ಸಿಎಂ ಅಮೆರಿಕದಲ್ಲಿದ್ದಾಗ ರೂಪಿಸಿದ ಕಾರ್ಯತಂತ್ರ?
Team Udayavani, Jul 24, 2019, 3:01 AM IST
ಬೆಂಗಳೂರು: ಅತ್ತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಖಾಸಗಿಯಾಗಿ ಅಮೆರಿಕ ಪ್ರವಾಸಕ್ಕೆ ಹೋದಾಗಲೇ ಇತ್ತ ಸರ್ಕಾರ ಪತನದ ಮಾಸ್ಟರ್ ಪ್ಲ್ರಾನ್‌ನ ನೀಲನಕ್ಷೆ ತಯಾರಾಗಿ ಹದಿನಾರು ದಿನಗಳಲ್ಲಿ ನಾನಾ ಸ್ವರೂಪ ಪಡೆದು ಅಂತಿಮವಾಗಿ ಪತನದ ಹಾದಿ ಹಿಡಿಯಿತು. ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಅಧಿಕಾರಕ್ಕೆ ಬರಲು ಆರು ಬಾರಿ ಹರಸಾಹಸ ಪಟ್ಟು ವಿಫಲವಾದ ಬಿಜೆಪಿ, ಏಳನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ “ಛಲ’ಗೆದ್ದಿದೆ.
ಆನಂದ್‌ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯನ್ನು ನಿರ್ಲಕ್ಷ್ಯ ಮಾಡಿದ ದೋಸ್ತಿ ನಾಯಕರಿಗೆ ನಂತರದ ಶಾಸಕರ ರಾಜೀನಾಮೆ ಪರ್ವ ಆಘಾತವುಂಟು ಮಾಡಿ “ಸಂಧಾನ’ಕ್ಕೆ ಮುಂದಾದರೂ ಪರಿಸ್ಥಿತಿ ಕೈ ಮೀರಿ ಕೈ ಚೆಲ್ಲಿ ಕುಳಿತುಕೊಳ್ಳುವಂತಾಯಿತು. ಒಂದು ಹಂತದಲ್ಲಿ ಹದಿನೈದು ಶಾಸಕರು ತಂಡವಾಗಿ ರಾಜೀನಾಮೆ ನೀಡಿದಾಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪರೋಕ್ಷ ಕುಮ್ಮಕ್ಕು ಇರಬಹುದು ಎಂಬ ಆರೋಪ ಕೇಳಿ ಬಂದಿತಾದರೂ ಪರಮಾಪ್ತ ಶಾಸಕರು ಅವರಿಗೂ ಚಳ್ಳೆಹಣ್ಣು ತಿನ್ನಿಸಿ ಕಾಂಗ್ರೆಸ್-ಜೆಡಿಎಸ್ ನಾಯಕರ ಎಲ್ಲ ತಂತ್ರಗಾರಿಕೆ ಉಲ್ಟಾ ಆಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟಾದರೂ ಸರ್ಕಾರದ ಪತನದಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರ ಕುಮ್ಮಕ್ಕು ಇರುವ ಶಂಕೆಯೂ ಇದೆ.
ಮುಖ್ಯಮಂತ್ರಿಯವರು ಅಮೆರಿಕದಲ್ಲಿದ್ದಾಗಲೇ ಸರ್ಕಾರಕ್ಕೆ ಕಂಟಕದ ಬೆಳವಣಿಗೆಗಳು ಆಗುತ್ತಿರುವ ಬಗ್ಗೆ ಗುಪ್ತದಳ ಮೂಲಕ ಮಾಹಿತಿ ಬಂದಿತ್ತು. ಸಚಿವ ಸಾ.ರಾ.ಮಹೇಶ್ ಈ ಕುರಿತು ಸಿಎಂಗೆ ಹೇಳಿ ವಾಪಸ್ ಹೋಗೋಣ ಎಂದು ಒತ್ತಾಯಿಸಿದ್ದರು. ಆದರೆ, ಮುಖ್ಯಮಂತ್ರಿಯವರು ಬೇಡ, ನಾವು ಇಲ್ಲಿ ಬಂದಿರುವ ಕೆಲಸ ಮುಗಿಸಿ ಹೋಗೋಣ. ಹದಿನಾಲ್ಕು ತಿಂಗಳಿನಿಂದ ಸಾಕಷ್ಟು ಬಾರಿ ಬಿಜೆಪಿಯವರು ಇಂತಹ ಪ್ರಯತ್ನ ಮಾಡಿದ್ದಾರೆ. ಈ ಬಾರಿಯೂ ಅಷ್ಟೇ ಏನೂ ಆಗಲ್ಲ ಎಂದಿದ್ದರು. ಅದೇ ವಿಶ್ವಾಸದಲ್ಲೇ ಇದ್ದರು. ಆದರೆ, ಅಮೆರಿಕದಿಂದ ವಾಪಸ್ ಆದಾಗಲೇ ಅವರಿಗೆ ವಾಸ್ತವಾಂಶದ ಅರಿವು ಆಗಿದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.