯೋಗಾಲಯದ ಉತ್ಕೃಷ್ಟತೆ, ಅಗತ್ಯ ಸೌಕರ್ಯಗಳ ಲಭ್ಯತೆ ಹಾಗೂ ವಿಚಾರ ಸಂಕಿರಣ, ಸಂಶೋಧನಾ ಯೋಜನೆ, ವಿದ್ಯಾರ್ಥಿಕೇಂದ್ರಿತ ಚಟುವಟಿಕೆಗಳಿಗೆ ಅನುದಾನ ಬಳಕೆಯಾಗಲಿದೆ. ಕೇಂದ್ರ ಸರಕಾರವು ವಿಜ್ಞಾನ ವಿಭಾಗಗಳ ಗುಣಮಟ್ಟ ವೃದ್ಧಿಗೆ ರೂಪಿಸಿರುವ ವಿಶೇಷ ಯೋಜನೆಯಡಿ ಈ ಸ್ಟಾರ್‌ಕಾಲೇಜು ಪರಿಕಲ್ಪನೆಯೂ ಸೇರಿದೆ.
ಇತ್ತೀಚೆಗಷ್ಟೇ ಪರಾಮರ್ಶ್ ಯೋಜನೆಯಡಿ ಯುಜಿಸಿಯು ಉಜಿರೆ ಎಸ್.ಡಿ.ಎಂ. ಕಾಲೇಜನ್ನು ಮೆಂಟರ್ ಇನ್ಸ್‌ಸ್ಟಿಟ್ಯೂಟ್ ಎಂದು ನಿಯೋಜಿಸಿ ಸುತ್ತಮುತ್ತಲಿನ ಕಾಲೇಜುಗಳಿಗೆ ನ್ಯಾಕ್ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡುವ ಮಹತ್ವದ ಹೊಣೆಗಾರಿಕೆ ನಿಭಾಯಿಸುವ ಅವಕಾಶ ಒದಗಿಸಿದೆ. ಇದಲ್ಲದೆ ಯುಜಿಸಿಯು ಉದ್ಯೋಗಾಧಾರಿತ ಕೌಶಲ್ಯಾಧಾರಿತ ಮೂರು ಬಿ-ವೋಕೆಶನಲ್ ಕೋರ್ಸ್‌ಗಳನ್ನು ನಡೆಸಲು ಉಜಿರೆ ಕಾಲೇಜಿಗೆ ಮನ್ನಣೆ ನೀಡಿತ್ತು. ಇದರ ಜತೆಗೆ ಈಗ ಸ್ಟಾರ್‌ಕಾಲೇಜು ರೂಪದಲ್ಲಿ ಮತ್ತೂಂದು ಮನ್ನಣೆ ದೊರಕಿದಂತಾಗಿದೆ ಎಂದು ಪ್ರಾಂಶುಪಾಲ ಪ್ರೊ.ಎಸ್.ಸತೀಶ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.