ದೇಗುಲಗಳಲ್ಲಿ ಸರಣಿ ಕಳವು
Team Udayavani, Aug 27, 2019, 3:00 AM IST
ಮೇಲುಕೋಟೆ: ಮೇಲುಕೋಟೆಯಲ್ಲಿ ಭಾನು ವಾರ ರಾತ್ರಿ ಮೂರು ದೇವಾಲಯಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ರಾತ್ರಿ ವೇಳೆ ದೇವಾಲಯದ ಬಾಗಿಲುಗಳ ಚಿಲಕ ಮುರಿದು ಒಳನುಗ್ಗಿರುವ ಕಳ್ಳರು ಶ್ರೀ ಕಾಳಮ್ಮ ದೇವಾಲಯದ ಮೂರು ಚಿನ್ನದ ತಾಳಿ, ಶ್ರೀ ಶನೇಶ್ವರ ಸ್ವಾಮಿ ದೇಗುಲದಲ್ಲಿ 60 ಸಾವಿರ ರೂ.ನಗದು ಹಾಗೂ ಎರಡೂ ದೇಗುಲಗಳ ಹುಂಡಿ ಹಣ ಕದ್ದೊಯ್ದಿದ್ದಾರೆ. ಇದೇ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನೂ ಕಳವು ಮಾಡಿದ್ದಾರೆ.
ಪ್ರಮುಖ ರಸ್ತೆಯ ಪೊಲೀಸ್ ವಸತಿಗೃಹ ಪಕ್ಕದಲ್ಲೇ ಇರುವ ಶ್ರೀ ಕಾಳಮ್ಮ, ಶ್ರೀ ಮುಕ್ತಿನಾಥ ಹಾಗೂ ಶ್ರೀ ಶನೇಶ್ವರ ದೇವಾಲಯಗಳ ಬೀಗ ಒಡೆದಿರುವ ಕಳ್ಳರು ಹುಂಡಿ ಹಣ ಹಾಗೂ ಸಣ್ಣಪುಟ್ಟ ಒಡವೆ ದೋಚಿದ್ದಾರೆ. ಕಡೆಯ ಶ್ರಾವಣ ಶನಿವಾರದಂದು ದೇವಾಲಯಗಳಿಗೆ ಹೆಚ್ಚಿನ ಭಕ್ತರು ಬಂದಿದ್ದನ್ನೇ ಗುರಿಯಾಗಿಸಿಕೊಂಡು, ಮೂರು ದೇಗುಲಗಳ ಹುಂಡಿ ದೋಚಿದ್ದಾರೆ. ಹುಂಡಿಯಲ್ಲಿ ನೋಟುಗಳನ್ನು ಮಾತ್ರ ಕದ್ದೊಯ್ದಿರುವ ಕಳ್ಳರು ಚಿಲ್ಲರೆಗಳನ್ನು ಪಕ್ಕದಲ್ಲೇ ಬಿಸಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.