State Govt; ಸರ್ವೇಗೆ ವೇಗ: 1000 ಭೂಮಾಪಕರಿಗೆ ಪ್ರಮಾಣಪತ್ರ
ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್ ವಿತರಣೆ; ಪಂಚಾಯತ್ ಮಟ್ಟದಿಂದ ಇ-ಆಫೀಸ್: ಕೃಷ್ಣಬೈರೇಗೌಡ
Team Udayavani, Mar 14, 2024, 12:17 AM IST
ಬೆಂಗಳೂರು: ರಾಜ್ಯಾದ್ಯಂತ ಸರ್ವೇ ಕಾರ್ಯಕ್ಕೆ ವೇಗ ನೀಡುವ ಸಲುವಾಗಿ ಪರವಾನಗಿಯುಳ್ಳ 1,000 ಭೂಮಾಪಕರಿಗೆ ಸರಕಾರ ಪ್ರಮಾಣಪತ್ರ ನೀಡಿದ್ದು, ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್ ನೀಡುವ ಮೂಲಕ ಕಂದಾಯ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೆಜ್ಜೆ ಇಟ್ಟಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬುಧವಾರ ಜರಗಿದ ಸಮಾರಂಭದಲ್ಲಿ ಭೂಮಾಪಕರಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ನೀಡಿ, ಗ್ರಾಮಲೆಕ್ಕಿಗರಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡರು, ಮುಂದಿನ 2 ತಿಂಗಳಲ್ಲಿ ಆಕಾರ್‌ಬಂದ್‌ಗಳ ಡಿಜಿಟಲೀಕರಣ ಆಗಲಿದೆ. ಎಲ್ಲ ಗ್ರಾಮ ಲೆಕ್ಕಿಗರಿಗೂ ಲ್ಯಾಪ್‌ಟಾಪ್ ನೀಡುವ ಮೂಲಕ ಇ-ಆಫೀಸ್ ವ್ಯವಸ್ಥೆಯನ್ನು ಪಂಚಾಯತ್ ಮಟ್ಟ ದಿಂದಲೂ ಜಾರಿಗೊಳಿಸ ಲಾಗುತ್ತದೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳು ನಡೆಸಿದ ಜನತಾದರ್ಶನದಲ್ಲಿ ಶೇ.30 ಅರ್ಜಿಗಳು ನಮ್ಮ ಇಲಾಖೆಗೆ ಸಂಬಂಧಿ ಸಿದವೇ ಇದ್ದವು. ಅಷ್ಟು ಪ್ರಮಾಣದ ಕೆಲಸಗಳು ಬಾಕಿಯಾಗುತ್ತಲೇ ಇವೆ. ಯಾವುದೇ ಸಮಸ್ಯೆಗಳಿಗೆ ಒಮ್ಮೆಲೇ ಪರಿಹಾರ ಸಿಗುವುದಿಲ್ಲ. ಆದರೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ನೀಲನಕ್ಷೆ ಇರಬೇಕು. ಅದನ್ನು ಅನುಷ್ಠಾನಗೊಳಿಸುವ ಮಾನವ ಸಂಪನ್ಮೂಲ ಬೇಕು ಹಾಗೂ ತಂತ್ರಜ್ಞಾನ ಬಳಸಿಕೊಂಡು ಪರಿಹಾರ ನೀಡುವ ವೇಗವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ 3.90 ಕೋಟಿ ಜಮೀನುದಾರರಿದ್ದಾರೆ. ಆದರೆ ಸರ್ವೇ ನಂಬರ್‌ಗಳು ಮಾತ್ರ 1.87 ಕೋಟಿಯಷ್ಟಿದೆ. ಕೋಟ್ಯಂತರ ಪ್ರಕರಣಗಳಲ್ಲಿ ಸರ್ವೇ ನಂಬರ್ ಸೃಷ್ಟಿಸಿ ಹಿಸ್ಸೆ ಮಾಡಬೇಕಿದೆ. ಬ್ರಿಟಿಷರ ಅವಧಿ 1920ರ ಬಳಿಕ ರಾಜ್ಯದಲ್ಲಿ ಸರ್ವೇ ಕಾರ್ಯ ನಡೆದಿಲ್ಲ. 21 ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಮರುಸರ್ವೇ ಮಾಡಲು ಚಿಂತನೆಗಳು ನಡೆದಿದ್ದು ರೈತರ ಜಮೀನು, ಅರಣ್ಯ ಭೂಮಿ ಹಾಗೂ ಕಂದಾಯ ಜಮೀ ನುಗಳ ಜಂಟಿ ಸರ್ವೇ ನಡೆಸಲಾಗುತ್ತಿದೆ. ಕಾಲಕಾಲಕ್ಕೆ ಇಲಾಖೆಯಲ್ಲಿ ಸಣ್ಣಪುಟ್ಟ ಸುಧಾರಣೆಗಳನ್ನು ತರಲಾಗುತ್ತಿದ್ದು, ಪಹಣಿಗಳ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು.
ಇದಕ್ಕೆ ಪೂರಕವಾಗಿ ಮಾನವ ಸಂಪನ್ಮೂಲವನ್ನೂ ಒದಗಿಸಲಾಗುತ್ತಿದ್ದು, ಕೆಪಿಎಸ್‌ಸಿ ಮೂಲಕ ತಹಶೀಲ್ದಾರರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಪರವಾನಗಿಯುಳ್ಳ 1000 ಭೂಮಾಪಕರಿಗೆ ಇಂದು ಪ್ರಮಾಣಪತ್ರ ನೀಡಿದ್ದು, ಮುಂದಿನ 6 ತಿಂಗಳಲ್ಲಿ 364 ಭೂಮಾಪಕರ ನೇಮಕವನ್ನೂ ಮಾಡಿಕೊಳ್ಳಲಾಗುತ್ತದೆ. 27 ಎಡಿಎಲ್‌ಆರ್ ನೇಮಕಕ್ಕೂ ಅಧಿಸೂಚಿಸಿದ್ದು, 541 ಭೂಮಾಪಕರ ನೇರ ನೇಮಕಾತಿಗೂ ಸಿಎಂ ಭರವಸೆ ನೀಡಿದ್ದಾರೆ. ಅಲ್ಲದೆ, ಹೆಚ್ಚುವರಿಯಾಗಿ 500 ಹುದ್ದೆಗಳನ್ನು ಕಂದಾಯ ಇಲಾಖೆಗೆ ಮಂಜೂರು ಮಾಡುವುದಾಗಿಯೂ ಆಶ್ವಾಸನೆ ಸಿಕ್ಕಿದೆ ಎಂದು ಹೇಳಿದರು.
ಗ್ರಾಮ ಸೇವಕರ ಗೌರವಧನ 15 ಸಾವಿರ ರೂ.
ರಾಜ್ಯದಲ್ಲಿರುವ 10 ಸಾವಿರ ಗ್ರಾಮ ಸೇವಕರಿಗೆ ಮಾಸಿಕ 13 ಸಾವಿರ ರೂ. ಇದ್ದ ಗೌರವಧನವು ಎ.1ರಿಂದ 15 ಸಾವಿರ ರೂ. ಆಗಲಿದೆ. ಕ್ರಿಯಾಯೋಜನೆ, ಮಾನವ ಸಂಪನ್ಮೂಲದ ಜತೆಗೆ ತಂತ್ರಜ್ಞಾನಕ್ಕೂ ಮಹತ್ವ ನೀಡಿದ್ದು, ಡ್ರೋನ್ ಹಾಗೂ ರೋವರ್‌ಗಳನ್ನು ಬಳಸಿ ಭೂಮಾಪನ ಮಾಡಲು ನಿರ್ಧರಿಸಿದ್ದು, 13 ಕೋಟಿ ರೂ. ವೆಚ್ಚದಲ್ಲಿ 420 ರೋವರ್‌ಗಳನ್ನು ಖರೀದಿಸಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.