ವಶಪಡಿಸಿಕೊಂಡಿದ್ದ ಡ್ರಗ್ಸ್ ನಾಶ ಮಾಡಲು ಕ್ರಮ ಕೈಗೊಳ್ಳಲಾಗಿದೆ : ಬೊಮ್ಮಾಯಿ
Team Udayavani, Jun 25, 2021, 4:06 PM IST
ಬೆಂಗಳೂರು : ಅಂತಾರಾಷ್ಟ್ರೀಯ ಡ್ರಗ್ಸ್ ಡೆ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ವಶಪಡಿಸಿಕೊಂಡಿದ್ದ ಡ್ರಗ್ಸ್ ನಾಶ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದುವರೆಗೂ ಇಷ್ಟು ಪ್ರಮಾಣದಲ್ಲಿ ಡ್ರಗ್ಸ್ ವಶವಾಗಿರಲಿಲ್ಲ. 59,23,1006 ರೂ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
2020 ರಲ್ಲಿ 4066 ಪ್ರಕರಣ ದಾಖಲಿಸಲಾಗಿದೆ. 5021 ಜನರನ್ನು ಎಂ ಡಿ ಪಿಎಸ್ ಆಕ್ಟ್ ಅಡಿ ಬಂಧನ ಮಾಡಲಾಗಿದೆ. ವಾರ್ ಅಗೇಸ್ಟ್ ಡ್ರಗ್ಸ್ ಸಂಕಲ್ಪ ಮುಂದುವರೆಸಲು ತೀರ್ಮಾನ ಮಾಡಲಾಗಿದೆ. ಈಗಾಗಲೇ ಎನ್ ಡಿ ಪಿಎಸ್ ನಿಯಮ ಬಿಗಿಗೊಳಿಸಲು ರಾಷ್ಟ್ರೀಯ ಕಾನೂನು ಶಾಲೆ ಸಂಪರ್ಕದಲ್ಲಿದ್ದೆವೆ.
ಮುಂದಿನ ಅಧಿವೇಶನದಲ್ಲಿ ಅನುಮತಿ ಪಡೆಯಲು ನಿರ್ಧಾರ ಮಾಡಲಾಗಿದೆ. ಪ್ರಿವೆಂಟಿವ್ ಇಲ್ಲಿಸಿಟಿವ್ ಅರೆಸ್ಟ್ ಕಾಯ್ದೆ ಅಡಿ ಬಂಧನ ಮಾಡಲಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಡ್ರಗ್ಸ್ ನಾಶಪಡಿಸುವ ಕಾರ್ಯ ಮಾಡಲಾಗಿದೆ. ನಾಳೆ ಬೆಳಿಗ್ಗೆ ದಾಬಸ್ ಪೇಟೆ ಬಳಿ ನಾಶ ಪಾಡುವ ಪ್ರಕ್ರಿಯೆ ನಡೆಯಲಿದೆ ಎಂದರು.
ಇದು ಕರ್ನಾಟಕ ಪೊಲೀಸ್ ಕಾರ್ಯ, ಅವರಿಗೆ ಶ್ಲಾಘನೆ. ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೆ ಚಾರ್ಜ್ ಸೀಟ್ ಹಾಕಲಾಗಿದೆ ಎಂದರು. ಇನ್ನು ಯೋಗೇಶ್ವರ್ ಪರೀಕ್ಷೆ ವಿಚಾರವಾಗಿ ಮಾತನಾಡಿದ ಅವರು, ನಮಗೆ ಯಾವುದೇ ಪರೀಕ್ಷೆ ಇರುವುದು ಗೊತ್ತಿಲ್ಲ. ನಾವು ಯಾವುದೇ ಪರೀಕ್ಷೆ ಬರೆದಿಲ್ಲ. ಕೊವಿಡ್ ಟೈಮ್ ನಲ್ಲಿ ಯಾವ ಪರೀಕ್ಷೆ ನಡೆಯುವುದಿಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.