ಮನೆ ಕಟ್ಟುವ ಕನಸಿಗೆ ಉಕ್ಕಿನ ಬೆಲೆಯೇರಿಕೆ ತಡೆ
Team Udayavani, Dec 30, 2020, 6:21 AM IST
ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಬ್ಬಿಣದ ಅದಿರಿಗೆ ಬೇಡಿಕೆ ಹೆಚ್ಚಿದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆ ಗಗನಕ್ಕೇರಿದೆ. ಚೀನದಲ್ಲಿ ಉಕ್ಕಿಗೆ ಬೇಡಿಕೆ ಹೆಚ್ಚಳ, ದೇಶೀಯ ಉತ್ಪಾದನೆ ಕುಸಿತ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಪ್ರತಿ ಕೂಲ ಪರಿಣಾಮ ಬೀರಲಿದೆ.
ಭಾರತದಿಂದ ಕಬ್ಬಿಣದ ಅದಿರು ವಿದೇಶಗಳಿಗೆ ರಫ್ತಾಗುತ್ತಿದೆ. ಚೀನದ ಬೇಡಿಕೆ ಈ ವರ್ಷದ ಎಪ್ರಿಲ್-ಜುಲೈ ಅವಧಿಯಲ್ಲಿ ಶೇ. 63ರಷ್ಟು ಹೆಚ್ಚಿದೆ. ಎಡಲ್‌ವೈಸ್ ಸಂಸ್ಥೆಯ ವರದಿ ಪ್ರಕಾರ 2019ರ ಸೆಪ್ಟಂಬರ್‌ನಿಂದ 2020ರ ಸೆಪ್ಟಂಬರ್ ವರೆಗೆ ಚೀನದ ಉಕ್ಕಿನ ಆಮದು ಶೇ. 9ರಷ್ಟು ಏರಿದೆ. ನಮ್ಮಿಂದ ಶೇ. 80ರಷ್ಟು ಕಬ್ಬಿಣದ ಅದಿರು ಚೀನಕ್ಕೆ ರಫ್ತಾಗಿದೆ.
ಈ ಬಗ್ಗೆ “ಉದಯವಾಣಿ’ ಜತೆಗೆ ಮಾತನಾಡಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (ಎಫ್ಕೆಸಿಸಿಐ)ದ ಅಧ್ಯಕ್ಷ ಪೆರಿಕಲ್ ಎಂ. ಸುಂದರ್, ಪ್ರತೀ ಟನ್ ಉಕ್ಕಿನ ಬೆಲೆ 35 ಸಾವಿರದಿಂದ 49 ಸಾವಿರ ರೂ.ಗಳಿಗೆ ಏರಿದೆ. ಅದಿರು ರಫ್ತಿಗೆ ನಿಷೇಧ ಹೇರ ಬೇಕು ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದಿದ್ದಾರೆ.
ವೆಚ್ಚ ಹೆಚ್ಚುವ ಸಾಧ್ಯತೆ
ಉಕ್ಕು, ಸಿಮೆಂಟ್ ಬೆಲೆಯೂ ಏರಿಕೆಯಾಗಿದೆ. ಇದರಿಂದಾಗಿ ರಿಯಲ್ ಎಸ್ಟೇಟ್ ವೆಚ್ಚ ಇನ್ನಷ್ಟು ಏರಿಕೆ ಉಂಟಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಕ್ರೆಡಾೖ ಉಪಾ ಧ್ಯಕ್ಷ ಸುರೇಶ್ ಹರಿ ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಲೇಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.