ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ
ಪಿ.ಲಕ್ಷ್ಮಣ
Team Udayavani, Mar 12, 2021, 8:17 PM IST
ಮೊಳಕಾಲ್ಮೂರು : ಕ್ರೀಡೆಯಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳು ಕ್ರೀಡಾಮನೋಭಾವವನ್ನು ಅಳವಡಿಸಿ ಕೊಂಡು ಗೆಲುವು ಸಾಧಿಸಬೇಕು ಎಂದು ಪಪಂ ಅಧ್ಯಕ್ಷ ಪಿ.ಲಕ್ಷ್ಮಣ ತಿಳಿಸಿದರು.
ಪಟ್ಟಣದ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಕ್ರೀಡಾಪಟು ದಿ.ರವಿಕುಮಾರ್ ಅವರ ಸ್ಮರಣಾರ್ಥ ಯಂಗ್ ಬಾಯ್ಸ ಕ್ರಿಕೆಟರ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ ಮಾತನಾಡಿ, ಯುವ ಜನತೆಯು ಕ್ರೀಡೆಗಳನ್ನು ಆಡುವ ಮೂಲಕ ಆರೋಗ್ಯವಂತರಾಗಿ ಸದೃಢ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಿದೆ. ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ನಿವಾರಿಸಿ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಪ್ರಯೋಜನಕಾರಿಯಾಗಿವೆ. ಯುವ ವಿದ್ಯಾರ್ಥಿಗಳು ನಿಗ ದಿತ ಬಿಡುವಿನ ವೇಳೆಯಲ್ಲಿ ಕ್ರೀಡೆಗಳನ್ನು ಅಭ್ಯಾಸ ಮಾಡಿ ಕ್ರೀಡಾಮನೋಭಾವ ರೂಢಿಸಿಕೊಂಡು ಸ್ಪರ್ಧಿಸಿ ಆಡಿ ಗೆಲುವು ಪಡೆಯಬೇಕು ಎಂದರು.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂ.ಕೆ. ಬಸವರಾಜ್ ಮಾತನಾಡಿ, ಯುವ ಜನತೆಯು ಕ್ರೀಡೆಗಳಲ್ಲಿ ಯಶಸ್ಸು ಪಡೆದು ಉನ್ನತ ಹುದ್ದೆಗಳ ಸ್ಥಾನಮಾನ ಪಡೆಯಬಹುದಾಗಿದೆ. ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳಿಗೆ ಕ್ರೀಡೆಯು ಪೂರಕವಾಗಿದ್ದು, ಯುವ ಜನತೆಯು ಕ್ರೀಡೆಗಳಲ್ಲಿ ಸ್ಪ ರ್ಧಿಸಿ ಕ್ರೀಡಾ ಮನೋಭಾವದಿಂದ ಆಡುವ ಮೂಲಕ ಗೆಲುವು ಸಾಧಿಸಬೇಕು. ಯುವಕರು ವೇಗಮಿತಿಯೊಂದಿಗೆ ಬೈಕ್‌ಗಳಲ್ಲಿ ಸಂಚರಿಸಿ ಅಪಘಾತವಾಗದಂತೆ ಜಾಗೃತಿ ವಹಿಸಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ.ಪಂ ಸದಸ್ಯ ಎನ್.ಮಂಜಣ್ಣ, ಬಿ.ಜೆ.ಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ, ಎಸ್ .ಸಿ ಮೋರ್ಚಾಧ್ಯಕ್ಷ ಸಿದ್ಧಾರ್ಥ, ಮುಖಂಡರಾದ ರಘುತಿಲಕ್, ಅರ್ಜುನ, ಭೀಮಣ್ಣ, ರಮೇಶ್ ನಾಯಕ, ಯಂಗ್ ಬಾಯ್ಸ ಕ್ರಿಕೆಟರ್ನ ಮರಿಸ್ವಾಮಿ, ರಘು, ಭೂಮೇಶ್, ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.