ಕೊಹ್ಲಿಯ “ಬೆಂಗಳೂರು ಟೆಸ್ಟ್ ಗಲಾಟೆ’ ಶುದ್ಧ ಅವಿವೇಕತನದ್ದು: ಸ್ಮಿತ್
Team Udayavani, Oct 28, 2017, 6:20 AM IST
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಈ ವರ್ಷದ ಮಾರ್ಚ್ ತಿಂಗಳ ಬೆಂಗಳೂರು ಟೆಸ್ಟ್ ವೇಳೆ ನಡೆದಿದ್ದ ಡಿಆರ್‌ಎಸ್ ಗಲಾಟೆಗೆ ಮತ್ತೆ ಜೀವ ಬಂದಿದೆ. ಈ ಬಾರಿ ಅದನ್ನು ಕೆದಕಿದ್ದು ಈ ಪ್ರಕರಣದ ಕೇಂದ್ರಬಿಂದುವಾಗಿದ್ದ ಆಸೀಸ್ ನಾಯಕ ಸ್ಟೀವ್ ಸ್ಮಿತ್. ಪ್ರಕರಣದ ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಡೆದುಕೊಂಡ ರೀತಿ ಶುದ್ಧ ಅವಿವೇಕತನದ್ದು ಎಂದು ಸಂದರ್ಶನವೊಂದರಲ್ಲಿ ಸ್ಮಿತ್ ಹೇಳಿದ್ದಾರೆ.
ತಮ್ಮ ಪುಸ್ತಕ “ದ ಜರ್ನಿ’ಯಲ್ಲೂ ಇದನ್ನು ಪ್ರಸ್ತಾಪಿರುವ ಸ್ಮಿತ್, ಪ್ರಕರಣ ಎಷ್ಟು ಬೆಳೆಯಬಹುದು ಎಂದು ಮೊದಲು ನನಗೆ ಗೊತ್ತಾಗಿರಲಿಲ್ಲ. ಆಸ್ಟ್ರೇಲಿಯಾ ಆಟಗಾರರು ಎರಡು ಬಾರಿ ಮೋಸ ಮಾಡಿದ್ದಾರೆ ಎಂದು ಪಂದ್ಯ ಮುಗಿದ ಮೇಲೂ ಕೊಹ್ಲಿ ಆರೋಪ ಮಾಡಿದ್ದರು. ಆದರೆ ನಾವು ಅವರ ಆರೋಪದಂತೆ ನಡೆದುಕೊಂಡೇ ಇಲ್ಲ. ಈ ಬಗ್ಗೆ ತೀರ್ಪುಗಾರರಿಗೆ ದೂರು ನೀಡಿದ್ದೇನೆಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಆದರೆ ಅಂಪೈರ್ ಆಗಲೀ, ಪಂದ್ಯದ ರೆಫ್ರಿಯಾಗಲೀ ಈ ದೂರಿನ ಪ್ರಕಾರ ನಮ್ಮ ಜೊತೆ ಚರ್ಚಿಸಿಯೇ ಇಲ್ಲ. ಬಹುಶಃ ಪಂದ್ಯದ ಬಿಸಿಯನ್ನು ಹೆಚ್ಚಿಸಿ ತಮ್ಮ ಸಾಮರ್ಥ್ಯವನ್ನೂವೃದ್ಧಿಸಿಕೊಳ್ಳುವುದು ಕೊಹ್ಲಿ ತಂತ್ರಗಾರಿಕೆಯಿರಬಹುದು ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.
ಆಗಿದ್ದೇನು?: ಬೆಂಗಳೂರು ಟೆಸ್ಟ್ ವೇಳೆ ಬ್ಯಾಟ್ಸ್‌ಮನ್ ಸ್ಮಿತ್‌ಗೆ ಅಂಪೈರ್ ಎಲ್ಬಿ ಔಟ್ ಎಂದು ತೀರ್ಪು ನೀಡಿದ್ದರು. ತೀರ್ಪಿನ ಮರುಪರಿಶೀಲನೆಗೆ ಮನವಿ ಸಲ್ಲಿಸಲು ಸ್ಮಿತ್ ಅವರು ನಿಯಮಬಾಹಿರವಾಗಿ ತಮ್ಮ ಡ್ರೆಸ್ಸಿಂಗ್ ಕೊಠಡಿಯತ್ತ ಕೈಸನ್ನೆ ಮಾಡಿದ್ದರು ಎಂದು ಕೊಹ್ಲಿ ಆರೋಪಿಸಿದ್ದರು. ಆಗ ತಲೆ ಓಡದೆ ಹೀಗೆ ಮಾಡಿದ್ದೆ ಎಂದು ಹೇಳಿದ್ದ ಸ್ಮಿತ್ ಈಗ ರಾಗ ಬದಲಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.