“ಸ್ಟೆಂಟ್’ ಹೆಚ್ಚಿನ ದರಕೆR ಮಾರಿದ್ರೆ ಲೈಸೆನ್ಸ್ ರದ್ದು
Team Udayavani, Feb 18, 2017, 6:42 AM IST
ಬೆಂಗಳೂರು: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಳವಡಿಸಲಾಗುವ “ಸ್ಟೆಂಟ್’ಗಳನ್ನು ದುಬಾರಿ ಬೆಲೆಗೆ
ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಮಾರಾಟ ಪರವಾನಗಿ ರದ್ದುಪಡಿಸಲಾಗುವುದು ಎಂದು ಕೇಂದ್ರ
ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಟೆಂಟ್‌ಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಿರುವುದು ಪತ್ತೆಯಾದರೆ ಹೆಚ್ಚುವರಿಯಾಗಿ ಪಡೆದ ಮೊತ್ತದ
ಜತೆಗೆ ಶೇ.15ರಷ್ಟು ದಂಡ ವಸೂಲಿ ಮಾಡಲಾಗುವುದು ಎಂದು ಹೇಳಿದರು. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ದೃಷ್ಠಿಯಲ್ಲಿಟ್ಟುಕೊಂಡು ಫೆ.13ರಂದು “ಸ್ಟೆಂಟ್’ಗಳ ದರಗಳನ್ನು ಶೇ.85ರಷ್ಟು ಕಡಿಮೆ ಮಾಡುವ ತೀರ್ಮಾನವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಆರೋಗ್ಯ ಭದ್ರತೆ ಒದಗಿಸಲು ಬದ್ಧವಾಗಿರುವ ಕೇಂದ್ರ ಸರ್ಕಾರ, ತನ್ನ ತೀರ್ಮಾನದ ಅನುಷ್ಠಾನದಲ್ಲೂ ಅಷ್ಟೇ ಕಾಳಜಿ ಹೊಂದಿದೆ. ಆದ್ದರಿಂದ ಬಡವರಿಗೆ ಅನುಕೂಲವಾಗಲಿ ಎಂದು ಸ್ಟೆಂಟ್‌ಗಳ ದರಗಳನ್ನು ಇಳಿಕೆ ಮಾಡಲಾಗಿದೆ ಎಂದು ಹೇಳಿದರು.
“ರಾಷ್ಟ್ರೀಯ ಅತ್ಯಾವಶ್ಯಕ ಔಷಗಳ ಸೂಚಿ’ಯಲ್ಲಿ ಇರುವ ಔಷಧಿಗಳ ಬೆಲೆ ನಿಗದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ. ಆದರೆ, ಸ್ಟೆಂಟ್‌ಗಳು ಇಲ್ಲಿವರೆಗೆ ಈ ಸೂಚಿಯಲ್ಲಿರಲಿಲ್ಲ. ಅದಕ್ಕಾಗಿ ತಯಾರಿಕಾ ವೆಚ್ಚ ಕಡಿಮೆ ಇದ್ದರೂ, ಅತ್ಯಂತ ದುಬಾರಿ ಬೆಲೆಗೆ ಅವುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈಗ ಅದನ್ನು ರಾಷ್ಟ್ರೀಯ ಆತ್ಯಾವಶ್ಯಕ ಔಷಧಿಗಳ ಸೂಚಿಯಲ್ಲಿ ಸೇರಿಸಲಾಗಿದೆ. ಅದರಂತೆ ಸಾಮಾನ್ಯ ಸ್ಟೆಂಟ್ ಗಳ ಬೆಲೆ 7,260 ರೂ. ಹಾಗೂ ವಿಶೇಷ ಸ್ಟೆಂಟ್‌ಗಳ ಬೆಲೆಯನ್ನು 29,600 ರೂ.
ನಿಗದಿಪಡಿಸಲಾಗಿದೆ. ದೇಶದಲ್ಲಿ ಸ್ಟೆಂಟ್‌ಗಳನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ ದರಗಳಲ್ಲೇ ಮಾರಾಟ ಮಾಡಬೇಕು. ಸ್ಟೆಂಟ್‌ಗಳ ಬೆಲೆ ಕಡಿಮೆ ಮಾಡಿರುವುದರಿಂದ ಅಂದಾಜು 5 ಸಾವಿರ ಕೋಟಿ ರೂ. ಉಳಿತಾಯ ಆಗಲಿದೆ ಎಂದು ಅನಂತಕುಮಾರ್ ತಿಳಿಸಿದರು.
ಕೇಂದ್ರ ಆರೋಗ್ಯ ಸಚಿವಾಲಯದ 2015ರ ವರದಿ ಪ್ರಕಾರ ದೇಶದಲ್ಲಿ 6.19 ಕೋಟಿ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕಳೆದ ವರ್ಷ 4 ಲಕ್ಷ ಸ್ಟೆಂಟ್ ಅಳವಡಿಸಲಾಗಿತ್ತು. ಈ ವರ್ಷ ಅದು 5 ಲಕ್ಷ ಆಗುವ ಸಾಧ್ಯತೆಯಿದೆ. ಸ್ಟೆಂಟ್‌ಗಳ ಕೃತಕ
ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟಲು ಸ್ಟೆಂಟ್ ತಯಾರಕರು ಕಳೆದ 3 ವರ್ಷದಲ್ಲಿ ಪ್ರತಿ ವರ್ಷ ಎಷ್ಟು ಸಂಖ್ಯೆಯಲ್ಲಿ ಸ್ಟೆಂಟ್‌ಗಳನ್ನು ತಯಾರು ಮಾಡಿದ್ದರು, ಮುಂದಿನ ಒಂದು ವರ್ಷ ಅಷ್ಟೇ ಪ್ರಮಾಣದ ಸ್ಟೆಂಟ್‌ಗಳನ್ನು ತಯಾರು ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಶೇ.15ರಷ್ಟು ದಂಡ ವಸೂಲಿ ಒಂದೊಮ್ಮೆ ಮಾರಾಟಗಾರರು ದುಬಾರಿ ಬೆಲೆಗೆ ಮಾರಾಟ ಮಾಡಿದರೆ, ಆ ದುಬಾರಿ ಬೆಲೆ ಮೇಲೆ ಶೇ.15ರಷ್ಟು ದಂಡ ವಿಧಿಸಿ ಹಣ ವಸೂಲಿ ಮಾಡಲಾಗುವುದು. ಜತೆಗೆ ಅಂತಹ ಮಾರಾಟಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಮಾರಾಟ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಅನಂತ ಕುಮಾರ್ ತಿಳಿಸಿದರು. “ಸ್ಟೆಂಟ್’ಗಳ ದರ ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿದ ಕೇಂದ್ರ ಸರ್ಕಾರದ ತೀರ್ಮಾನ ಐತಿಹಾಸಿಕ. ಈ ತೀರ್ಮಾನದಿಂದ ದೇಶದ 6.19 ಕೋಟಿ ಜನರಿಗೆ ಅನುಕೂಲ ಆಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.